Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಮ್ಯಾನ್ಮಾರ್‌ ಭೂಕಂಪದ ಹಿನ್ನೆಲೆಯಲ್ಲಿ  ಹಿರಿಯ ಸೇನಾ ಮುಖ್ಯಸ್ಥರಾದ ಮಿನ್ ಆಂಗ್ ಹ್ಲೈಂಗ್ ಅವರೊಂದಿಗೆ ಪ್ರಧಾನಮಂತ್ರಿ ಮಾತುಕತೆ


ಮ್ಯಾನ್ಮಾರ್‌ನಲ್ಲಿ ಭೂಕಂಪದ ದುರಂತ ಸನ್ನಿವೇಶದ ಸಂದರ್ಭದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಸೇನಾ ಮುಖ್ಯಸ್ಥರಾದ ಮಿನ್ ಆಂಗ್ ಹ್ಲೈಂಗ್ ಅವರೊಂದಿಗೆ ಮಾತುಕತೆ ನಡೆಸಿದರು. ಈ ಸವಾಲಿನ ಸಮಯದಲ್ಲಿ ಮ್ಯಾನ್ಮಾರ್‌ನೊಂದಿಗೆ ಒಗ್ಗಟ್ಟಿನಿಂದ ನಿಲ್ಲಲು ಆಪ್ತ ಸ್ನೇಹಿತ ಮತ್ತು ನೆರೆಹೊರೆಯ ದೇಶವಾದ ಭಾರತದ ದೃಢವಾದ ಬದ್ಧತೆಯನ್ನು ಪ್ರಧಾನಮಂತ್ರಿ ಪುನರುಚ್ಚರಿಸಿದರು. ಈ ವಿಪತ್ತಿಗೆ ಪ್ರತಿಕ್ರಿಯೆಯಾಗಿ, ಭಾರತ ಸರ್ಕಾರವು ಆಪರೇಷನ್ ಬ್ರಹ್ಮ ಪ್ರಾರಂಭಿಸಿದೆ, ಇದು ವಿಕೋಪದಿಂದ ಬಾಧಿತವಾಗಿರುವ ಪ್ರದೇಶಗಳಿಗೆ ತಕ್ಷಣದ ಪರಿಹಾರ ಮತ್ತು ಸಹಾಯವನ್ನು ಒದಗಿಸುವ ಉಪಕ್ರಮವಾಗಿದೆ.

ಎಕ್ಸ್ ಪೋಸ್ಟ್ ನಲ್ಲಿ ಅವರು ಹೀಗೆ ಬರೆದಿದ್ದಾರೆ: 

“ಮ್ಯಾನ್ಮಾರ್‌ನ ಸೀನಿಯರ್ ಜನರಲ್ (ಸೇನಾ ಮುಖ್ಯಸ್ಥ) ಮಿನ್ ಆಂಗ್ ಹ್ಲೈಂಗ್ ಅವರೊಂದಿಗೆ ಮಾತನಾಡಿದೆ. ವಿನಾಶಕಾರಿ ಭೂಕಂಪದಲ್ಲಿ ಜೀವಹಾನಿಗೆ ತೀವ್ರ ಸಂತಾಪ ತಿಳಿಸಿದೆ. ಆಪ್ತ ಸ್ನೇಹಿತ ಮತ್ತು ನೆರೆಯ ರಾಷ್ಟ್ರವಾಗಿ, ಭಾರತವು ಈ ಸಂಕಷ್ಟದ ಸಮಯದಲ್ಲಿ ಮ್ಯಾನ್ಮಾರ್ ಜನರೊಂದಿಗೆ ಒಗ್ಗಟ್ಟಿನಿಂದ ನಿಂತಿದೆ. #OperationBrahma ಉಪಕ್ರಮದ ಭಾಗವಾಗಿ ವಿಪತ್ತು ಪರಿಹಾರ ಸಾಮಗ್ರಿಗಳು, ಮಾನವೀಯ ನೆರವು, ಶೋಧ ಮತ್ತು ರಕ್ಷಣಾ ತಂಡಗಳನ್ನು ಭೂಕಂಪ ಬಾಧಿತ ಪ್ರದೇಶಗಳಿಗೆ ತ್ವರಿತವಾಗಿ ರವಾನಿಸಲಾಗುತ್ತಿದೆ.”

 

 

*****