Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಮೈಕ್ರೋಸಾಫ್ಟ್ ಅಧ್ಯಕ್ಷರು ಮತ್ತು ಸಿಇಒ ಸತ್ಯ ನಾದೆಲ್ಲಾ ಅವರಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಭೇಟಿ 


ಮೈಕ್ರೋಸಾಫ್ಟ್ ನ ಅಧ್ಯಕ್ಷರು ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಆದ ಸತ್ಯ ನಾದೆಲ್ಲಾ ಅವರು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ನವದೆಹಲಿಯಲ್ಲಿ ಭೇಟಿಯಾದರು.

ಭಾರತದಲ್ಲಿ ಮೈಕ್ರೋಸಾಫ್ಟ್ನ ಮಹತ್ವಾಕಾಂಕ್ಷೆಯ ವಿಸ್ತರಣೆ ಮತ್ತು ಹೂಡಿಕೆ ಯೋಜನೆಗಳ ಬಗ್ಗೆ ತಿಳಿಯಲು ಶ್ರೀ ಮೋದಿ ಅವರು ಹರ್ಷ ವ್ಯಕ್ತಪಡಿಸಿದರು. ತಂತ್ರಜ್ಞಾನ, ನಾವಿನ್ಯತೆ ಮತ್ತು ಕೃತಕಬುದ್ಧಿಮತ್ತೆ (ಎಐ) ನ ವಿವಿಧ ಆಯಾಮಗಳ ಬಗ್ಗೆ ಇಬ್ಬರೂ ಸಭೆಯಲ್ಲಿ ಚರ್ಚೆ ನಡೆಸಿದರು.

ಸಭೆಯ ಬಗೆಗಿನ ಸತ್ಯಾ ನಾದೆಲ್ಲಾ ಅವರ ಎಕ್ಸ್‌ ಪೋಸ್ಟ್ ಗೆ ಪ್ರತಿಕ್ರಿಯೆ ನೀಡಿರುವ ಶ್ರೀ ಮೋದಿ ಅವರು ಹೀಗೆ ಹೇಳಿದ್ದಾರೆ:

“@satyanadella ಅವರೇ ನಿಜಕ್ಕೂ ನಿಮ್ಮನ್ನು ಭೇಟಿಯಾಗಿ ಸಂತಸವಾಯಿತು! ಭಾರತದಲ್ಲಿ ಮೈಕ್ರೋಸಾಫ್ಟ್‌ನ ಮಹತ್ವಾಕಾಂಕ್ಷೆಯ ವಿಸ್ತರಣೆ ಮತ್ತು ಹೂಡಿಕೆ ಯೋಜನೆಗಳ ಬಗ್ಗೆ ತಿಳಿದುಕೊಳ್ಳಲು ಸಂತೋಷವಾಗಿದೆ. ತಂತ್ರಜ್ಞಾನ, ನಾವಿನ್ಯತೆ ಮತ್ತು ಕೃತಕಬುದ್ಧಿಮತ್ತೆ (ಎಐ)ನ ವಿವಿಧ ಅಂಶಗಳ ಬಗ್ಗೆ ಸಭೆಯಲ್ಲಿ ನಾವು ಚರ್ಚೆ ನಡೆಸಿದುದು ಅದ್ಭುತವಾಗಿತ್ತು.”

 

 

*****