Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ರಷ್ಯಾ ಪ್ರಾಂತ್ಯಗಳ ಗೌರ್ನರ್ ಗಳೊಂದಿಗೆ ಪ್ರಧಾನಿ ಸಂವಾದ

ರಷ್ಯಾ ಪ್ರಾಂತ್ಯಗಳ ಗೌರ್ನರ್ ಗಳೊಂದಿಗೆ ಪ್ರಧಾನಿ ಸಂವಾದ


ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರಿಂದು ರಷ್ಯಾದ ವಿವಿಧ ಪ್ರಾಂತ್ಯಗಳ ಹದಿನಾರು ಗೌರ್ನರ್ ಗಳನ್ನು ಭೇಟಿ ಮಾಡಿ, ಸಂವಾದ ನಡೆಸಿದರು.

ದ್ವಿಪಕ್ಷೀಯ ಬಾಂಧವ್ಯ ಉತ್ತಮಪಡಿಸಲು ಎರಡೂ ದೇಶಗಳ ಪ್ರಾಂತ್ಯ ಮತ್ತು ಪ್ರದೇಶಗಳ ನಡುವಿನ ಬಾಂಧವ್ಯವೂ ಮಹತ್ವದ ಭಾಗವಾಗಿದೆ ಎಂಬ ನಿಲುವನ್ನು ಪ್ರಧಾನಮಂತ್ರಿಯವರು ಪುನರುಚ್ಚರಿಸಿದರು. ತಾವು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ 2001ರಲ್ಲಿ ರಷ್ಯಾದ ಅಸ್ಟ್ರಖಾನ್ ಪ್ರಾಂತ್ಯಕ್ಕೆ ಭೇಟಿ ನೀಡಿದ್ದನ್ನು ಸ್ಮರಿಸಿದರು.

ಭಾರತ ಮತ್ತು ತಮ್ಮ ಪ್ರಾಂತ್ಯಗಳ ನಡುವೆ ವಾಣಿಜ್ಯ ಬಾಂಧವ್ಯ, ಜನರೊಂದಿಗಿನ ಸಂಪರ್ಕ ಹಾಗೂ ಸಂವಾದ ಹೆಚ್ಚಿಳದ ಅವಕಾಶಗಳ ಕುರಿತಂತೆ ಗೌರ್ನರ್ ಗಳು ವಿವರಿಸಿದರು.

ಇಂದು ನಡೆದ ಸಂವಾದದಲ್ಲಿ ಪಾಲ್ಗೊಂಡ ಗೌರ್ನರ್ ಗಳಲ್ಲಿ ಅರಾಖಾನ್ಕ್ಲಾಸ್ಟ್ ಒಬ್ಲಾಸ್ಟ್,ಅಸ್ಟ್ರಾಖಾನ್ ಒಬ್ಲಾಸ್ಟ್, ಇರ್ಕುಟ್ಸ್ಕ್ ಪ್ರದೇಶ, ಮಾಸ್ಕೋ ಪ್ರಾಂತ್ಯ, ಪ್ರಿಮೊರಿ ಟೆರಿಟರಿ,ಕಲ್ಮಿಕಿಯಾ ಗಣರಾಜ್ಯ, ಟಾಟರ್ಸ್ತಾನ್, ಸೇಂಟ್ ಪೀಟರ್ಸ್ಬರ್ಗ್, ಸಖಾಲಿನ್ ಒಬ್ಲಾಸ್ಟ್,ಸ್ವರ್ ಡ್ಲೋವ್ಸ್ಕ್ ಒಬ್ಲಾಸ್ಟ್, ಟಾಲ್ಸ್ಕ್ ಒಬ್ಲಾಸ್ಟ್, ತುಲಾ ಒಬ್ಲಾಸ್ಟ್, ಉಲಿಯಾನೋವ್ಸ್ಕ್ ಒಬ್ಲಾಸ್ಟ್, ಖಬೊರೊಸ್ವೇರಿ ಕ್ರೇ, ಚೆಲ್ಯಾಬಿನ್ಸ್ಕ್ ಒಬ್ಲಾಸ್ಟ್ ಮತ್ತು ಯಾರೊಸ್ಲಾವ್ಬ್ ಒಬ್ಲಾಸ್ಟ್ ಗೌರ್ನರುಗಳು ಸೇರಿದ್ದರು.

***

AKT/SH