Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಮೂಲಸೌಕರ್ಯದ ವೆಚ್ಚಹೆಚ್ಚಳಗಾಗಿ ಹೆಚ್ಚುವರಿ ಬಜೆಟ್ ಸಂಪನ್ಮೂಲಕ್ಕೆ ಸಂಪುಟ ಸಮ್ಮತಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಮೂಲಸೌಕರ್ಯದ ವೆಚ್ಚ ಹೆಚ್ಚಿಸಲು ಭಾರತ ಸರ್ಕಾರದಿಂದ ಒದಗಿಸುವ 16,300 ಕೋಟಿ ರೂಪಾಯಿ ಅಸಲು ಮತ್ತು ಬಡ್ಡಿ ಸೇವೆಯೂ ಸೇರಿದಂತೆ ಹೆಚ್ಚುವರಿ ಬಜೆಟ್ ಸಂಪನ್ಮೂಲ (ಇಬಿಆರ್) ಮತ್ತು 2016-17ನೇ ಆರ್ಥಿಕ ವರ್ಷದಲ್ಲಿ ಒಟ್ಟಾರೆ 31,300 ಕೋಟಿ ರೂಪಾಯಿಗಳಿಗೆ ಹೆಚ್ಚಿಸಲು ತನ್ನ ಅನುಮೋದನೆ ನೀಡಿದೆ.

31300 ಕೋಟಿ ರೂಪಾಯಿ ಒಟ್ಟಾರೆ ಇಬಿಆರ್ ಪೈಕಿ ವಿದ್ಯುತ್ ಹಣಕಾಸು ನಿಗಮ (ಪಿಎಫ್ಸಿ), ಭಾರತೀಯ ಪುನರ್ ನವೀಕರಿಸುವ ಇಂಧನ ಅಭಿವೃದ್ಧಿ ಸಂಸ್ಥೆ (ಐ.ಆರ್.ಇ.ಡಿ.ಎ.), ಭಾರತೀಯ ಒಳನಾಡು ಜಲ ಮಾರ್ಗ ಪ್ರಾಧಿಕಾರ (ಐ.ಡಬ್ಲ್ಯುಎ.ಐ.) ಮತ್ತು ನಬಾರ್ಡ್ ಗಳಿಂದ ಪಡೆಯಲಾದ ಹಣಕ್ಕೆ ಭಾರತ ಸರ್ಕಾರದಿಂದ ಆರ್ಥಿಕ ನೆರವು ನೀಡಲು ಉದ್ದೇಶಿಸಲಾಗಿದೆ.

ಭಾರತ ಸರ್ಕಾರದಿಂದ ಒದಗಿಸಲಾಗುವ 16300 ಕೋಟಿ ರೂಪಾಯಿಗಳ ಇಬಿಆರ್ ಗೆ ಸಂಬಂಧಿಸಿದಂತೆ ಅಸಲು ಮತ್ತು ಬಡ್ಡಿಗೆ ಅನ್ವಯಿಸುವಂತೆ ಪಿಎಫ್.ಸಿ. ಐಆರ್.ಇ.ಡಿ.ಎ. ಐ.ಡಬ್ಲ್ಯು.ಎ.ಐ. ಮತ್ತು ನಬಾರ್ಡ್ ಗಳಿಂದ ಪಡೆಯಲಾಗುವ ಹಣಕ್ಕೆ ಸೂಕ್ತ ಆಯವ್ಯವ ಅವಕಾಶವನ್ನು ಆಯಾ ಸಚಿವಾಲಯ/ಇಲಾಖೆಯ ಬೇಡಿಕೆಗೆ ಅನುಗುಣವಾಗಿ ಮಾಡಲಾಗುತ್ತದ.

ಮೂಲಸೌಕರ್ಯ ವೆಚ್ಚ ಸುಧಾರಣೆಗೆ ಸರ್ಕಾರದ ಪ್ರಯತ್ನಕ್ಕೆ ಈ ಉದ್ದೇಶಿತ ಕ್ರಮ ಪೂರಕವಾಗಿದೆ ಮತ್ತು ಹೆಚ್ಚು ಸುಸ್ಥಿರ ವೆಚ್ಚಕ್ಕೆ ಇದು ಆದಾಯ-ಬಂಡವಾಳ ಮಿಶ್ರಣ ಸುಧಾರಣೆ ಮಾಡಲಿದೆ.

ಹಿನ್ನೆಲೆ:

ದೇಶದಲ್ಲಿ ಸುಸ್ಥಿರ ಅಭಿವೃದ್ಧಿಯನ್ನು ಅಳೆಯಲು ಮೂಲಸೌಕರ್ಯದ ಮೇಲಿನ ವೆಚ್ಚ ಒಂದು ಪ್ರಮುಖ ಮಾನದಂಡವಾಗಿದೆ. ಇದನ್ನು ಅಳೆಯಲು ಒಟ್ಟಾರೆ ವೆಚ್ಚದ ಬಂಡವಾಳ ವೆಚ್ಚದ ಅನುಪಾತ ಮಾನದಂಡವಾಗಿದೆ. ಈ ನಿಟ್ಟಿನಲ್ಲಿ ಮೂಲಸೌಕರ್ಯ ವೆಚ್ಚ ವೃದ್ಧಿಗಾಗಿ 2016-17ನೇ ಸಾಲಿನ ಬಜೆಟ್ ಭಾಷಣದಲ್ಲಿ ಪ್ರಕಟಣೆ ಮಾಡಲಾಗಿತ್ತು, ತದನಂತರ ಸರ್ಕಾರ 31,300 ಕೋಟಿ ರೂಪಾಯಿಗಳ ಮೊತ್ತದ ಹೆಚ್ಚುವರಿ ಹಣಕಾಸನ್ನು 2016-17ನೇ ಸಾಲಿನಲ್ಲಿ ಎನ್.ಎಚ್.ಎ.ಐ., ಪಿಎಫ್.ಸಿ, ಐಆರ್.ಇ.ಡಿ.ಎ., ನಬಾರ್ಡ್ ಮತ್ತು ಒಳನಾಡು ಜಲಮಾರ್ಗ ಪ್ರಾಧಿಕಾರದ ಬಾಂಡ್ ಗಳ ಮೂಲಕ ಪಡೆಯಲು ಅನುಮತಿ ನೀಡಿತ್ತು.

AKT/VBA/SH