ರಷ್ಯಾ ಉಪ ಪ್ರಧಾನಮಂತ್ರಿ ಶ್ರೀ ಡಿಮಿಟ್ರಿ ರೊಗೋಜಿನ್ ಅವರಿಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು.
ಅವರು ಅಧ್ಯಕ್ಷ ಪುಟಿನ್ ಅವರ ಶುಭಾಶಯಗಳನ್ನು ಪ್ರಧಾನಿಯವರಿಗೆ ತಿಳಿಸಿದರು ಮತ್ತು ಭಾರತ ಮತ್ತು ರಷ್ಯಾ ನಡುವೆ ನಡೆದಿರುವ ಯೋಜನೆಗಳ ಪ್ರಗತಿಯ ಬಗ್ಗೆ ಅವರು ವಿವರಿಸಿದರು.
ರಷ್ಯಾ ಭಾರತದ ನೈಜ ಮತ್ತು ವಿಶ್ವಾಸಾರ್ಹ ಮಿತ್ರ ರಾಷ್ಟ್ರವಾಗಿದೆ ಎಂದ ಪ್ರಧಾನಿ, ಅಧ್ಯಕ್ಷ ಪುಟಿನ್ ಅವರೊಂದಿಗೆ ಎಲ್ಲ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಕಾರ್ಯಕ್ರಮಗಳನ್ನು ಮತ್ತಷ್ಟು ಆಳಗೊಳಿಸುವ ಹಾಗೂ ವಿಸ್ತರಿಸುವ ಮತ್ತು ಬಲಪಡಿಸಲು ಬದ್ಧವಾಗಿರುವುದಾಗಿ ತಿಳಿಸಿದರು.
ತಾಷ್ಕೆಂಟ್ ನಲ್ಲಿ ಕಲೆದ ಜೂನ್ ತಿಂಗಳಿನಲ್ಲಿ ನಡೆದ ಇತ್ತೀಚಿನ ಭೇಟಿ ಮತ್ತು ಈ ತಿಂಗಳು ಕೂಡಂಕುಲಂ ಪರಮಾಣು ವಿದ್ಯುತ್ ಸ್ಥಾವರದ ಘಟಕ 1ರ ಸಮರ್ಪಣೆಯ ವೇಳೆ ವಿಡಿಯೋ ಸಂಪರ್ಕದ ಮೂಲಕ ನಡೆದ ಸಂವಾದವನ್ನು ಅವರು ಸ್ಮರಿಸಿದರು. ಅಧ್ಯಕ್ಷ ಪುಟಿನ್ ಅವರ ಭಾರತ ಭೇಟಿಯನ್ನು ತಾವು ಕಾತರದಿಂದ ನಿರೀಕ್ಷಿಸುತ್ತಿರುವುದಾಗಿಯೂ ಪ್ರಧಾನಿ ತಿಳಿಸಿದರು.
AKT/SH
Discussed several aspects of India-Russia ties in my meeting with Deputy PM Dmitry Rogozin. https://t.co/2jPuFLmKHu
— Narendra Modi (@narendramodi) August 20, 2016