ರಷ್ಯದ ಉಪ ಪ್ರಧಾನಮಂತ್ರಿ ಶ್ರೀ. ಡಿಮಿಟ್ರಿ ರೊಗೋಜಿನ್ ಅವರಿಂದು ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು. ಶ್ರೀ. ಡಿಮಿಟ್ರಿ ರೊಗೋಜಿನ್ ಅವರು ಭಾರತದ ವಿದೇಶಾಂಗ ವ್ಯವಹಾರಗಳ ಖಾತೆ ಸಚಿವರು ಸಹ ಅಧ್ಯಕ್ಷತೆ ವಹಿಸಲಿರುವ ಭಾರತ-ರಷ್ಯ ಅಂತರ ಸರ್ಕಾರೀಯ ಆಯೋಗದ ಸಭೆಯಲ್ಲಿ ಪಾಲ್ಗೊಳ್ಳಲು ಭಾರತ ಭೇಟಿಯಲ್ಲಿದ್ದಾರೆ.
ಭಾರತ ಮತ್ತು ರಷ್ಯಾ ನಡುವಿನ ದ್ವಿಪಕ್ಷೀಯ ಸಹಕಾರ ಧನಾತ್ಮಕವಾಗಿ ಸರ್ವಾಂಗೀಣ ಪ್ರಗತಿ ಸಾಧಿಸಿರುವುದಕ್ಕೆ ಪ್ರಧಾನಮಂತ್ರಿಯವರು ಸಂತೃಪ್ತಿ ವ್ಯಕ್ತಪಡಿಸಿದರು. ಎರಡೂ ದೇಶಗಳು ಈ ವರ್ಷ ತಮ್ಮ ರಾಜತಾಂತ್ರಿಕ ಬಾಂಧವ್ಯದ 70ನೇ ವಾರ್ಷಿಕೋತ್ಸವ ಆಚರಿಸುತ್ತಿದ್ದು, ಎರಡೂ ಕಡೆಯಿಂದ ಆಗಾಗ್ಗೆ ಉನ್ನತ ಮಟ್ಟದ ವಿನಿಮಯ ನಡೆಯುತ್ತಿರುವುದನ್ನು ಪ್ರಶಂಸಿಸಿದರು.
***
AKT/NT
Mr. Dmitry Rogozin, the Deputy Prime Minister of Russia called on Prime Minister @narendramodi today. https://t.co/eVrSEjfL6l
— PMO India (@PMOIndia) May 10, 2017
Further strengthening ties with Russia. pic.twitter.com/iHIIyxNjaw
— PMO India (@PMOIndia) May 11, 2017