Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಮೊಜಾಂಬಿಕ್ ಗಣರಾಜ್ಯ ಅಧ್ಯಕ್ಷರೊಂದಿಗೆ ಪ್ರಧಾನ ಮಂತ್ರಿ ಮಾತುಕತೆ

ಮೊಜಾಂಬಿಕ್ ಗಣರಾಜ್ಯ ಅಧ್ಯಕ್ಷರೊಂದಿಗೆ ಪ್ರಧಾನ ಮಂತ್ರಿ ಮಾತುಕತೆ


ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮೊಜಾಂಬಿಕ್ ಗಣರಾಜ್ಯದ ಅಧ್ಯಕ್ಷ ಫಿಲಿಪ್ ಜಸಿಂಟೊ ನ್ಯುಸಿ ಅವರನ್ನು ನಿನ್ನೆ ಆಗಸ್ಟ್ 24ರಂದು ಜೋಹಾನ್ಸ್‌ಬರ್ಗ್‌ನಲ್ಲಿ 15 ನೇ ಬ್ರಿಕ್ಸ್ ಶೃಂಗಸಭೆಯ ಕೊನೆಯಲ್ಲಿ ಭೇಟಿ ಮಾಡಿದರು. 

ಎರಡೂ ದೇಶಗಳ ದ್ವಿಪಕ್ಷೀಯ ಸಂಬಂಧಗಳನ್ನು ಮುಂದಿನ ದಿನಗಳಲ್ಲಿ ಮತ್ತಷ್ಟು ವರ್ಧಿಸುವುದು, ಸಂಸದೀಯ ಸಂಪರ್ಕಗಳು, ರಕ್ಷಣೆ, ಭಯೋತ್ಪಾದನೆ ನಿಗ್ರಹ, ಇಂಧನ, ಗಣಿಗಾರಿಕೆ, ಆರೋಗ್ಯ, ವ್ಯಾಪಾರ ಮತ್ತು ಹೂಡಿಕೆ, ಸಾಮರ್ಥ್ಯ ನಿರ್ಮಾಣ, ಕಡಲ ಸಹಕಾರ ಮತ್ತು ಜನರ ಮಧ್ಯೆ ಸಂಪರ್ಕಗಳನ್ನು ಹೆಚ್ಚಿಸುವ ಮಾರ್ಗಗಳ ಕುರಿತು ಉಭಯ ನಾಯಕರು ಫಲಪ್ರದ ಮಾತುಕತೆ ನಡೆಸಿದರು. 

‘ವಾಯ್ಸ್ ಆಫ್ ದಿ ಗ್ಲೋಬಲ್ ಸೌತ್’ ಶೃಂಗಸಭೆಯಲ್ಲಿ ಅಧ್ಯಕ್ಷ ನ್ಯುಸಿ ಅವರ ಭಾಗವಹಿಸುವಿಕೆಗೆ ಪ್ರಧಾನಮಂತ್ರಿ ಶ್ಲಾಘಿಸಿದರು.

ಈ ವೇಳೆ ಮೊಜಾಂಬಿಕ್ ಗಣರಾಜ್ಯ ಅಧ್ಯಕ್ಷ ನ್ಯುಸಿ ಅವರು ಭಾರತದ ಚಂದ್ರಯಾನ ಮಿಷನ್‌ನ ಯಶಸ್ಸಿಗೆ ಅಭಿನಂದಿಸಿದರು. ಆಫ್ರಿಕನ್ ಒಕ್ಕೂಟದ ಜಿ20 ಖಾಯಂ ಸದಸ್ಯತ್ವಕ್ಕಾಗಿ ಭಾರತದ ಉಪಕ್ರಮವನ್ನು ಶ್ಲಾಘಿಸಿದರು.

****