Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಯುಎಇ ಅಧ್ಯಕ್ಷರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಮಾತುಕತೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದರು.

ಯುಎಇ ಅಧ್ಯಕ್ಷರು ಭಾರತದ ಚಂದ್ರಯಾನ -3 ಮಿಷನ್ ನ ಯಶಸ್ಸಿಗಾಗಿ ಪ್ರಧಾನಿ ಮತ್ತು ಭಾರತದ ಜನರನ್ನು ಹಾರ್ದಿಕವಾಗಿ ಅಭಿನಂದಿಸಿದರು.

ಈ ಆತ್ಮೀಯ ಸನ್ನೆಗಾಗಿ ಪ್ರಧಾನಮಂತ್ರಿ ಅವರು ಅವರಿಗೆ ಧನ್ಯವಾದ ಅರ್ಪಿಸಿದರು ಮತ್ತು ಚಂದ್ರಯಾನದ ಯಶಸ್ಸು ಇಡೀ ಮಾನವಕುಲದ, ವಿಶೇಷವಾಗಿ ಜಾಗತಿಕ ದಕ್ಷಿಣದ ಯಶಸ್ಸಾಗಿದೆ ಎಂದು ಹೇಳಿದರು.

ಜಿ 20 ಶೃಂಗಸಭೆಗಾಗಿ ಮುಂದಿನ ತಿಂಗಳು ಅವರನ್ನು ಭಾರತಕ್ಕೆ ಸ್ವಾಗತಿಸಲು ತಾವು ಎದುರು ನೋಡುತ್ತಿರುವುದಾಗಿ ಪ್ರಧಾನಮಂತ್ರಿ ತಿಳಿಸಿದರು.

****