Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ರಕ್ಷಣಾ ಸಚಿವಾಲಯವು ಭಾರತೀಯ ಸೇನೆಗೆ ಸುಧಾರಿತ ಆಕಾಶ್ ವೆಪನ್ ಸಿಸ್ಟಮ್ ಹಾಗೂ 12 ‘ಸ್ವಾತಿ’ (ವಿಮಾನಗಳು) ವೆಪನ್ ಲೊಕೇಟಿಂಗ್ ರಾಡಾರ್‌ಗಳನ್ನು 9,100 ಕೋಟಿ ರೂಪಾಯಿ ವೆಚ್ಚದಲ್ಲಿ ಖರೀದಿ ಒಪ್ಪಂದಗಳಿಗೆ ಸಹಿ ಹಾಕಿದೆ


ಇದು ಸ್ವಾಗತಾರ್ಹ ಬೆಳವಣಿಗೆಯಾಗಿದ್ದು, ಸ್ವಾವಲಂಬನೆ ಸಾಧನೆಗೆ ಸಹಕಾರಿಯಾಗುವ ಜತೆಗೆ ಎಂಎಸ್ಎಂಇ ವಲಯಕ್ಕೆ ನೆರವಾಗಲಿದೆ ಎಂದು ಪ್ರಧಾನ ಮಂತ್ರಿಗಳ ಶ್ಲಾಘನೆ

ರಕ್ಷಣಾ ಸಚಿವರ ಕಚೇರಿಯು ಮಾರ್ಚ್ 30ರಂದು ಮಹತ್ವದ ಮಾಹಿತಿಯೊಂದನ್ನುಟ್ವೀಟ್ ಮೂಲಕ ಹಂಚಿಕೊಂಡಿದೆ.

ರಕ್ಷಣಾ ಸಚಿವಾಲಯವು ಭಾರತೀಯ ಸೇನೆಗೆ ಸುಧಾರಿತ ಆಕಾಶ್ ವೆಪನ್ ಸಿಸ್ಟಮ್ ಹಾಗೂ  12  ವೆಪನ್ ಲೊಕೇಟಿಂಗ್ ರಾಡಾರ್‌ಗಳನ್ನುಅಂದರೆ ಡಬ್ಲ್ಯೂಎಲ್ಆರ್ ‘ಸ್ವಾತಿ’ (ವಿಮಾನಗಳು)
9,100 ಕೋಟಿ ರೂಪಾಯಿ ವೆಚ್ಚದಲ್ಲಿ ಖರೀದಿ ಒಪ್ಪಂದಗಳಿಗೆ ಸಹಿ ಹಾಕಿದೆ ಎಂದು ಘೋಷಿಸಿದೆ.

ಇದಕ್ಕೆ ಟ್ವೀಟ್ ಮೂಲಕ ಪ್ರತಿಕ್ರಿಯಿಸಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು, ‘ಇದೊಂದು ಸ್ವಾಗತಾರ್ಹ ಬೆಳವಣಿಗೆ. ಇದು ಸ್ವಾವಲಂಬನೆಗೆ ಸಹಕಾರಿಯಾಗಲಿದ್ದು, ಮುಖ್ಯವಾಗಿ ಎಂಎಸ್ಎಂಇ ವಲಯಕ್ಕೆ ಹೆಚ್ಚಿನ ನೆರವಾಗಲಿದೆ,’ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.