ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಹಾಲಿ ಚಾಲ್ತಿಯಲ್ಲಿರುವ‘ರಕ್ಷಣಾ ಸಾರ್ವಜನಿಕ ವಲಯದ ಉದ್ದಿಮೆಗಳಿಂದ (ಡಿಪಿಎಸ್.ಯು.ಗಳು) ಜಂಟಿ ಉದ್ಯಮ ಸ್ಥಾಪನೆಗಾಗಿ ಮಾರ್ಗಸೂಚಿಗಳು’ ಅನ್ನು ರದ್ದುಗೊಳಿಸಲು ತನ್ನ ಅನುಮೋದನೆ ನೀಡಿದೆ. 2012ರ ಫೆಬ್ರವರಿಯಲ್ಲಿ ಅಧಿಸೂಚನೆಗೊಳಿಸಲಾಗಿದ್ದ ಈ ಮಾರ್ಗಸೂಚಿಗಳು ಡಿಪಿಎಸ್.ಯುಗಳ ಪ್ರತ್ಯೇಕ ಜೆವಿಗಳಿಗೆ ಅಗತ್ಯವಿರುವುದಿಲ್ಲ. ಸಾರ್ವಜನಿಕ ಉದ್ದಿಮೆ (ಡಿಪಿಇ) ಮತ್ತು ಹಣಕಾಸು ಸಚಿವಾಲಯ (ಎಂ.ಓ.ಎಫ್.) ಏಕರೂಪವಾಗಿ ಎಲ್ಲ ಸಾರ್ವಜನಿಕ ವಲಯದ ಉದ್ದಿಮೆ (ಸಿಪಿ.ಎಸ್.ಯು.ಗಳಿಗೂ) ಗಳಿಗೆ ಅನ್ವಯವಾಗುವಂತೆ ಕಾಲ ಕಾಲಕ್ಕೆ ಹೊರಡಿಸುವ ಮಾರ್ಗಸೂಚಿಗಳು ಈಗ ಡಿ.ಪಿ.ಎಸ್.ಯು.ಗಳಿಗೂ ಜೆವಿ ಕಂಪನಿಯನ್ನು ಸ್ಥಾಪಿಸಲು ಅನ್ವಯಿಸುತ್ತವೆ. ಇದು ಈ ವಲಯದಲ್ಲಿ ದೇಶೀಯ / ಸ್ವಾವಲಂಬನೆ ಗುರಿ ಸಾಧನೆಗೆ ಸಹಾಯವಾಗುತ್ತದೆ.
ಹಾಲಿ ಇರುವ ಜೆವಿ ಮಾರ್ಗಸೂಚಿಗಳನ್ನು ರದ್ದು ಮಾಡಿರುವುದು ಡಿಪಿಎಸ್.ಯು. ಮತ್ತು ಖಾಸಗಿ ವಲಯದ ನಡುವೆ ಸಮಾನ ಮತ್ತು ನ್ಯಾಯಸಮ್ಮತವಾದ ಅವಕಾಶಗಳನ್ನು ಕಲ್ಪಿಸುತ್ತದೆ.
ಇದು ಡಿಪಿಎಸ್.ಯು.ಗಳಿಗೆ ರಕ್ಷಣೆಯಲ್ಲಿ ಸ್ವಾವಲಂಬನೆ ಹೆಚ್ಚಿಸಿಕೊಂಡು ಹೊಸ ಮಾದರಿಯಲ್ಲಿ ಪಾಲುದಾರಿಕೆ ರೂಪಿಸಲು ಮತ್ತು ಡಿಪಿಎಸ್.ಯು.ಗಳಿಗೆ ಜೆ.ವಿ. ಸ್ಥಾಪನೆಯ ಪ್ರಕ್ರಿಯೆಯನ್ನು ಸಮರ್ಥವಾಗಿ ನಿರ್ವಹಿಸುವ ಖಾತ್ರಿಯ ಕುರಿತಂತೆ ಮತ್ತು ಆ ಮೂಲಕ ರಾಷ್ಟ್ರೀಯ ಭದ್ರತೆಯ ಹಿತದೃಷ್ಟಿಯಿಂದ ಉತ್ತಮ ಫಲಿತಾಂಶವನ್ನು ಪಡೆಯಲು ಉನ್ನತೀಕರಿಸಿದ ಹೊಣೆಗಾರಿಕೆ/ಸ್ವಾಯತ್ತತೆ ಒದಗಿಸುತ್ತದೆ.
ಎಲ್ಲ ಒಂಬತ್ತು ಡಿಪಿಎಸ್.ಯುಗಳು ಅಂದರೆ, ಮೆಜಗನ್ ಡಾಕ್ ಲಿಮಿಟೆಡ್, ಗೋವಾ ಶಿಪ್ ಯಾರ್ಡ್ ಲಿಮಿಟೆಡ್, ಗಾರ್ಡನ್ ರೀಚ್ ಶಿಪ್ ಬಿಲ್ಡರ್ಸ್ ಮತ್ತು ಇಂಜಿನಿಯರ್ಸ್ ಲಿಮಿಟೆಡ್, ಹಿಂದೂಸ್ತಾನ್ ಶಿಪ್ ಯಾರ್ಡ್ ಲಿಮಿಟೆಡ್, ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್,ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್, ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್, ಭಾರತ್ ಡೈನಮಿಕ್ಸ್ ಲಿಮಿಟೆಡ್ ಮತ್ತು ಮಿಶ್ರಾ ಧಾತು ನಿಗಮ ನಿಯಮಿತಗಳಿಗೆ ಈ ನಿರ್ಧಾರದಿಂದ ಲಾಭವಾಗಲಿದೆ.
ಡಿ.ಪಿ.ಎಸ್.ಯು.ಗಳ ಜೆ.ವಿ. ಮಾರ್ಗಸೂಚಿಗಳ ಕಾರ್ಯಾನುಷ್ಠಾನದಲ್ಲಿ ಹೊರಹೊಮ್ಮಿದ ಸಮಸ್ಯೆಗಳ ಹಿನ್ನೆಲೆಯಲ್ಲಿ ಈ ನಿರ್ಧಾರಕ್ಕೆಬರಲಾಗಿದೆ. ರಕ್ಷಣಾ ಉತ್ಪಾದನಾ ಇಲಾಖೆಯು ರಕ್ಷಣಾ ವಲಯದಲ್ಲಿ ಖಾಸಗಿ ಕೈಗಾರಿಕೆಗಳ ಹೆಚ್ಚಿನ ಪಾಲ್ಗೊಳ್ಳುವಿಕೆಯ ನಿರ್ಧಾರ ಕೈಗೊಂಡಿದೆ ಮತ್ತು ರಕ್ಷಣಾ ಸಾಮಗ್ರಿಗಳ ದಾಸ್ತಾನಿನ ಪರಿಸರ ವ್ಯವಸ್ಥೆಯಲ್ಲಿ ಪರಿವರ್ತನೆಗಳು ನಡೆಯುತ್ತಿವೆ, ಹೀಗಾಗಿ ಇನ್ನು ಮುಂದೆ ಡಿಪಿಎಸ್.ಯು.ಗಳಿಗೆ ಪ್ರತ್ಯೇಕ ಜೆವಿ ಮಾರ್ಗಸೂಚಿಗಳ ಅಗತ್ಯ ಕಂಡುಬರುವುದಿಲ್ಲ.
ದೇಶೀಯವಾದ ಉತ್ಪಾದನೆಗೆ / ಮೇಕ್ ಇನ್ ಇಂಡಿಯಾಗೆ ಆದ್ಯತೆ ನೀಡಿರುವ ಹಿನ್ನೆಲೆಯಲ್ಲಿ ಬದಲಾಗುತ್ತಿರುವ ಸನ್ನಿವೇಶದಲ್ಲಿ, ಅನೇಕ ಮಾರ್ಗಸೂಚಿಗಳನ್ನು ಹೊಂದುವುದು ಪರಿಸರದಲ್ಲಿ ಅಸಾಂಗತ್ಯ ಮತ್ತು ದ್ವಂದ್ವಕ್ಕೆ ಕಾರಣವಾಗುತ್ತದೆ ಎಂದು ಅಭಿಪ್ರಾಯಪಡಲಾಗಿದೆ.
ಹಿನ್ನೆಲೆ:
ವಿನ್ಯಾಸ ಮತ್ತು ಅಭಿವೃದ್ಧಿ ಸಾಮರ್ಥ್ಯವನ್ನು ಒಳಗೊಂಡಂತೆ ಶಿಫಾರಸು ಮಾಡಲಾದ ಎಲ್ಲ ಕಾರ್ಯಸಾಧ್ಯ ನಿಲುವುಗಳು ಅಂದರೆ ರಕ್ಷಣಾ ಉತ್ಪಾದನೆಯಲ್ಲಿ ಅಪೇಕ್ಷಿತ ಸ್ವಾವಲಂಬನೆ ಸಾಧಿಸಲು ಜೆವಿಗಳನ್ನು ಕೈಗೊಳ್ಳುವುದೂ ಸೇರಿದಂತೆ ರಕ್ಷಣಾ ಉತ್ಪಾದನೆಯಲ್ಲಿ ಗಣನೀಯ ಸ್ವಾವಲಂಬನೆ ಸಾಧಿಸುವ ಉದ್ದೇಶದಿಂದ 2011ರ ಜನವರಿಯಲ್ಲಿ ಅಧ್ಯಾದೇಶ ಹೊರಡಿಸಲಾಯಿತು. ಇದರ ಪರಿಣಾಮವಾಗಿ ರಕ್ಷಣಾ ವಲಯದ ನಿರ್ದಿಷ್ಟ ಅಗತ್ಯಗಳ ಸಮಸ್ಯೆಗಳನ್ನು ಪರಿಹರಿಸಲು ಡಿಪಿಎಸ್.ಯುಗಳಿಗೆ ಹೇಳಿ ಮಾಡಿಸಿದ ಡಿಪಿಇ ಮಾರ್ಗಸೂಚಿಗಳಿಗೆ ಪೂರಕವಾಗಿ ಜೆವಿ ಶಿಷ್ಟಾಚಾರ/ಮಾರ್ಗದರ್ಶನಗಳು ಅಗತ್ಯವೆಂದು ಮತ್ತು ಇದು ಡಿಪಿಎಸ್.ಯುಗಳ ಹಿತವನ್ನು ರಕ್ಷಿಸುವ ಖಾತ್ರಿಯನ್ನು ಒದಗಿಸುತ್ತದೆ ಎಂದು ಭಾವಿಸಲಾಯಿತು. ಅದಕ್ಕೆ ಅನುಗುಣವಾಗಿ ಡಿಪಿಎಸ್.ಯು.ಗಳು ಜಂಟಿ ಉದ್ಯಮ ಕಂಪನಿ ಸ್ಥಾಪಿಸಲು ಹಾಲಿ ಇರುವ ಮಾರ್ಗಸೂಚಿಗಳನ್ನು 2012ರ ಫೆಬ್ರವರಿ 9ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಅನುಮೋದಿಸಲಾಯಿತು ಮತ್ತು ಅದಕ್ಕೆ 2012ರ ಫೆಬ್ರವರಿ 17ರಂದು ಅಧಿಸೂಚನೆ ಹೊರಡಿಸಲಾಯಿತು. ಈಗ, ಖಾಸಗಿ ಕೈಗಾರಿಕೆಗಳು ರಕ್ಷಣಾ ವಲಯದಲ್ಲಿ ಹೆಚ್ಚಾಗಿ ಪಾಲ್ಗೊಳ್ಳುತ್ತಿರುವ ಮತ್ತು ರಕ್ಷಣಾ ದಾಸ್ತಾನು ಪರಿಸರ ವ್ಯವಸ್ಥೆಯಲ್ಲಿ ಪರಿವರ್ತನೆಗಳು ಆಗುತ್ತಿರುವ ಪ್ರಸಕ್ತ ಸನ್ನಿವೇಶಕ್ಕೆ ಅನುಗುಣವಾಗಿ ಡಿಪಿಎಸ್.ಯು.ಗಳಿಗೆ ಪ್ರತ್ಯೇಕವಾದ ಜೆವಿ ಮಾರ್ಗಸೂಚಿಯನ್ನು ಹೊಂದುವ ಅಗತ್ಯ ಕುರಿತು ವಿಮರ್ಶಿಸಲಾಯಿತು.