Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಯುನೈಟೆಡ್ ಕಿಂಗ್ಡಮ್ ಮಾಜಿ ಪ್ರಧಾನಮಂತ್ರಿ, ಶ್ರೀ ರಿಷಿ ಸುನಕ್ ಮತ್ತು ಅವರ ಕುಟುಂಬದಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಭೇಟಿ


ಯುನೈಟೆಡ್ ಕಿಂಗ್ಡಮ್ ಮಾಜಿ ಪ್ರಧಾನಮಂತ್ರಿ, ಶ್ರೀ ರಿಷಿ ಸುನಕ್ ಮತ್ತು ಅವರ ಕುಟುಂಬದವರು ನವದೆಹಲಿಯಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು.

 ಗಣ್ಯರಿಬ್ಬರೂ ಹಲವು ವಿಷಯಗಳ ಕುರಿತು ಅದ್ಭುತ ಸಂವಾದ ನಡೆಸಿದರು.

ಶ್ರೀ ಸುನಕ್ ಅವರು ಭಾರತದ ಉತ್ತಮ ಸ್ನೇಹಿತರಾಗಿದ್ದಾರೆ ಮತ್ತು ಭಾರತ-ಯುಕೆ ಬಾಂಧವ್ಯವನ್ನು ಇನ್ನಷ್ಟು ಬಲಪಡಿಸುವ ಒಲವು ಹೊಂದಿದ್ದಾರೆ ಎಂದು ಶ್ರೀ ಮೋದಿ ಹೇಳಿದರು. 

ಪ್ರಧಾನಮಂತ್ರಿಗಳು ಎಕ್ಸ್ ನಲ್ಲಿ ಹೀಗೆ ಪೋಸ್ಟ್ ಮಾಡಿದ್ದಾರೆ: 

“ಯುಕೆ ಮಾಜಿ ಪ್ರಧಾನಿ ಶ್ರೀ ರಿಷಿ ಸುನಕ್ ಮತ್ತು ಅವರ ಕುಟುಂಬದವರನ್ನು ಭೇಟಿಯಾಗಿ ಸಂತೋಷವಾಯಿತು!  ಅನೇಕ ವಿಷಯಗಳ ಬಗ್ಗೆ ನಾವು ಅದ್ಭುತ ಸಂಭಾಷಣೆ ನಡೆಸಿದೆವು.

ಶ್ರೀ. ಸುನಕ್ ಅವರು ಭಾರತದ ಉತ್ತಮ ಸ್ನೇಹಿತರು ಮತ್ತು ಇನ್ನಷ್ಟು ಗಾಢವಾದ ಭಾರತ-ಯುಕೆ ಬಾಂಧವ್ಯದ ಬಗ್ಗೆ ಒಲವು ಹೊಂದಿದ್ದಾರೆ.

@RishiSunak @SmtSudhaMurty”

 

 

*****