ಗೌರವಾನ್ವಿತರೇ,
ನಾನು ನಿಮ್ಮೆಲ್ಲರನ್ನೂ ಭಾರತಕ್ಕೆ ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇನೆ. ಇಯು ಕಾಲೇಜ್ ಆಫ್ ಕಮಿಷನರ್ಸ್ ಒಂದೇ ದೇಶದೊಂದಿಗೆ ಇಷ್ಟು ವಿಶಾಲ ಪ್ರಮಾಣದಲ್ಲಿ ತೊಡಗಿಸಿಕೊಳ್ಳುವುದು ಅಭೂತಪೂರ್ವವಾಗಿದೆ.
ಯಾವುದೇ ದ್ವಿಪಕ್ಷೀಯ ಚರ್ಚೆಗಾಗಿ ನನ್ನ ಅನೇಕ ಸಚಿವರು ಒಟ್ಟಿಗೆ ಸೇರಿರುವುದು ಇದೇ ಮೊದಲು. 2022 ರಲ್ಲಿ ರೈಸಿನಾ ಸಂವಾದದಲ್ಲಿ ಭಾರತ ಮತ್ತು ಇಯು ಸ್ವಾಭಾವಿಕ ಸಹಜ ಪಾಲುದಾರರು ಎಂದು ನೀವು ಹೇಳಿದ್ದು ನನಗೆ ನೆನಪಿದೆ. ಮತ್ತು ಭಾರತದೊಂದಿಗೆ ಸಂಬಂಧಗಳನ್ನು ಬಲಪಡಿಸುವುದು ಮತ್ತು ಶಕ್ತಿಯುತಗೊಳಿಸುವುದು ಮುಂಬರುವ ದಶಕದಲ್ಲಿ ಇಯುನ ಆದ್ಯತೆಯಾಗಿದೆ.
ಮತ್ತು ಈಗ, ನೀವು ನಿಮ್ಮ ಹೊಸ ಅವಧಿಯ ಆರಂಭದಲ್ಲಿ ಭಾರತಕ್ಕೆ ಭೇಟಿ ನೀಡುತ್ತಿದ್ದೀರಿ. ಇದು ಭಾರತ ಮತ್ತು ಇಯುಗೆ ಒಂದು ಮೈಲಿಗಲ್ಲಿನ ಕ್ಷಣವಾಗಿದೆ.
ಗೌರವಾನ್ವಿತರೇ,
ಜಗತ್ತು ಪ್ರಸ್ತುತ ಅಭೂತಪೂರ್ವ ಬದಲಾವಣೆಗೆ ಒಳಗಾಗುತ್ತಿದೆ. ಕೃತಕ ಬುದ್ಧಿಮತ್ತೆ ಮತ್ತು ಉದಯೋನ್ಮುಖ ತಂತ್ರಜ್ಞಾನಗಳು ಸಾಮಾಜಿಕ-ಆರ್ಥಿಕ ರೂಪಾಂತರಗಳಿಗೆ ಕಾರಣವಾಗುತ್ತಿವೆ.
ಭೌಗೋಳಿಕ-ಆರ್ಥಿಕ ಮತ್ತು ರಾಜಕೀಯ ಪರಿಸ್ಥಿತಿಗಳು ವೇಗವಾಗಿ ವಿಕಸನಗೊಳ್ಳುತ್ತಿವೆ. ಮತ್ತು ಹಳೆಯ ಸಮೀಕರಣಗಳು ಮುರಿದುಬೀಳುತ್ತಿವೆ. ಈ ರೀತಿಯ ಸಮಯದಲ್ಲಿ, ಭಾರತ ಮತ್ತು ಇಯು ನಡುವಿನ ಸಹಭಾಗಿತ್ವವು ಇನ್ನಷ್ಟು ಮುಖ್ಯವಾಗುತ್ತದೆ.
ಪ್ರಜಾಪ್ರಭುತ್ವ ಮೌಲ್ಯಗಳು, ಕಾರ್ಯತಂತ್ರದ ಸ್ವಾಯತ್ತತೆ ಮತ್ತು ನಿಯಮ ಆಧಾರಿತ ಜಾಗತಿಕ ಕ್ರಮದಲ್ಲಿ ಹಂಚಿಕೊಂಡ ನಂಬಿಕೆ ಭಾರತ ಮತ್ತು ಇಯು ಅನ್ನು ಒಂದುಗೂಡಿಸುತ್ತದೆ. ಎರಡೂ ದೇಶಗಳು ಬೃಹತ್ ವೈವಿಧ್ಯಮಯ ಮಾರುಕಟ್ಟೆ ಆರ್ಥಿಕತೆಗಳಾಗಿವೆ. ಒಂದರ್ಥದಲ್ಲಿ, ನಾವು ನೈಸರ್ಗಿಕ/ಸಹಜ ಕಾರ್ಯತಂತ್ರದ ಪಾಲುದಾರರು.
ಗೌರವಾನ್ವಿತರೇ,
ಭಾರತ ಮತ್ತು ಇಯು ವ್ಯೂಹಾತ್ಮಕ ಪಾಲುದಾರಿಕೆಯ ಇಪ್ಪತ್ತು ವರ್ಷಗಳನ್ನು ಪೂರ್ಣಗೊಳಿಸಿವೆ. ಮತ್ತು ನಿಮ್ಮ ಭೇಟಿಯೊಂದಿಗೆ, ನಾವು ಮುಂದಿನ ದಶಕಕ್ಕೆ ಅಡಿಪಾಯ ಹಾಕುತ್ತಿದ್ದೇವೆ.
ಈ ನಿಟ್ಟಿನಲ್ಲಿ, ಎರಡೂ ಪಕ್ಷಗಳು ತೋರಿಸಿದ ಗಮನಾರ್ಹ ಬದ್ಧತೆ ಶ್ಲಾಘನೀಯ. ಕಳೆದ ಎರಡು ದಿನಗಳಲ್ಲಿ ಸುಮಾರು ಇಪ್ಪತ್ತು ಸಚಿವರ ಮಟ್ಟದ ಸಭೆಗಳು ನಡೆದಿವೆ.
ಇಂದು ಬೆಳಿಗ್ಗೆ ವ್ಯಾಪಾರ ಮತ್ತು ತಂತ್ರಜ್ಞಾನ ಮಂಡಳಿಯ ಸಭೆಯನ್ನು ಸಹ ಯಶಸ್ವಿಯಾಗಿ ಆಯೋಜಿಸಲಾಗಿದೆ. ಎರಡೂ ತಂಡಗಳು ಇದರಲ್ಲಿ ರೂಪುಗೊಂಡ ಆಲೋಚನೆಗಳು ಮತ್ತು ಮಾಡಿದ ಪ್ರಗತಿಯ ಬಗ್ಗೆ ವರದಿಯನ್ನು ಪ್ರಸ್ತುತಪಡಿಸಲಿವೆ.
ಗೌರವಾನ್ವಿತರೇ,
ಸಹಕಾರದ ಕೆಲವು ಆದ್ಯತೆಯ ಕ್ಷೇತ್ರಗಳನ್ನು ಗುರುತಿಸಲು ನಾನು ಬಯಸುತ್ತೇನೆ.
ಮೊದಲನೆಯದು ವ್ಯಾಪಾರ ಮತ್ತು ಹೂಡಿಕೆ. ಪರಸ್ಪರ ಲಾಭದಾಯಕ ಎಫ್ಟಿಎ ಮತ್ತು ಹೂಡಿಕೆ ಸಂರಕ್ಷಣಾ ಒಪ್ಪಂದವನ್ನು ಆದಷ್ಟು ಬೇಗ ಮುಕ್ತಾಯಗೊಳಿಸುವುದು ನಿರ್ಣಾಯಕವಾಗಿದೆ.
ಎರಡನೆಯದು ಪೂರೈಕೆ ಸರಪಳಿ ಸ್ಥಿತಿಸ್ಥಾಪಕತ್ವವನ್ನು ಬಲಪಡಿಸುವುದು. ಎಲೆಕ್ಟ್ರಾನಿಕ್ಸ್, ಅರೆವಾಹಕಗಳು, ಟೆಲಿಕಾಂ, ಎಂಜಿನಿಯರಿಂಗ್, ರಕ್ಷಣಾ ಮತ್ತು ಔಷಧ ವಲಯ (ಫಾರ್ಮಾ) ದಂತಹ ಕ್ಷೇತ್ರಗಳಲ್ಲಿ ನಮ್ಮ ಸಾಮರ್ಥ್ಯಗಳು ಪರಸ್ಪರ ಪೂರಕವಾಗಿರುತ್ತವೆ. ಇದು ವೈವಿಧ್ಯೀಕರಣವನ್ನು ಬಲಪಡಿಸುತ್ತದೆ ಮತ್ತು ಅಪಾಯವನ್ನು ಕಡಿಮೆ ಮಾಡುತ್ತದೆ ಮತ್ತು ಸುರಕ್ಷಿತ, ನಂಬಲರ್ಹ ಹಾಗು ವಿಶ್ವಾಸಾರ್ಹ ಪೂರೈಕೆ ಮತ್ತು ಮೌಲ್ಯ ಸರಪಳಿಯನ್ನು ರಚಿಸಲು ಸಹಾಯ ಮಾಡುತ್ತದೆ.
ಮೂರನೆಯದು ಸಂಪರ್ಕ. ಜಿ 20 ಶೃಂಗಸಭೆಯಲ್ಲಿ ಪ್ರಾರಂಭಿಸಲಾದ ಐಎಂಇಸಿ ಕಾರಿಡಾರ್ ಪರಿವರ್ತನೆಯ ಉಪಕ್ರಮವಾಗಿದೆ. ಎರಡೂ ತಂಡಗಳು ಬಲವಾದ ಬದ್ಧತೆಯೊಂದಿಗೆ ಕೆಲಸ ಮಾಡುವುದನ್ನು ಮುಂದುವರಿಸಬೇಕು.
ನಾಲ್ಕನೆಯದು ತಂತ್ರಜ್ಞಾನ ಮತ್ತು ನಾವೀನ್ಯತೆ. ತಾಂತ್ರಿಕ (ಟೆಕ್) ಸಾರ್ವಭೌಮತ್ವದ ನಮ್ಮ ಹಂಚಿಕೆಯ ದೃಷ್ಟಿಕೋನವನ್ನು ಸಾಕಾರಗೊಳಿಸಲು, ನಾವು ಮುಂದೆ ತ್ವರಿತ ಪ್ರಗತಿಯನ್ನು ಮುಂದುವರಿಸಬೇಕು. ಡಿಪಿಐ, ಎಐ, ಕ್ವಾಂಟಮ್ ಕಂಪ್ಯೂಟಿಂಗ್, ಬಾಹ್ಯಾಕಾಶ (ಸ್ಪೇಸ್) ಮತ್ತು 6 ಜಿ ಮುಂತಾದ ಕ್ಷೇತ್ರಗಳಲ್ಲಿ, ನಮ್ಮ ಕೈಗಾರಿಕೆಗಳು, ನಾವೀನ್ಯಕಾರರು ಮತ್ತು ಯುವ ಪ್ರತಿಭೆಗಳನ್ನು ಜೋಡಿಸಲು ಎರಡೂ ಪಕ್ಷಗಳು ಒಟ್ಟಾಗಿ ಕೆಲಸ ಮಾಡಬೇಕು.
ಐದನೆಯದು ಹವಾಮಾನ ಕ್ರಿಯೆ ಮತ್ತು ಹಸಿರು ಇಂಧನ ನಾವೀನ್ಯತೆ. ಭಾರತ ಮತ್ತು ಇಯು ಹಸಿರು ಪರಿವರ್ತನೆಗೆ ಆದ್ಯತೆ ನೀಡಿವೆ. ಸುಸ್ಥಿರ ನಗರೀಕರಣ, ನೀರು ಮತ್ತು ಶುದ್ಧ ಇಂಧನದಲ್ಲಿನ ಸಹಕಾರದ ಮೂಲಕ, ನಾವು ಜಾಗತಿಕ ಹಸಿರು ಬೆಳವಣಿಗೆಯ ಚಾಲಕರಾಗಬಹುದು.
ಆರನೆಯದು ರಕ್ಷಣೆ. ಪರಸ್ಪರ ಸಹ-ಅಭಿವೃದ್ಧಿ ಮತ್ತು ಸಹ-ಉತ್ಪಾದನೆಯ ಮೂಲಕ ನಾವು ಪರಸ್ಪರರ ಅಗತ್ಯಗಳನ್ನು ಪೂರೈಸಬಹುದು. ರಫ್ತು ನಿಯಂತ್ರಣ ಕಾನೂನುಗಳಲ್ಲಿ ಪರಸ್ಪರ ಆದ್ಯತೆ ನೀಡುವ ನಿಟ್ಟಿನಲ್ಲಿ ನಾವು ಕೆಲಸ ಮಾಡಬೇಕು.
ಏಳನೆಯದು ಭದ್ರತೆ. ಭಯೋತ್ಪಾದನೆ, ಉಗ್ರವಾದ, ಕಡಲ ಭದ್ರತೆ, ಸೈಬರ್ ಭದ್ರತೆ ಮತ್ತು ಬಾಹ್ಯಾಕಾಶ ಭದ್ರತೆಯ ವಲಯದಲ್ಲಿ ಉದ್ಭವಿಸುವ ಸವಾಲುಗಳ ಬಗ್ಗೆ ಹೆಚ್ಚಿನ ಸಹಕಾರದ ಅಗತ್ಯವಿದೆ.
ಎಂಟನೆಯದು ಜನರ ನಡುವಿನ ಸಂಬಂಧ. ವಲಸೆ, ಚಲನಶೀಲತೆ, ಷೆಂಗೆನ್ ವೀಸಾಗಳು ಮತ್ತು ಇಯು ಬ್ಲೂ ಕಾರ್ಡ್ ಗಳನ್ನು ಸರಳ ಮತ್ತು ಸುಗಮಗೊಳಿಸುವುದು ಎರಡೂ ಪಕ್ಷಗಳಿಗೆ ಆದ್ಯತೆಯಾಗಿರಬೇಕು. ಇದು ಇಯು ಅಗತ್ಯಗಳನ್ನು ಪೂರೈಸುತ್ತದೆ. ಮತ್ತು ಭಾರತದ ಯುವ ಉದ್ಯೋಗಿಗಳು ಯುರೋಪಿನ ಬೆಳವಣಿಗೆ ಮತ್ತು ಸಮೃದ್ಧಿಗೆ ಇನ್ನೂ ಹೆಚ್ಚಿನ ಕೊಡುಗೆ ನೀಡಲು ಸಾಧ್ಯವಾಗುತ್ತದೆ.
ಗೌರವಾನ್ವಿತರೇ,
ಮುಂದಿನ ಭಾರತ-ಇಯು ಶೃಂಗಸಭೆಗಾಗಿ ನಾವು ಮಹತ್ವಾಕಾಂಕ್ಷೆ, ಕ್ರಮ ಮತ್ತು ಬದ್ಧತೆಯೊಂದಿಗೆ ಮುಂದುವರಿಯಬೇಕು.
ಇಂದಿನ ಎಐ ಯುಗದಲ್ಲಿ, ಭವಿಷ್ಯವು ಚಿಂತನಾ ದೃಷ್ಟಿ ಮತ್ತು ವೇಗವನ್ನು ಪ್ರದರ್ಶಿಸುವವರಿಗೆ ಸೇರಿದೆ.
ಗೌರವಾನ್ವಿತರೇ, ನಿಮ್ಮ ಆಲೋಚನೆಗಳನ್ನು ಹಂಚಿಕೊಳ್ಳಲು ನಾನು ಈಗ ನಿಮ್ಮನ್ನು ಆಹ್ವಾನಿಸುತ್ತೇನೆ.
*****
Addressing the press meet with President @vonderleyen of the @EU_Commission. https://t.co/LlKWefpGHp
— Narendra Modi (@narendramodi) February 28, 2025
यूरोपियन कमीशन President और कॉलेज ऑफ कमिशनर्स की यह भारत यात्रा अभूतपूर्व है।
— PMO India (@PMOIndia) February 28, 2025
यह केवल भारत में यूरोपियन कमिशन की पहली यात्रा नहीं है, बल्कि यह किसी भी एक देश में यूरोपियन कमिशन का पहला इतना व्यापक Engagement है: PM @narendramodi
भारत और EU की दो दशकों की Strategic Partnership - Natural है, Organic है।
— PMO India (@PMOIndia) February 28, 2025
इसके मूल में Trust है, लोकतान्त्रिक मूल्यों में साझा विश्वास है, Shared Progress और Prosperity के लिए साझा कमिटमेंट है: PM @narendramodi
हमारी पार्टनरशिप को Elevate और Accelerate करने के लिए कई निर्णय लिए गए हैं।
— PMO India (@PMOIndia) February 28, 2025
Trade, Technology, Investment, Innovation, Green Growth, Security, Skilling और Mobility पर सहयोग का एक ब्लू प्रिन्ट तैयार किया गया है: PM @narendramodi
Connectivity के क्षेत्र में India - Middle East - Europe Economic Corridor, यानि “आइमेक”, को आगे ले जाने के लिए ठोस कदम उठाये जाएंगे।
— PMO India (@PMOIndia) February 28, 2025
मुझे विश्वास है कि “आइमेक” ग्लोबल कॉमर्स, sustainable growth और prosperity को drive करने वाला इंजन साबित होगा: PM @narendramodi
रक्षा और सुरक्षा से जुड़े मुद्दों पर हमारा बढ़ता सहयोग आपसी विश्वास का प्रतीक है।
— PMO India (@PMOIndia) February 28, 2025
Cyber Security, मैरीटाइम सुरक्षा और Counter Terrorism पर हम सहयोग आगे ले जाएंगे।
इंडो-पेसिफिक क्षेत्र में शांति, सुरक्षा, स्थिरता और समृद्धि के महत्व पर दोनों पक्ष एकमत हैं।
“Indo Pacific Oceans…