Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಯುನೈಟೆಡ್ ಕಿಂಗ್ಡಮ್ ನ ರಾಜ 3ನೇ ಚಾರ್ಲ್ಸ್ ಅವರೊಂದಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮಾತುಕತೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಯುನೈಟೆಡ್ ಕಿಂಗ್ಡಮ್ ನ ದೊರೆ 3ನೇ ಚಾರ್ಲ್ಸ್  ಅವರೊಂದಿಗೆ ಮಾತನಾಡಿದರು.

ಭಾರತ ಮತ್ತು ಯುಕೆ ನಡುವಿನ ಐತಿಹಾಸಿಕ ಸಂಬಂಧಗಳನ್ನು ನೆನಪಿಸಿಕೊಳ್ಳುತ್ತಾ, ಉಭಯ ದೇಶಗಳ ನಡುವಿನ ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸುವ ಬದ್ಧತೆಯನ್ನು ಇಬ್ಬರೂ ನಾಯಕರು ಪುನರುಚ್ಚರಿಸಿದರು.

ಕಾಮನ್ ವೆಲ್ತ್ ರಾಷ್ಟ್ರಗಳು ಮತ್ತು ಇತ್ತೀಚೆಗೆ ಸಮೋವಾದಲ್ಲಿ ನಡೆದ ಕಾಮನ್ ವೆಲ್ತ್ ಮುಖ್ಯಸ್ಥರ ಸಭೆಯ ಕುರಿತು ಅಭಿಪ್ರಾಯಗಳನ್ನು ಎರಡೂ ದೇಶಗಳ ನಾಯಕರು ವಿನಿಮಯ ಮಾಡಿಕೊಂಡರು.

ಹವಾಮಾನ ಕ್ರಿಯೆ ಮತ್ತು ಸುಸ್ಥಿರತೆ ಸೇರಿದಂತೆ ಪರಸ್ಪರ ಹಿತಾಸಕ್ತಿಯ ಹಲವು ವಿಷಯಗಳ ಕುರಿತು ಚರ್ಚೆ ನಡೆದವು. ಈ ವಿಚಾರವಾಗಿ  ರಾಜಾ ಚಾರ್ಲ್ಸ್ ಅವರ ನಿರಂತರ ಬೆಂಬಲ ಮತ್ತು ಉಪಕ್ರಮಗಳಿಗೆ ಪ್ರಧಾನಮಂತ್ರಿ ಮೆಚ್ಚುಗೆ ವ್ಯಕ್ತಪಡಿಸಿದರು ಮತ್ತು ಭಾರತವು ಕೈಗೊಂಡ ಬಹು ಉಪಕ್ರಮಗಳ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸಿದರು.

ಇಬ್ಬರೂ ನಾಯಕರು ಮುಂಬರುವ ಕ್ರಿಸ್ಮಸ್ ಹಬ್ಬ ಮತ್ತು ಹೊಸ ವರ್ಷಕ್ಕೆ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು. 

ರಾಜ ಚಾರ್ಲ್ಸ್ ಅವರಿಗೆ ಉತ್ತಮ ಆರೋಗ್ಯ ಮತ್ತು ಸೌಖ್ಯಕ್ಕಾಗಿ ಪ್ರಧಾನಮಂತ್ರಿ ಶುಭ ಹಾರೈಸಿದರು.

 

*****