Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ರಕ್ಷಣಾ ಸೇವೆಗಳ ಸಿಬ್ಬಂದಿ ಕಾಲೇಜು, ವೆಲ್ಲಿಂಗ್ಟನ್ ಮತ್ತು ರಕ್ಷಣಾ ಸೇವೆಗಳ ಕಮಾಂಡ್ ಮತ್ತು ಸಿಬ್ಬಂದಿ ಕಾಲೇಜು, ಮಿರ್ ಪುರ, ಢಾಕಾ ನಡುವೆ ಸೇನಾ ಶಿಕ್ಷಣದ ಸಹಕಾರಕ್ಕಾಗಿ ತಿಳಿವಳಿಕೆ ಒಪ್ಪಂದಕ್ಕೆ ಸಂಪುಟದ ಅನುಮೋದನೆ


ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ರಕ್ಷಣಾ ಸೇವೆಗಳ ಸಿಬ್ಬಂದಿ ಕಾಲೇಜು, ವೆಲ್ಲಿಂಗ್ಟನ್ ಮತ್ತು ರಕ್ಷಣಾ ಸೇವೆಗಳ ಕಮಾಂಡ್ ಮತ್ತು ಸಿಬ್ಬಂದಿ ಕಾಲೇಜು, ಮಿರ್ ಪುರ, ಢಾಕಾ ನಡುವೆ ವ್ಯೂಹಾತ್ಮಕ ಮತ್ತು ಕಾರ್ಯಾಚರಣೆ ಅಧ್ಯಯನ ಕ್ಷೇತ್ರದಲ್ಲಿನ ಸೇನಾ ಶಿಕ್ಷಣದ ಸಹಕಾರಕ್ಕಾಗಿ ತಿಳಿವಳಿಕೆ ಒಪ್ಪಂದಕ್ಕೆ ತನ್ನ ಪೂರ್ವಾನ್ವಯ ಅನುಮೋದನೆ ನೀಡಿದೆ.

ಈ ತಿಳಿವಳಿಕೆ ಒಪ್ಪಂದವು ವ್ಯೂಹಾತ್ಮಕ ಮತ್ತು ಕಾರ್ಯಾಚರಣೆ ಅಧ್ಯಯನಕ್ಕೆ ಸಂಬಂಧಿಸಿದ ಸೇನಾ ಶಿಕ್ಷಣ ಕ್ಷೇತ್ರದಲ್ಲಿ ಹೆಚ್ಚಿನ ಸಹಕಾರದ ಚೌಕಟ್ಟು ಸ್ಥಾಪಿಸಲು ಮತ್ತು ಎರಡೂ ದೇಶಗಳ ನಡುವೆ ದೀರ್ಘ ಕಾಲೀನ ಮತ್ತು ನಿಕಟ ಸಹಕಾರಕ್ಕೆ ಅವಕಾಶ ನೀಡುತ್ತದೆ.

ಎರಡೂ ರಾಷ್ಟ್ರಗಳ ನಡುವಿನ ಭೌಗೋಳಿಕ ಮತ್ತು ಸಾಂಸ್ಕೃತಿಕ ನಿಕಟತೆಯಲ್ಲಿ ಹಲವು ಸಮಾನ ಸವಾಲುಗಳು ಅಂದರೆ ಭಯೋತ್ಪಾದನೆಯ ವಿರುದ್ಧದ ಹೋರಾಟಕ್ಕೆ ಜಂಟಿ ಕಾರ್ಯಾಚರಣೆಯೂ ಸೇರಿದೆ. ಹೀಗಾಗಿ ಸಶಸ್ತ್ರ ಪಡೆಗಳ ನಡುವೆ ಉತ್ತಮ ಸಮನ್ವಯತೆ ಮತ್ತು ಸಹಕಾರದ ಅಗತ್ಯವಿದೆ. ಈ ಜಂಟಿ ತರಬೇತಿ ಮತ್ತು ಸಮರಾಭ್ಯಾಸವು ಸಶಸ್ತ್ರ ಪಡೆಗಳ ಸಾಮರ್ಥ್ಯ ಸಮ್ಮಿತಿ ತರಲು ಸಹಕಾರಿಯಾಗಿದೆ ಮತ್ತು ಸಮಾನ ಭೀತಿ ಮತ್ತು ಸವಾಲುಗಳನ್ನು ಇನ್ನೂ ಹೆಚ್ಚು ಉತ್ತಮವಾಗಿ ನಿಭಾಯಿಸಲು ಮತ್ತು ಹತ್ತಿಕ್ಕಲು ಕೊಡುಗೆ ನೀಡುತ್ತದೆ. ಭಾರತ ಮತ್ತು ಬಾಂಗ್ಲಾದೇಶಗಳ ನಡುವೆ ತಂತ್ರಜ್ಞಾನ ಮತ್ತು ಮಾಹಿತಿಯ ವಿನಿಮಯದ ಮೂಲಕ ಈ ತಿಳಿವಳಿಕೆ ಒಪ್ಪಂದವು ಸಾರ್ವಜನಿಕ ಹೊಣೆಗಾರಿಕೆಯನ್ನು ಹೆಚ್ಚಿಸುತ್ತದೆ.

*****

AKT/VBA/SH