Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಮೊದಲ ರಾಷ್ಟ್ರೀಯ ತರಬೇತಿ ಸಮಾವೇಶವನ್ನು ಉದ್ಘಾಟಿಸಿದ ಪ್ರಧಾನ ಮಂತ್ರಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೊಸದಿಲ್ಲಿಯ ಪ್ರಗತಿ ಮೈದಾನದಲ್ಲಿರುವ ಅಂತಾರಾಷ್ಟ್ರೀಯ ಪ್ರದರ್ಶನ ಮತ್ತು ಸಮಾವೇಶ ಕೇಂದ್ರದಲ್ಲಿ ಮೊದಲ ರಾಷ್ಟ್ರೀಯ ತರಬೇತಿ ಸಮಾವೇಶ ಉದ್ಘಾಟಿಸಿದರು.

ಪ್ರಧಾನ ಮಂತ್ರಿ ಅವರ ಭಾಷಣವು ಅವರ ಶ್ರೀಮಂತ ರಾಜಕೀಯ ಮತ್ತು ಆಡಳಿತಾತ್ಮಕ ಅನುಭವದಿಂದ ಹೊರಹೊಮ್ಮಿದ ಅನೇಕ ಉಪವ್ಯಾಖ್ಯಾನಗಳು ಮತ್ತು ಕಥೆಗಳಿಂದ ತುಂಬಿತ್ತು. ತಮ್ಮ ಭಾಷಣದಲ್ಲಿ ಇಂತಹ ಉದಾಹರಣೆಗಳನ್ನು ನೀಡುವ ಮೂಲಕ ಅವರು ಸರ್ಕಾರಿ ಕೆಲಸದ ಸೇವಾ ದೃಷ್ಟಿಕೋನ, ಶ್ರೀಸಾಮಾನ್ಯನ ಆಶೋತ್ತರಗಳನ್ನು ನನಸಾಗಿಸುವ ನಾಯಕತ್ವ, ಶ್ರೇಣೀಕೃತ ವ್ಯವಸ್ಥೆ ಮುರಿದು ಸಂಘಟನೆಯಲ್ಲಿ ಪ್ರತಿಯೊಬ್ಬರ ಅನುಭವದ ಬಳಕೆ, ಜನ್ ಭಾಗಿದಾರಿಯ ಮಹತ್ವ, ಉತ್ಸಾಹ, ಇತರ ವಿಷಯಗಳ ಜತೆಗೆ ಆಡಳಿತ ವ್ಯವಸ್ಥೆ ಸುಧಾರಿಸಲು ಮತ್ತು ಆವಿಷ್ಕರಿಸುವ ಅಂಶಗಳ ಮಹತ್ವವನ್ನು ಒತ್ತಿ ಹೇಳಿದರು.. ತರಬೇತಿ ಮಾದರಿಗಳನ್ನು ಕೇಂದ್ರೀಕರಿಸಬೇಕು ಮತ್ತು ಅಭಿವೃದ್ಧಿಪಡಿಸಬೇಕು. ಈ ಅಂಶಗಳನ್ನು ಸರ್ಕಾರಿ ಅಧಿಕಾರಿಗಳಲ್ಲಿ ಅಳವಡಿಸಬೇಕು ಎಂದು ಅವರು ಹೇಳಿದರು.

ಈ ಹಿಂದೆ ಮುಖ್ಯಮಂತ್ರಿಯಾಗಿ ಮತ್ತು ನಂತರ ಪ್ರಧಾನಿಯಾಗಿ ಸೇವೆ ಸಲ್ಲಿಸಿದ ಅನುಭವ ಪ್ರಸ್ತಾಪಿಸಿದ ಪ್ರಧಾನಿ, ಪ್ರತಿಭಾವಂತ, ಸಮರ್ಪಿತ ಮತ್ತು ಬದ್ಧತೆಯ ಅಧಿಕಾರಿಗಳ ಕೊರತೆ ಸರ್ಕಾರಕ್ಕೆ ಎಂದಿಗೂ ಇಲ್ಲ. ಸೇನಾ ಸಂಸ್ಥೆಯು ಸಾರ್ವಜನಿಕರ ದೃಷ್ಟಿಯಲ್ಲಿ ನಿಷ್ಕಳಂಕವಾದ ವಿಶ್ವಾಸಾರ್ಹತೆ ಹೊಂದಿರುವಂತೆಯೇ, ಸರ್ಕಾರಿ ವ್ಯವಸ್ಥೆಯಲ್ಲಿ ಜನರ ನಂಬಿಕೆಯನ್ನು ಮತ್ತಷ್ಟು ಹೆಚ್ಚಿಸುವುದು ಎಲ್ಲಾ ಸರ್ಕಾರಿ ನೌಕರರ ಜವಾಬ್ದಾರಿಯಾಗಿದೆ ಎಂದು ಹೇಳಿದರು.

ತರಬೇತಿಯು ಸಂಪೂರ್ಣ ಸರ್ಕಾರಿ ಕಾರ್ಯವಿಧಾನವನ್ನು ಒಳಗೊಳ್ಳಬೇಕು. ಅಧಿಕಾರಿಗಳ ಸಾಮರ್ಥ್ಯ ಪೋಷಿಸಲು ಎಲ್ಲಾ ಪ್ರಯತ್ನಗಳನ್ನು ಮಾಡಬೇಕು. ತರಬೇತಿ ಸಂಸ್ಥೆಗಳಿಗೆ ನೇಮಕವನ್ನು ಶಿಕ್ಷಾರ್ಹ ನೇಮಕವೆಂದು ನೋಡುತ್ತಿದ್ದ ಹಳೆಯ ವಿಧಾನ ಅಥವಾ ದೃಷ್ಟಿಕೋನ ಬದಲಾಗುತ್ತಿದೆ. ಹಲವು ದಶಕಗಳಿಂದ ಸರ್ಕಾರದಲ್ಲಿ ಕೆಲಸ ಮಾಡುವ ಸಿಬ್ಬಂದಿಯನ್ನು ಬೆಳೆಸುವ ತರಬೇತಿ ಸಂಸ್ಥೆಗಳು ಪ್ರಮುಖ ಕಾರ್ಯಕ್ಷೇತ್ರಗಳಲ್ಲಿ ಒಂದಾಗಿದೆ ಎಂದು ಹೇಳಿದರು.

ಶ್ರೇಣೀಕೃತ ವ್ಯವಸ್ಥೆಯ ಸಂಕೋಲೆಗಳನ್ನು ಪ್ರಸ್ತಾಪಿಸಿದ ಅವರು, ಕ್ರಮಾನುಗತವನ್ನು ಲೆಕ್ಕಿಸದೆ ಅನುಭವ ಹೊಂದಿರುವವರನ್ನು ಹುಡುಕಲು ಅಧಿಕಾರಿಗಳಿಗೆ ಸಲಹೆ ನೀಡಿದರು.

ತರಬೇತಿಯು ಪ್ರತಿಯೊಬ್ಬ ಸರ್ಕಾರಿ ನೌಕರನಲ್ಲಿ ಜನ್ ಭಾಗಿದಾರಿಯ ಮಹತ್ವವನ್ನು ತುಂಬಬೇಕು. ಇದಕ್ಕೆ ಉದಾಹರಣೆ ನೀಡಿದ ಅವರು, ಸ್ವಚ್ಛ ಭಾರತ್ ಮಿಷನ್, ಮಹತ್ವಾಕಾಂಕ್ಷೆಯ ಜಿಲ್ಲೆಗಳ ಕಾರ್ಯಕ್ರಮ, ಅಮೃತ್ ಸರೋವರದ ಯಶಸ್ಸು ಮತ್ತು ವಿಶ್ವದಲ್ಲಿ ಡಿಜಿಟಲ್ ಪಾವತಿಯಲ್ಲಿ ಭಾರತದ ಗಣನೀಯ ಪಾಲು ಜನ್ ಭಾಗಿದಾರಿಗೆ ಸಲ್ಲುತ್ತದೆ ಎಂದರು.

ತರಬೇತಿಯು ಪ್ರತಿ ಹಂತಕ್ಕೂ ಮತ್ತು ಪ್ರತಿಯೊಬ್ಬರಿಗೂ ಮತ್ತು ಈ ಅರ್ಥದಲ್ಲಿ, iGOT (Integrated Government Online training) ಕರ್ಮಯೋಗಿ ವೇದಿಕೆಯು ಎಲ್ಲರಿಗೂ ತರಬೇತಿಗಾಗಿ ಅವಕಾಶಗಳನ್ನು ಒದಗಿಸುಸೂಕ್ತ ವೇದಿಕೆಯಾಗಿ ಹೊರಹೊಮ್ಮಿದೆ ಎಂದು ಪ್ರಧಾನ ಮಂತ್ರಿ ಹೇಳಿದರು. iGOT ಕರ್ಮಯೋಗಿ ನೋಂದಣಿಯು 10 ಲಕ್ಷ ಬಳಕೆದಾರರ ಪ್ರಮಾಣವನ್ನು ದಾಟಿರುವುದು ವ್ಯವಸ್ಥೆಯಲ್ಲಿರುವ ಜನರು ಕಲಿಯಲು ಉತ್ಸುಕರಾಗಿದ್ದಾರೆ ಎಂಬುದನ್ನು ತೋರಿಸುತ್ತಿದೆ. ಕರ್ಮಯೋಗಿ ಮಿಷನ್ ಸರ್ಕಾರಿ ಸಿಬ್ಬಂದಿಯ ದೃಷ್ಟಿಕೋನ, ಮನಸ್ಥಿತಿ ಮತ್ತು ಕಾರ್ಯವಿಧಾನ ಸುಧಾರಿಸಲು ಪ್ರಯತ್ನಿಸುತ್ತಿದೆ. ಇದರಿಂದ ಅವರು ತೃಪ್ತಿ ಮತ್ತು ಸಂತೋಷ ಅನುಭವಿಸುತ್ತಾರೆ.  ಈ ಸುಧಾರಣೆಯ ಉಪ-ಉತ್ಪನ್ನವಾಗಿ, ಆಡಳಿತ ವ್ಯವಸ್ಥೆಯನ್ನು ಸ್ವಾಭಾವಿಕವಾಗಿ ಸುಧಾರಿಸುತ್ತದೆ ಎಂದು ಅವರು ಹೇಳಿದರು.

ಸಮ್ಮೇಳನದಲ್ಲಿ ಭಾಗವಹಿಸಿದ ಎಲ್ಲರೂ ಫಲಪ್ರದ ಚರ್ಚೆ ನಡೆಸಲಿ ಎಂದು ಶುಭ ಹಾರೈಸಿದರು. ದೇಶದಲ್ಲಿ ತರಬೇತಿ ಮೂಲಸೌಕರ್ಯ ಸುಧಾರಿಸಲು ಸಹಾಯ ಮಾಡುವ ಕ್ರಿಯಾಶೀಲ ಸಂವಾದ ಮತ್ತು ಚರ್ಚೆಗಳೊಂದಿಗೆ ಹೊರಬರುವಂತೆ ಅವರು ಸಲಹೆ ನೀಡಿದರು. ಸಾಂಸ್ಥಿಕ ಕಾರ್ಯವಿಧಾನಗಳನ್ನು ಸುಧಆರಿಸಲು ನಿಯಮಿತ ಕಾಲಾವಧಿಯಲ್ಲಿ ಸಮಾವೇಶಗಳನ್ನು ಆಯೋಜಿಸುವಂತೆ ಅವರು ಸಲಹೆ ನೀಡಿದರು.

****