Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಮ್ಯಾನ್ಮಾರ್ ರಕ್ಷಣಾ ಸೇವೆಯ ವರಿಷ್ಠ ಕಮಾಂಡರ್ ಸೀನಿಯರ್ ಜನರಲ್ ಮಿನ್ ಆಂಗ್ ಹ್ಲಿಯಾಂಗ್ ರಿಂದ ಪ್ರಧಾನಿ ಭೇಟಿ


ಮ್ಯಾನ್ಮಾರ್ ರಕ್ಷಣಾ ಸೇವೆಯ ವರಿಷ್ಠ ಕಮಾಂಡರ್ ಸೀನಿಯರ್ ಜನರಲ್ ಮಿನ್ ಆಂಗ್ ಹ್ಲಿಯಾಂಗ್ ಅವರಿಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು.

ಇತ್ತೀಚಿನ ಅಮರನಾಥ ಯಾತ್ರಾ ಯಾತ್ರಿಕರ ಮೇಲಿನ ದಾಳಿಯನ್ನು ಖಂಡಿಸಿದ ಸೀನಿಯರ್ ಜನರಲ್ ಯು. ಮಿನ್ ಆಂಗ್ ಹ್ಲಿಯಾಂಗ್ ದಾಳಿಯಲ್ಲಿ ಸಂತ್ರಸ್ತರಾದವರಿಗೆ ತಮ್ಮ ಸಂತಾಪ ಸೂಚಿಸಿದರು.

ಪ್ರಧಾನಿಯವರು ಸಹ 2017ರ ಜೂನ್ 7ರಂದು ಸಂಭವಿಸಿದ ವಿಮಾನ ದುರಂತದಲ್ಲಿ ಮ್ಯಾನ್ಮಾರ್ ಸಶಸ್ತ್ರ ಪಡೆ ಮತ್ತು ಅವರ ಕುಟುಂಬದವರ ಸಾವಿಗೆ ತಮ್ಮ ಸಂತಾಪ ಸೂಚಿಸಿದರು.

ಸೀನಿಯರ್ ಜನರಲ್ ಯು ಮಿನ್ ಆಂಗ್ ಹ್ಲಿಯಾಂಗ್ ಅವರು ಪ್ರಧಾನಮಂತ್ರಿಯವರಿಗೆ ದ್ವಿಪಕ್ಷೀಯ ರಕ್ಷಣೆ ಮತ್ತು ಭದ್ರತೆ ಸಹಕಾರ ಕುರಿತು ವಿವರಿಸಿದರು. ಪ್ರಧಾನಮಂತ್ರಿಯವರು ಭಾರತ ಮತ್ತು ಮ್ಯಾನ್ಮಾರ್ ಸೇನಾಪಡೆಗಳ ನಡುವಿನ ಆಪ್ತ ಸಹಕಾರವನ್ನು ಶ್ಲಾಘಿಸಿದರು.

ಭಾರತದ ಪೂರ್ವದತ್ತ ಕ್ರಮ ನೀತಿಯಲ್ಲಿ ಮ್ಯಾನ್ಮಾರ್ ಪ್ರಮುಖ ಸ್ತಂಭವಾಗಿದೆ ಎಂದು ಪ್ರಧಾನಿ ಹೇಳಿದರು ಮತ್ತು ಎಲ್ಲ ಕ್ಷೇತ್ರದಲ್ಲಿ ದ್ವಿಪಕ್ಷೀಯ ಬಾಂಧವ್ಯ ಬಲಪಡಿಸುವ ಬದ್ಧತೆಯನ್ನು ವ್ಯಕ್ತಪಡಿಸಿದರು.

***

AKT/AK