Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಮೇ 26 ರಂದು ಹೈದರಾಬಾದ್ ಮತ್ತು ಚೆನ್ನೈಗೆ ಭೇಟಿ ನೀಡಲಿರುವ ಪ್ರಧಾನಮಂತ್ರಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 26 ಮೇ, 2022 ರಂದು ಹೈದರಾಬಾದ್ ಮತ್ತು ಚೆನ್ನೈ ನಗರಗಳಿಗೆ ಭೇಟಿ ನೀಡಲಿದ್ದಾರೆ. ಮಧ್ಯಾಹ್ನ 2 ಗಂಟೆಗೆ, ಪ್ರಧಾನಮಂತ್ರಿಯವರು ಐ.ಎಸ್.ಬಿ. ಹೈದರಾಬಾದ್ ನ 20 ವರ್ಷಗಳನ್ನು ಪೂರೈಸಿದ ಸಂಭ್ರಮಾಚರಣೆಯಲ್ಲಿ ಭಾಗವಹಿಸಲಿದ್ದಾರೆ ಮತ್ತು 2022 ರ ಸ್ನಾತಕೋತ್ತರ  (ಪಿ.ಜಿ.ಪಿ.) ತರಗತಿಯ ಪದವಿಪ್ರದಾನ ಸಮಾರಂಭವನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಸಂಜೆ 5:45 ರ ಸುಮಾರಿಗೆ, ಪ್ರಧಾನಮಂತ್ರಿ ಅವರು ಚೆನ್ನೈನ ಜೆ.ಎಲ್.ಎನ್. ಒಳ ಕ್ರೀಡಾಂಗಣದಲ್ಲಿ ರೂ. 31,400 ಕೋಟಿಗೂ ಅಧಿಕ ಮೌಲ್ಯದ 11 ಯೋಜನೆಗಳನ್ನು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ.
 

ಚೆನ್ನೈನಲ್ಲಿ ಪ್ರಧಾನಮಂತ್ರಿ

ಮೂಲಸೌಕರ್ಯ ಅಭಿವೃದ್ಧಿಯನ್ನು ಉತ್ತೇಜಿಸುವ, ಸಂಪರ್ಕವನ್ನು ಹೆಚ್ಚಿಸುವ ಮತ್ತು ಈ ಪ್ರದೇಶದಲ್ಲಿ ವಾಸಿಸಲು ಸುಲಭವಾಗುವಂತೆ ಪ್ರೇರೇಪಿಸುವ ನಿಟ್ಟಿನಲ್ಲಿ ಪ್ರಧಾನಮಂತ್ರಿಯವರು ಚೆನ್ನೈ ನಲ್ಲಿ ರೂ. 31,400 ಕೋಟಿಗೂ ಅಧಿಕ ಮೌಲ್ಯದ 11 ಯೋಜನೆಗಳ ಅಡಿಪಾಯ ನೆರವೇರಿಸಲಿದ್ದಾರೆ ಮತ್ತು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ಈ ಯೋಜನೆಗಳು ಈ ಪ್ರದೇಶದಲ್ಲಿ ಸಾಮಾಜಿಕ-ಆರ್ಥಿಕ ಸಮೃದ್ಧಿಯನ್ನು ಗಣನೀಯವಾಗಿ ಸುಧಾರಿಸಲು ಸಹಾಯ ಮಾಡುತ್ತದೆ, ಹಲವಾರು ಕ್ಷೇತ್ರಗಳ ಮೇಲೆ ಪರಿವರ್ತಕ ಪರಿಣಾಮವನ್ನು ಬೀರುತ್ತವೆ ಮತ್ತು ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಸಹಾಯ ಮಾಡುತ್ತದೆ.
ಚೆನ್ನೈನಲ್ಲಿ ಪ್ರಧಾನಮಂತ್ರಿಯವರು ರೂ. 2900 ಕೋಟಿಗಳ ಐದು ಯೋಜನೆಗಳನ್ನು ದೇಶಕ್ಕೆ ಸಮರ್ಪಿಸಲಿದ್ದಾರೆ. ರೂ.500 ಕೋಟಿ ಯೋಜನಾ ವೆಚ್ಚದಲ್ಲಿ ನಿರ್ಮಿಸಲಾಗುವ 75 ಕಿಮೀ ಉದ್ದದ ಮಧುರೈ-ತೇನಿ (ರೈಲ್ವೆ ಗೇಜ್ ಪರಿವರ್ತನೆ) ಯೋಜನೆಯಿಂದ ಯಾತ್ರೆ ಸುಗಮಗೊಳಿಸುತ್ತದೆ ಮತ್ತು ಆ ಪ್ರದೇಶದ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುತ್ತದೆ. ರೂ.590 ಕೋಟಿ ಯೋಜನಾ ವೆಚ್ಚದಲ್ಲಿ ನಿರ್ಮಿಸಲಾಗುವ ತಾಂಬರಂ – ಚೆಂಗಲ್ಪಟ್ಟು ನಡುವಿನ 30 ಕಿ.ಮೀ ಉದ್ದದ ಮೂರನೇ ರೈಲು ಮಾರ್ಗದಿಂದ ಹೆಚ್ಚಿನ ಉಪನಗರ ಸೇವೆಗಳ ಚಾಲನೆಯನ್ನು, ಸಾರಿಗೆ ದಟ್ಟಣೆಯಿಂದ ಸುಗಮಗೊಳಿಸುತ್ತದೆ ಮತ್ತು ಪ್ರಯಾಣಿಕರಿಗೆ ಸೌಕರ್ಯವನ್ನು ಹೆಚ್ಚಿಸುತ್ತದೆ.     

ಇ.ಟಿ.ಬಿ.ಪಿ.ಎನ್.ಎಂ.ಟಿ. ನೈಸರ್ಗಿಕ ಅನಿಲ ಪೈಪ್‌ಲೈನ್ ನ 115 ಕಿಮೀ ಉದ್ದದ ಎನ್ನೂರ್-ಚೆಂಗಲ್ಪಟ್ಟು ವಿಭಾಗ ಮತ್ತು 271 ಕಿಮೀ ಉದ್ದದ ತಿರುವಳ್ಳೂರು-ಬೆಂಗಳೂರು ವಿಭಾಗವನ್ನು ಕ್ರಮವಾಗಿ ರೂ. 850 ಕೋಟಿ ಮತ್ತು ರೂ. 910 ಕೋಟಿ  ಯೋಜನಾ ವೆಚ್ಚದಲ್ಲಿ ನಿರ್ಮಿಸಲಾಗುವುದು. ಇದರಿಂದಾಗಿ, ತಮಿಳುನಾಡು, ಕರ್ನಾಟಕ ಮತ್ತು ಆಂಧ್ರಪ್ರದೇಶದ ಗ್ರಾಹಕರು ಹಾಗೂ ಕೈಗಾರಿಕೆಗಳಿಗೆ ನೈಸರ್ಗಿಕ ಅನಿಲ ಪೂರೈಕೆಗೆ ಅನುಕೂಲವಾಗಲಿದೆ.

ಪ್ರಧಾನಮಂತ್ರಿ ಆವಾಸ್ ಯೋಜನೆ (ನಗರ) ಇದರ ಅಡಿಯಲ್ಲಿ ಲೈಟ್ ಹೌಸ್ ಪ್ರಾಜೆಕ್ಟ್ – ಚೆನ್ನೈನ ಭಾಗವಾಗಿ ರೂ. 116 ಕೋಟಿ ವೆಚ್ಚದಲ್ಲಿ  ನಿರ್ಮಿಸಲಾದ 1152 ಮನೆಗಳ ಉದ್ಘಾಟನೆಗೆ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ರೂ. 28,500 ಕೋಟಿ ವೆಚ್ಚದಲ್ಲಿ ನಿರ್ಮಿಸಲಿರುವ  ಆರು ಯೋಜನೆಗಳ ಶಂಕುಸ್ಥಾಪನೆಯನ್ನೂ ಪ್ರಧಾನಮಂತ್ರಿ ಅವರು ನೆರವೇರಿಸಲಿದ್ದಾರೆ. 

ಸುಮಾರು ರೂ. 14,870 ಕೋಟಿ ವೆಚ್ಚದಲ್ಲಿ 262 ಕಿಮೀ ಉದ್ದದ ಬೆಂಗಳೂರು-ಚೆನ್ನೈ ಎಕ್ಸ್ ಪ್ರೆಸ್ ವೇಯನ್ನು ನಿರ್ಮಿಸಲಾಗುವುದು. ಇದು ಕರ್ನಾಟಕ, ಆಂಧ್ರಪ್ರದೇಶ ಮತ್ತು ತಮಿಳುನಾಡು ರಾಜ್ಯಗಳ ಮೂಲಕ ಹಾದುಹೋಗುತ್ತದೆ ಹಾಗೂ ಬೆಂಗಳೂರು ಮತ್ತು ಚೆನ್ನೈ ನಡುವಿನ ಪ್ರಯಾಣದ ಸಮಯವನ್ನು 2-3 ಗಂಟೆಗಳವರೆಗೆ ಕಡಿಮೆ ಮಾಡಲಿದೆ. ರೂ. 5850 ಕೋಟಿ ವೆಚ್ಚದಲ್ಲಿ ಚೆನ್ನೈ ಬಂದರಿನಿಂದ ಮಧುರವಾಯಲ್ (ರಾ.ಹೆ-4) ಗೆ ಸಂಪರ್ಕಿಸುವ ಸುಮಾರು 21 ಕಿಮೀ ಉದ್ದವನ್ನು 4 ಲೇನ್ ಡಬಲ್ ಡೆಕ್ಕರ್ ಎಲಿವೇಟೆಡ್ ರಸ್ತೆಯಾಗಿ ಮಾರ್ಪಡಿಸಲಾಗುವುದು. ಇದು ಚೆನ್ನೈ ಬಂದರಿಗೆ ಸರಕು ವಾಹನಗಳ ಮಾರ್ಗವನ್ನು ಸುಗಮಗೊಳಿಸುತ್ತದೆ. ಪ್ರದೇಶದಲ್ಲಿ ತಡೆರಹಿತ ಸಂಪರ್ಕವನ್ನು ಒದಗಿಸುವ ನಿಟ್ಟಿನಲ್ಲಿ ರಾ.ಹೆ-844 ರ 94 ಕಿಮೀ ಉದ್ದದ 4 ಲೇನ್ ನೇರಲೂರಿನಿಂದ ಧರ್ಮಪುರಿ ವಿಭಾಗ ಮತ್ತು 31 ಕಿಮೀ ಉದ್ದದ 2 ಲೇನ್ ಗಳು ರಾ.ಹೆ-227 ರ ಮೀನುಸುರುಟ್ಟಿಯಿಂದ ಚಿದಂಬರಂ ಭಾಗಕ್ಕೆ ಸುಸಜ್ಜಿತ ಸಂಪರ್ಕ ವ್ಯವಸ್ಥೆ ನೀಡಲಿದ್ದು, ಕ್ರಮವಾಗಿ ಸುಮಾರು ರೂ.3870 ಕೋಟಿ ಮತ್ತು ರೂ 720 ವೆಚ್ಚದಲ್ಲಿ ನಿರ್ಮಿಸಲಾಗುವುದು.  

ರೂ. 1800 ಕೋಟಿ ಗೂ ಅಧಿಕ ವೆಚ್ಚದ ಚೆನ್ನೈ ಎಗ್ಮೋರ್, ರಾಮೇಶ್ವರಂ, ಮಧುರೈ, ಕಟ್ಪಾಡಿ ಮತ್ತು ಕನ್ನಿಯಾಕುಮಾರಿ ಎಂಬ ಐದು ರೈಲು ನಿಲ್ದಾಣಗಳ ಪುನರಾಭಿವೃದ್ಧಿ  ಅಡಿಪಾಯ ಹಾಕಲಾಗುವುದು. ಆಧುನಿಕ ಸೌಕರ್ಯಗಳನ್ನು ಒದಗಿಸುವ ಮೂಲಕ ಪ್ರಯಾಣಿಕರ ಅನುಕೂಲ ಮತ್ತು ಸೌಕರ್ಯವನ್ನು ಹೆಚ್ಚಿಸುವ ದೃಷ್ಟಿಯಿಂದ ಈ ಯೋಜನೆಯನ್ನು ಪ್ರಾರಂಭಿಸಲಾಗುತ್ತಿದೆ.

ಪ್ರಧಾನಮಂತ್ರಿ ಅವರು ಚೆನ್ನೈನಲ್ಲಿ ರೂ. 1400 ಕೋಟಿ ಗೂ ಅಧಿಕ ಮೌಲ್ಯದ ಮಲ್ಟಿ ಮಾಡಲ್ ಲಾಜಿಸ್ಟಿಕ್ ಪಾರ್ಕ್ಗೆ ಶಂಕುಸ್ಥಾಪನೆ ಮಾಡಲಿದ್ದಾರೆ. ಇದು ತಡೆರಹಿತ ಇಂಟರ್ ಮೋಡಲ್ ಸರಕು ಸಾಗಣೆ ಗೆ ಪೂರಕವಾಗಿದೆ ಮತ್ತು ಸಾರಿಗೆ-ಸಾಗಾಟ ನಿಟ್ಟಿನಲ್ಲಿ ಬಹು ಕಾರ್ಯಗಳನ್ನು ಸಹ ನಿರ್ವಹಿಸಲಿದೆ.

ಹೈದರಾಬಾದ್ ನಲ್ಲಿ ಪ್ರಧಾನಮಂತ್ರಿ 

ಇಂಡಿಯನ್ ಸ್ಕೂಲ್ ಆಫ್ ಬ್ಯುಸಿನೆಸ್ (ಐ.ಎಸ್.ಬಿ.) ಹೈದರಾಬಾದ್ 20 ವರ್ಷಗಳನ್ನು ಪೂರೈಸಿದ ಸಂಭ್ರಮಾಚರಣೆಯಲ್ಲಿ ಪ್ರಧಾನಮಂತ್ರಿ ಭಾಗವಹಿಸಲಿದ್ದಾರೆ ಮತ್ತು 2022 ರ ಸ್ನಾತಕೋತ್ತರ ಕಾರ್ಯಕ್ರಮದ (ಪಿಜಿಪಿ) ತರಗತಿಯ ಪದವಿಪ್ರದಾನ ಸಮಾರಂಭವನ್ನು ಉದ್ದೇಶಿಸಿ ಪ್ರಧಾನಮಂತ್ರಿ ಅವರು ಭಾಷಣ ಮಾಡಲಿದ್ದಾರೆ. ಐ.ಎಸ್.ಬಿ.  ಅನ್ನು 2 ಡಿಸೆಂಬರ್ 2001 ರಂದು ಮಾಜಿ ಪ್ರಧಾನಮಂತ್ರಿ ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರು ಉದ್ಘಾಟಿಸಿದ್ದರು. ದೇಶದ ಉನ್ನತ ಬಿ-ಶಾಲೆಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿರುವ ಐ.ಎಸ್.ಬಿ., ತರಬೇತಿ ಮತ್ತು ಸಾಮರ್ಥ್ಯ ವೃದ್ಧಿಯನ್ನು ಒದಗಿಸಲು ಸರ್ಕಾರದ ಹಲವಾರು ಸಚಿವಾಲಯಗಳು ಮತ್ತು ಇಲಾಖೆಗಳೊಂದಿಗೆ ಸಹ ಸಹಯೋಗ ಹೊಂದಿದೆ. 

***