Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ರಕ್ಷಣಾ ಕಾರ್ಯಾಚರಣೆಯ ಯಶಸ್ಸು ಪ್ರತಿಯೊಬ್ಬರಿಗೂ ಭಾವನಾತ್ಮಕ ಕ್ಷಣವಾಗಿದೆ: ಪ್ರಧಾನಮಂತ್ರಿ

ರಕ್ಷಣಾ ಕಾರ್ಯಾಚರಣೆಯ ಯಶಸ್ಸು ಪ್ರತಿಯೊಬ್ಬರಿಗೂ ಭಾವನಾತ್ಮಕ ಕ್ಷಣವಾಗಿದೆ: ಪ್ರಧಾನಮಂತ್ರಿ


ಉತ್ತರಕಾಶಿ ಸುರಂಗದಿಂದ ಕಾರ್ಮಿಕ ಬಂಧುಗಳ ರಕ್ಷಣಾ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಎಲ್ಲ ಜನರಿಗೂ ವಂದನೆಗಳು: ಪ್ರಧಾನಮಂತ್ರಿ

ರಕ್ಷಣಾ ಕಾರ್ಯಾಚರಣೆಯ ಯಶಸ್ಸು ಎಲ್ಲರನ್ನೂ ಭಾವುಕರನ್ನಾಗಿಸುತ್ತಿದೆ: ಪ್ರಧಾನಮಂತ್ರಿ

ಸುರಕ್ಷಿತವಾಗಿ ರಕ್ಷಿಸಲ್ಪಟ್ಟ ಕಾರ್ಮಿಕರ ಧೈರ್ಯ ಮತ್ತು ತಾಳ್ಮೆಯನ್ನು ಪ್ರಶಂಸಿಸಿದ ಪ್ರಧಾನಮಂತ್ರಿ

ಕಾರ್ಮಿಕ ಸಹೋದರರಿಗೆ ಉತ್ತಮ ಆರೋಗ್ಯವನ್ನು ಹಾರೈಸುತ್ತೇನೆ : ಪ್ರಧಾನಮಂತ್ರಿ

ಉತ್ತರಕಾಶಿ ಸುರಂಗದಿಂದ ಕಾರ್ಮಿಕ ಬಂಧುಗಳ ರಕ್ಷಣಾ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಎಲ್ಲ ಜನರಿಗೂ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವಂದಿಸಿದ್ದಾರೆ 

“ಉತ್ತರಕಾಶಿ ಸುರಂಗ ಮಾರ್ಗದಲ್ಲಿ ಸಿಲುಕಿಕೊಂಡಿದ್ದ ನಮ್ಮ ಕಾರ್ಮಿಕ ಬಂಧುಗಳನ್ನು ಸುರಕ್ಷಿತವಾಗಿ ಹೊಕರೆತಂದ ರಕ್ಷಣಾ ಕಾರ್ಯಾಚರಣೆಯ ಯಶಸ್ಸು ಪ್ರತಿಯೊಬ್ಬರಿಗೂ ಭಾವನಾತ್ಮಕ ಕ್ಷಣವಾಗಿದೆ” ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೇಳಿದರು. ಸುರಂಗದಲ್ಲಿ ಸಿಕ್ಕಿಬಿದ್ದವರ ಧೈರ್ಯ ಮತ್ತು ತಾಳ್ಮೆಯನ್ನು ಶ್ಲಾಘಿಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು,  “ಈ ಕಾರ್ಮಿಕ ಬಂಧುಗಳಿಗೆ ಉತ್ತಮ ಆರೋಗ್ಯ ಸಿಗಲಿ” ಎಂದು ಶುಭಹಾರೈಸಿದರು. “ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿರುವ ಪ್ರತಿಯೊಬ್ಬರೂ ಮಾನವೀಯತೆ ಮತ್ತು ಸಾಂಘಿಕ ಕಾರ್ಯಕ್ಕೆ ಅದ್ಭುತ ಉದಾಹರಣೆಯನ್ನು ತೋರಿದ್ದಾರೆ” ಎಂದು ಪ್ರಧಾನಮಂತ್ರಿ ಅವರು ಹೇಳಿದರು.

ಪ್ರಧಾನಮಂತ್ರಿಯವರು ತಮ್ಮ ಎಕ್ಸ್ ಖಾತೆಯಲ್ಲಿ ಈ ರೀತಿ ಸಂದೇಶ ಹೇಳಿದ್ದಾರೆ;

***