ರಕ್ಷಣಾ ವಲಯಕ್ಕೆ ಇದೊಂದು ಸಕಾರಾತ್ಮಕ ಬೆಳವಣಿಗೆ ಎಂದ ಪ್ರಧಾನಿ
ಈ ಕುರಿತು ಟ್ವೀಟ್ ಮಾಡಿರುವ ಕೇಂದ್ರ ರಕ್ಷಣಾ ಸಚಿವ ಶ್ರೀ ರಾಜನಾಥ್ ಸಿಂಗ್ ಅವರು, ವ್ಯೂಹಾತ್ಮಕವಾಗಿ ಮಹತ್ವದ 928 ಲೈನ್ ರೀಪ್ಲೇಸ್ಮೆಂಟ್ ಯುನಿಟ್ (ಎಲ್ ಆರ್ ಯು) / ಸಬ್ ಸಿಸ್ಟಮ್ಸ್ / ಬಿಡಿಭಾಗಗಳು ಮತ್ತು ಘಟಕಗಳ 4 ನೇ ಸಕಾರಾತ್ಮಕ ಸ್ವದೇಶಿೀಕರಣ ಪಟ್ಟಿ (ಪಿಐಎಲ್) ಗೆ ಅನುಮೋದನೆ ನೀಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಈ ಪಟ್ಟಿಯಲ್ಲಿ 715 ಕೋಟಿ ರೂ.ಗಳ ಆಮದು ಬದಲಿ ಮೌಲ್ಯದ ಉನ್ನತ ಮಟ್ಟದ ವಸ್ತುಗಳು ಮತ್ತು ಬಿಡಿಭಾಗಗಳು ಸೇರಿವೆ.
ಶ್ರೀ ರಾಜನಾಥ್ ಸಿಂಗ್ ಅವರ ಟ್ವೀಟ್ ಗೆ ಪ್ರತಿಕ್ರಿಯಿಸಿದ ಪ್ರಧಾನಮಂತ್ರಿಯವರು;
“ರಕ್ಷಣಾ ಕ್ಷೇತ್ರಕ್ಕೆ ಇದು ಸಕಾರಾತ್ಮಕ ಬೆಳವಣಿಗೆ. ಇದು ಆತ್ಮನಿರ್ಭರ ಭಾರತದತ್ತ ನಮ್ಮ ಸಂಕಲ್ಪಕ್ಕೆ ಬಲ ನೀಡುತ್ತದೆ ಮತ್ತು ಸ್ಥಳೀಯ ಉದ್ಯಮಶೀಲ ಪ್ರತಿಭೆಗಳನ್ನು ಪ್ರೋತ್ಸಾಹಿಸುತ್ತದೆ”.
ಹೆಚ್ಚಿನ ವಿವರಗಳನ್ನು ಇಲ್ಲಿ ಕಾಣಬಹುದು;
A positive development for the defence sector. This will add strength to our resolve towards an Aatmanirbhar Bharat and encourage local entrepreneurial talent. https://t.co/J7rVWXvdvy
— Narendra Modi (@narendramodi) May 16, 2023