Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಯು.ಎ.ಇ. ವಿದೇಶಾಂಗ ಸಚಿವರಿಂದ ಪ್ರಧಾನ ಮಂತ್ರಿ ಶ್ರೀ ಮೋದಿ ಅವರ ಭೇಟಿ.


 

ಭಾರತಕ್ಕೆ ಅಧಿಕೃತ  ಭೇಟಿಯಲ್ಲಿರುವ ಯುನೈಟೆಡ್ ಅರಬ್ ಎಮಿರೆಟ್ಸ್ ನ ವಿದೇಶಾಂಗ ಸಚಿವರಾದ  ಗೌರವಾನ್ವಿತ ಶೇಖ್ ಅಬ್ದುಲ್ಲಾ ಬಿನ್ ಝಯೀದ್  ಅಲ್ ನಹ್ಯಾನ್ ಅವರಿಂದು ಬೆಳಿಗ್ಗೆ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿಯಾದರು.

 

ವಿದೇಶಾಂಗ ಸಚಿವರು  ಯು.ಎ.ಇ. ಯ ಅಧ್ಯಕ್ಷರು ಮತ್ತು ರಾಜಕುಮಾರರ ಶುಭಾಶಯಗಳನ್ನು ತಿಳಿಸಿದರು.

 

ಯು.ಎ.ಇ.ಗೆ ತಮ್ಮ ಹಿಂದಿನ ಭೇಟಿಯಲ್ಲಿ ನೀಡಲಾದ ಹಾರ್ದಿಕ ಸ್ವಾಗತ ಮತ್ತು ಆತಿಥ್ಯವನ್ನು ಸ್ಮರಿಸಿಕೊಂಡ ಪ್ರಧಾನ ಮಂತ್ರಿ ಅವರು ಅಧ್ಯಕ್ಷರು ಮತ್ತು ರಾಜಕುಮಾರ ಅವರಿಗೆ ಆರೋಗ್ಯ, ಸಂತೋಷ ಮತ್ತು ಸರ್ವಾಂಗೀಣ ಯಶಸ್ಸಿಗಾಗಿ ತಮ್ಮ ಶುಭಹಾರೈಕೆಯನ್ನು ತಿಳಿಸುವಂತೆ ವಿದೇಶಾಂಗ ಸಚಿವರನ್ನು ಕೋರಿದರು. ಕಳೆದ ಐದು ವರ್ಷಗಳಲ್ಲಿ ದ್ವಿಪಕ್ಷೀಯ ಸಂಬಂಧಗಳಲ್ಲಿ ಆಗಿರುವ ಬೆಳವಣಿಗೆಗಳ ಬಗ್ಗೆ ಅವರು ಸಂತೋಷ ವ್ಯಕ್ತಪಡಿಸಿದರು.

 

ಭಾರತ –ಯು.ಎ.ಇ. ಬಾಂಧವ್ಯಗಳು ಹಿಂದೆಂದಿಗಿಂತಲೂ ಉತ್ತಮವಾಗಿವೆ ಎಂದು ಹೇಳಿದ ವಿದೇಶಾಂಗ ಸಚಿವರು ಉಭಯ ದೇಶಗಳ ಜನತೆಗೆ ಪರಸ್ಪರ ಪ್ರಯೋಜನಕಾರಿಯಾಗುವಂತೆ ದ್ವಿಪಕ್ಷೀಯ ಸಹಕಾರವನ್ನು ಹೆಚ್ಚಿಸುವ, ಈ ವಲಯದಲ್ಲಿ ಶಾಂತಿ, ಸಮೃದ್ದಿ, ಮತ್ತು ಸ್ಥಿರತೆಯನ್ನು ತರುವುದಕ್ಕಾಗಿ ಯು.ಎ.ಇ. ಯು ಹೊಂದಿರುವ ಚಿಂತನೆಯ ರೂಪುರೇಷೆಗಳನ್ನು ವಿವರಿಸಿದರು.

 

ವ್ಯಾಪಾರ, ಆರ್ಥಿಕತೆ, ಇಂಧನ, ಪ್ರವಾಸೋದ್ಯಮ, ಮತ್ತು ಜನತೆ-ಜನತೆ ನಡುವೆ ಸಂಪರ್ಕದ ಸಹಿತ ಸಹಕಾರದ ಎಲ್ಲಾ ವಲಯಗಳಲ್ಲಿ ಯು.ಎ.ಇ. ಜೊತೆಗೂಡಿ ಕೆಲಸ ಮಾಡುವ  ಮತ್ತು ಅದನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ ತಾವು ಕಟಿಬದ್ದರಾಗಿರುವುದಾಗಿ ಪ್ರಧಾನ ಮಂತ್ರಿಗಳು ಪುನರುಚ್ಚರಿಸಿದರು.