ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಗೆ, 2030ರ ವೇಳೆಗೆ ಮಿಷನ್ ನಿವ್ವಳ ಶೂನ್ಯ ಇಂಗಾಲದ ಹೊರಸೂಸುವಿಕೆಯನ್ನು ಸಾಧಿಸಲು ಭಾರತೀಯ ರೈಲ್ವೆಗೆ ಬೆಂಬಲ ನೀಡಲು ಭಾರತ ಮತ್ತು ಯುನೈಟೆಡ್ ಸ್ಟೇಟ್ಸ್ ಫಾರ್ ಇಂಟರ್ನ್ಯಾಷನಲ್ ಡೆವಲಪ್ಮೆಂಟ್/ಇಂಡಿಯಾ (ಯುಎಸ್ಎಐಡಿ/ಇಂಡಿಯಾ) ನಡುವೆ 2023ರ ಜೂನ್ 14ರಂದು ತಿಳಿವಳಿಕೆ ಒಪ್ಪಂದಕ್ಕೆ ಅಂಕಿತ ಹಾಕಿರುವ ಬಗ್ಗೆ ವಿವರಿಸಲಾಯಿತು.
ಈ ತಿಳಿವಳಿಕೆ ಒಪ್ಪಂದವು ಭಾರತೀಯ ರೈಲ್ವೆಗೆ ರೈಲ್ವೆ ವಲಯದಲ್ಲಿನ ಇತ್ತೀಚಿನ ಬೆಳವಣಿಗೆಗಳು ಮತ್ತು ಜ್ಞಾನವನ್ನು ಸಂವಹನ ನಡೆಸಲು ಮತ್ತು ಹಂಚಿಕೊಳ್ಳಲು ವೇದಿಕೆಯನ್ನು ಒದಗಿಸುತ್ತದೆ. ಈ ತಿಳಿವಳಿಕೆ ಒಪ್ಪಂದವು ಯುಟಿಲಿಟಿ ಆಧುನೀಕರಣ, ಸುಧಾರಿತ ಇಂಧನ ಪರಿಹಾರಗಳು ಮತ್ತು ವ್ಯವಸ್ಥೆಗಳು, ಪ್ರಾದೇಶಿಕ ಇಂಧನ ಮತ್ತು ಮಾರುಕಟ್ಟೆ ಏಕೀಕರಣ ಮತ್ತು ಖಾಸಗಿ ವಲಯದ ಭಾಗವಹಿಸುವಿಕೆ ಮತ್ತು ತೊಡಗಿಸಿಕೊಳ್ಳುವಿಕೆ, ನವೀಕರಿಸಬಹುದಾದ ಇಂಧನದಂತಹ ನಿರ್ದಿಷ್ಟ ತಂತ್ರಜ್ಞಾನ ಕ್ಷೇತ್ರಗಳನ್ನು ಕೇಂದ್ರೀಕರಿಸುವ ತರಬೇತಿ ಮತ್ತು ಸೆಮಿನಾರ್ ಗಳು / ಕಾರ್ಯಾಗಾರಗಳಿಗೆ ಅವಕಾಶ ನೀಡುತ್ತದೆ. ಜ್ಞಾನ ಹಂಚಿಕೆಗಾಗಿ ಇಂಧನ ದಕ್ಷತೆ ಮತ್ತು ಇತರ ಪರಸ್ಪರ ಕ್ರಿಯೆಗಳು.
ಈ ಹಿಂದೆ, ಯುಎಸ್ಎಐಡಿ / ಇಂಡಿಯಾ ರೈಲ್ವೆ ಪ್ಲಾಟ್ಫಾರ್ಮ್ಗಳಲ್ಲಿ ಮೇಲ್ಛಾವಣಿ ಸೌರಶಕ್ತಿಯನ್ನು ನಿಯೋಜಿಸುವತ್ತ ಗಮನ ಹರಿಸಿ ಐಆರ್ನೊಂದಿಗೆ ಕೆಲಸ ಮಾಡಿದೆ.
ಯುನೈಟೆಡ್ ಸ್ಟೇಟ್ಸ್ ಏಜೆನ್ಸಿ ಫಾರ್ ಇಂಟರ್ನ್ಯಾಷನಲ್ ಡೆವಲಪ್ಮೆಂಟ್/ಇಂಡಿಯಾದೊಂದಿಗೆ ಭಾರತೀಯ ರೈಲ್ವೆ ಸಹಿ ಹಾಕಿದ ತಿಳಿವಳಿಕೆ ಒಪ್ಪಂದವು ಈ ಕೆಳಗಿನ ತಿಳುವಳಿಕೆಯೊಂದಿಗೆ ಇಂಧನ ಸ್ವಾವಲಂಬನೆಯನ್ನು ಶಕ್ತಗೊಳಿಸುತ್ತದೆ:
ಪರಿಣಾಮ:
2030 ರ ವೇಳೆಗೆ ಮಿಷನ್ ನಿವ್ವಳ ಶೂನ್ಯ ಇಂಗಾಲ ಹೊರಸೂಸುವಿಕೆ (ಎನ್ಝಡ್ಸಿಇ) ಸಾಧಿಸಲು ಭಾರತೀಯ ರೈಲ್ವೆಗೆ ಬೆಂಬಲ ನೀಡಲು ಈ ತಿಳಿವಳಿಕೆ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಇದು ಡೀಸೆಲ್, ಕಲ್ಲಿದ್ದಲು ಮುಂತಾದ ಆಮದು ಇಂಧನದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಭಾರತೀಯ ರೈಲ್ವೆಗೆ ಸಹಾಯ ಮಾಡುತ್ತದೆ. ನವೀಕರಿಸಬಹುದಾದ ಇಂಧನ (ಆರ್ಇ) ಸ್ಥಾವರಗಳ ನಿಯೋಜನೆಯು ದೇಶದಲ್ಲಿ ನವೀಕರಿಸಬಹುದಾದ ಇಂಧನ (ಆರ್ಇ) ತಂತ್ರಜ್ಞಾನಕ್ಕೆ ಉತ್ತೇಜನ ನೀಡುತ್ತದೆ. ಇದು ಸ್ಥಳೀಯ ಪರಿಸರ ವ್ಯವಸ್ಥೆಯ ಅಭಿವೃದ್ಧಿಗೆ ಸಹಾಯ ಮಾಡುತ್ತದೆ, ಇದು ತರುವಾಯ ಸ್ಥಳೀಯ ಉತ್ಪನ್ನ ಅಭಿವೃದ್ಧಿಗೆ ಉತ್ತೇಜನ ನೀಡುತ್ತದೆ.
ಇದಕ್ಕೆ ತಗಲುವ ವೆಚ್ಚ:
ಈ ತಿಳಿವಳಿಕೆ ಒಪ್ಪಂದದ ಅಡಿಯಲ್ಲಿ ಸೇವೆಗಳಿಗೆ ತಾಂತ್ರಿಕ ನೆರವನ್ನು ಎಸ್ಎಆರ್ಇಪಿ ಉಪಕ್ರಮದ ಅಡಿಯಲ್ಲಿ ಯುಎಸ್ಎಐಡಿ ಒದಗಿಸಲು ಉದ್ದೇಶಿಸಿದೆ. ಈ ತಿಳುವಳಿಕಾ ಒಡಂಬಡಿಕೆ ನಿಧಿಯ ಬಾಧ್ಯತೆ ಅಥವಾ ಯಾವುದೇ ರೀತಿಯ ಬದ್ಧತೆಯಲ್ಲ ಮತ್ತು ಅದು ಬದ್ಧವಲ್ಲ. ಇದು ಭಾರತೀಯ ರೈಲ್ವೆಯಿಂದ ಯಾವುದೇ ಹಣಕಾಸಿನ ಬದ್ಧತೆಯನ್ನು ಒಳಗೊಂಡಿರುವುದಿಲ್ಲ.
****