Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಮೋರೇಯಲ್ಲಿ ಸಮಗ್ರ ತಪಾಸಣಾ ಠಾಣಾ , ಇಂಫಾಲ ದಲ್ಲಿ ಇತರ ಮೂಲಸೌಕರ್ಯ ಯೋಜನೆಗಳಿಗೆ ಪ್ರಧಾನ ಮಂತ್ರಿ ಚಾಲನೆ.

ಮೋರೇಯಲ್ಲಿ ಸಮಗ್ರ ತಪಾಸಣಾ ಠಾಣಾ  , ಇಂಫಾಲ ದಲ್ಲಿ ಇತರ ಮೂಲಸೌಕರ್ಯ ಯೋಜನೆಗಳಿಗೆ ಪ್ರಧಾನ ಮಂತ್ರಿ ಚಾಲನೆ.

ಮೋರೇಯಲ್ಲಿ ಸಮಗ್ರ ತಪಾಸಣಾ ಠಾಣಾ  , ಇಂಫಾಲ ದಲ್ಲಿ ಇತರ ಮೂಲಸೌಕರ್ಯ ಯೋಜನೆಗಳಿಗೆ ಪ್ರಧಾನ ಮಂತ್ರಿ ಚಾಲನೆ.


ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಇಂಫಾಲಕ್ಕೆ ಭೇಟಿ ನೀಡಿದರು. ಬೃಹತ್ ಸಾರ್ವಜನಿಕ ಸಭೆಯ ನಡುವೆ ಅವರು ಮೋರೆಯಲ್ಲಿ ಸಮಗ್ರ ತಪಾಸಣಾ ಠಾಣಾವನ್ನು ಉದ್ಘಾಟಿಸಿದರು. ಅವರು ದೊಲೈತಾಬಿ ಬ್ಯಾರೇಜ್ ಯೋಜನೆ, ಸ್ವಾವೋಂಬಂಗ್ ನಲ್ಲಿ ಎಫ್.ಸಿ.ಐ. ಆಹಾರ ಸಂಗ್ರಹ ಗೊದಾಮು ಮತ್ತು ನೀರು ಪೂರೈಕೆ ಹಾಗು ಪ್ರವಾಸೋದ್ಯಮ ಸಂಬಂಧಿ ಯೋಜನೆಗಳನ್ನು ಉದ್ಘಾಟಿಸಿದರು.

ಸಿಲ್ ಚಾರ್ –ಇಂಫಾಲ ನಡುವಿನ 400 ಕೆ.ವಿ. ಡಬಲ್ ಸರ್ಕ್ಯೂಟ್ ಮಾರ್ಗವನ್ನು ಅವರು ರಾಷ್ಟ್ರಕ್ಕೆ ಸಮರ್ಪಿಸಿದರು.

ಅವರು ಕ್ರೀಡಾ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು.

ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನ ಮಂತ್ರಿ ಅವರು ಶೌರ್ಯ ತೋರಿದ ಸ್ವಾತಂತ್ರ್ಯ ಹೋರಾಟಗಾರರಿಗೆ ಅದರಲ್ಲೂ ಮಣಿಪುರದ ಮಹಿಳಾ ಸ್ವಾತಂತ್ರ್ಯ ಹೋರಾಟಗಾರರಿಗೆ ಗೌರವ ಸಮರ್ಪಿಸಿದರು. ಅವಿಭಜಿತ ಭಾರತದ ಮೊದಲ ಮಧ್ಯಂತರ ಸರಕಾರವನ್ನು ಮಣಿಪುರದ ಮೊಯಿರಾಂಗ್ ನಲ್ಲಿ ಸ್ಥಾಪಿಸಿದ್ದನ್ನು ನೆನಪಿಸಿಕೊಂಡ ಪ್ರಧಾನ ಮಂತ್ರಿ ಅವರು ಈಶಾನ್ಯದ ಜನರಿಂದ ಅಜಾದ್ ಹಿಂದ್ ಫೌಜ್ ಗೆ ದೊರೆತ ಬೆಂಬಲವನ್ನೂ ಸ್ಮರಿಸಿಕೊಂಡರು. ನವಭಾರತದ ಬೆಳವಣಿಗೆಯ ಕಥಾನಕದಲ್ಲಿ ಮಣಿಪುರಕ್ಕೆ ಪ್ರಮುಖವಾದ ಪಾತ್ರವಿದೆ ಎಂದೂ ಅವರು ಹೇಳಿದರು.

ಇಂದಿನ ಕಾರ್ಯಕ್ರಮದಲ್ಲಿ 1500 ಕೋ.ರೂ. ಗಳಿಗೂ ಅಧಿಕ ವೆಚ್ಚದ ಯೋಜನೆಗಳಿಗೆ ಒಂದೋ ಶಿಲಾನ್ಯಾಸ ಮಾಡಲಾಗಿದೆ ಇಲ್ಲವೇ ಉದ್ಘಾಟಿಸಲಾಗಿದೆ ಎಂದು ಹೇಳಿದ ಪ್ರಧಾನ ಮಂತ್ರಿಗಳು , ಈ ಯೋಜನೆಗಳಿಂದ ರಾಜ್ಯದ ಜನತೆಯ “ಜೀವಿಸಲು ಅನುಕೂಲಕರ ವಾತಾವರಣದಲ್ಲಿ “ ಸುಧಾರಣೆಯಾಗಲಿದೆ ಎಂದರು.

ಕಳೆದ ನಾಲ್ಕೂವರೆ ವರ್ಷಗಳಲ್ಲಿ ತಾವು ಈಶಾನ್ಯಕ್ಕೆ ಸುಮಾರು 30 ಕ್ಕೂ ಅಧಿಕ ಬಾರಿ ಭೇಟಿ ನೀಡಿದ್ದಾಗಿ ತಿಳಿಸಿದ ಪ್ರಧಾನ ಮಂತ್ರಿಗಳು ಈಶಾನ್ಯ ಈಗ ಪರಿವರ್ತನೆಗೊಳ್ಳುತ್ತಿದೆ , ದಶಕಗಳಿಂದ ಬಾಕಿಯುಳಿದಿದ್ದ ಯೋಜನೆಗಳು ಪೂರ್ಣಗೊಳ್ಳುತ್ತಿವೆ ಎಂದೂ ಹೇಳಿದರು.

ಮೋರೇಯಲ್ಲಿಯ ಸಮಗ್ರ ತಪಾಸಣಾ ಠಾಣೆಯು ಕಸ್ಟಂಸ್ ಕ್ಲಿಯರೆನ್ಸ್, ವಿದೇಶೀ ಕರೆನ್ಸಿ ವಿನಿಮಯ, ವಲಸೆ ಕ್ಲಿಯರೆನ್ಸ್ ಇತ್ಯಾದಿ ಅನುಕೂಲತೆಗಳನ್ನು ಒಳಗೊಂಡಿದೆ ಎಂದರು.

ಇಂದು ಉದ್ಘಾಟನೆಗೊಂಡ ಯೋಜನೆಗಳು ಅಭಿವೃದ್ಧಿಗೆ ಕೇಂದ್ರ ಸರಕಾರದ ಬದ್ದತೆಯನ್ನು ಪ್ರತಿಬಿಂಬಿಸುತ್ತವೆ ಎಂದವರು ಹೇಳಿದರು. ದೊಲೈತಾಬಿ ಬ್ಯಾರೇಜ್ ಯೋಜನೆ 1987 ರಲ್ಲಿ ರೂಪಿಸಲಾಗಿತ್ತು, ಆದರೆ 2014 ರ ಬಳಿಕವಷ್ಟೇ ಅದಕ್ಕೆ ವೇಗ ದೊರೆಯಿತು , ಮತ್ತು ಅದೀಗ ಪೂರ್ಣಗೊಂಡಿದೆ ಎಂದರು. ಇಂದು ಉದ್ಘಾಟಿಸಲಾದ ಪ್ರವಾಸೋದ್ಯಮ ಯೋಜನೆಗಳ ಬಗ್ಗೆಯೂ ಅವರು ಪ್ರಸ್ತಾಪಿಸಿದರು. ಕೇಂದ್ರ ಸರಕಾರದಲ್ಲಿ ಯೋಜನೆ ಪೂರ್ಣಗೊಳಿಸುವುದಕ್ಕೆ ಸಂಬಂಧಿಸಿ ಹೆಚ್ಚು ಉತ್ಸಾಹಿ ಮತ್ತು ಉದ್ದೇಶಶೀಲ ಧೋರಣೆ ಇರುವುದನ್ನು ವಿವರಿಸಿದ ಪ್ರಧಾನ ಮಂತ್ರಿ ಅವರು ಪ್ರಧಾನ ಮಂತ್ರಿಗಳ ಕಚೇರಿಯಲ್ಲಿ ಸ್ಥಾಪಿಸಲಾಗಿರುವ ಪ್ರಗತಿ ವ್ಯವಸ್ಥೆಯ ಮೂಲಕ ಸ್ಥಗಿತಗೊಂಡಿರುವ ಯೋಜನೆಗಳ ಮೇಲೆ ವೀಡಿಯೋ ಕಾನ್ಫರೆನ್ಸಿಂಗ್ ಮೂಲಕ ಹೇಗೆ ನಿಗಾ ಇಡಬಹುದಾಗಿದೆ ಎಂಬುದನ್ನೂ ವಿವರಿಸಿದರು.ಈ ಪ್ರಗತಿ ಸಭೆಗಳು ಸುಮಾರು 12 ಲಕ್ಷ ಕೋ.ರೂ.ಗಳ ಮೌಲ್ಯದ ಸ್ಥಗಿತಗೊಂಡ ಯೋಜನೆಗಳಿಗೆ ಸಂಬಂಧಿಸಿದ ವಿಷಯಗಳನ್ನು ಬಗೆಹರಿಸಿವೆ ಎಂದರು.

ಸ್ವಾವೋಂಬಂಗ್ ನಲ್ಲಿಯ ಎಫ್.ಸಿ.ಐ. ಗೊದಾಮಿನ ಕೆಲಸ 2016ರ ಡಿಸೆಂಬರ್ ತಿಂಗಳಲ್ಲಿ ಆರಂಭಗೊಂಡಿತ್ತು, ಮತ್ತು ಅದು ಈಗಾಗಲೇ ಪೂರ್ಣಗೊಂಡಿದೆ ಎಂದ ಪ್ರಧಾನಿಯವರು ವಿವಿಧ ನೀರು ಪೂರೈಕೆ ಯೋಜನೆಗಳ ಬಗ್ಗೆಯೂ ಇಂತಹ ವಿವರಗಳನ್ನು ನೀಡಿದರು.

ಕೇಂದ್ರ ಸರಕಾರ ಮತ್ತು ಮಣಿಪುರ ರಾಜ್ಯ ಸರಕಾರಗಳು ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಚಿಂತನೆಯನ್ನು ಮುಂದಿಟ್ಟುಕೊಂಡು ಕೆಲಸ ಮಾಡುತ್ತಿವೆ ಎಂದೂ ಪ್ರಧಾನ ಮಂತ್ರಿ ಹೇಳಿದರು. ರಾಜ್ಯ ಸರಕಾರದ “ ಗುಡ್ಡಗಾಡುಗಳಿಗೆ ನಡೆಯಿರಿ, ಹಳ್ಳಿಗಳೆಡೆಗೆ ಸಾಗಿರಿ” ಕಾರ್ಯಕ್ರಮವನ್ನು ಅವರು ಶ್ಲ್ಯಾಘಿಸಿದರು.

ಈಶಾನ್ಯಕ್ಕೆ “ಸಾರಿಗೆ ಮೂಲಕ ಪರಿವರ್ತನೆ” ಎಂಬ ಒಟ್ಟು ಚಿಂತನೆಯೊಂದಿಗೆ ಹೇಗೆ ಉತ್ತಮ ರಸ್ತೆ, ರೈಲು ಮತ್ತು ವಾಯು ಸಂಪರ್ಕವನ್ನು ಒದಗಿಸಲಾಗುತ್ತಿದೆ ಎಂಬುದನ್ನು ಪ್ರಧಾನ ಮಂತ್ರಿ ಅವರು ವಿವರಿಸಿದರು.

ಮಣಿಪುರವು ಸ್ವಚ್ಚ ಭಾರತ್, ನೈರ್ಮಲ್ಯೀಕರಣ, ಮತ್ತು ಚಂದೇಲ್ ನ ಆಶೋತ್ತರ ಜಿಲ್ಲೆ ಅಭಿವೃದ್ಧಿ ಸಹಿತ ಇತರ ವಲಯಗಳಲ್ಲಿ ಸಾಧಿಸಿರುವ ಪ್ರಗತಿಯನ್ನು ಪ್ರಧಾನ ಮಂತ್ರಿ ಅವರು ಉಲ್ಲೇಖಿಸಿದರು.

ಮಹಿಳಾ ಸಶಕ್ತೀಕರಣ ಕ್ಷೇತ್ರದಲ್ಲಿ ಮಣಿಪುರ ಮುಂಚೂಣಿಯಲ್ಲಿದೆ ಎಂದು ಹೇಳಿದ ಪ್ರಧಾನ ಮಂತ್ರಿಗಳು , ಕ್ರೀಡಾ ತಾರೆ ಮಣಿಪುರದ ಮೇರಿ ಕೋಂ ಅವರನ್ನು ಉಲ್ಲೇಖಿಸಿದರು. ಭಾರತವನ್ನು ಕ್ರೀಡಾ ಸೂಪರ್ ಪವರ್ ಆಗಿಸುವ ನಿಟ್ಟಿನಲ್ಲಿ ಈಶಾನ್ಯಕ್ಕೆ ಪ್ರಮುಖ ಪಾತ್ರವಿದೆ ಎಂದೂ ಪ್ರಧಾನಿ ಅವರು ನುಡಿದರು. ಅಥ್ಲೀಟ್ ಗಳ ತರಬೇತಿ ಮತ್ತು ಆಯ್ಕೆಯಲ್ಲಿ ಪಾರದರ್ಶಕತೆಯಿಂದಾಗಿ ಅಂತಾರಾಷ್ಟ್ರೀಯ ಕ್ರೀಡಾ ಸ್ಪರ್ಧೆಗಳಲ್ಲಿ ಭಾರತ ಉತ್ತಮ ಸಾಧನೆ ತೋರುವಂತಾಗಿದೆ ಎಂದೂ ಪ್ರಧಾನ ಮಂತ್ರಿ ಅಭಿಪ್ರಾಯಪಟ್ಟರು.