Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಮಿನಿಕಾಯ್, ತುಂಡಿ ಕಡಲ ತೀರ ಮತ್ತು ಕದ್ಮತ್ ಕಡಲ ತೀರಗಳು ಬ್ಲೂ ಬೀಚ್ಗಳ ಪಟ್ಟಿಯಲ್ಲಿ ಸ್ಥಾನ ಪಡೆದಿರುವುದಕ್ಕೆ ಲಕ್ಷದ್ವೀಪದ ಜನರನ್ನು ಅಭಿನಂದಿಸಿದ ಪ್ರಧಾನಮಂತ್ರಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಿನಿಕಾಯ್, ತುಂಡಿ ಕಡಲತೀರ ಮತ್ತು ಕದ್ಮತ್ ಕಡಲತೀರಗಳು,   ವಿಶ್ವದ ಶುದ್ಧ ಕಡಲತೀರಗಖಿಗೆ ನೀಡುವ ಜೈವಿಕ ಹಣೆಪಟ್ಟಿ- ಬ್ಲೂ ಬೀಚ್ಗಳ  ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಕ್ಕಾಗಿ ವಿಶೇಷವಾಗಿ ಲಕ್ಷದ್ವೀಪದ ಜನರನ್ನು ಅಭಿನಂದಿಸಿದ್ದಾರೆ. ಪ್ರಧಾನಮಂತ್ರಿ ಅವರು ಭಾರತದ ಗಮನಾರ್ಹ ಕರಾವಳಿಯನ್ನು ಪ್ರಮುಖವಾಗಿ ಪ್ರಸ್ತಾಪಿಸಿದ್ದಾರೆ  ಮತ್ತು ಕರಾವಳಿಯ ಸ್ವಚ್ಛತೆಗೆ ಭಾರತೀಯರಲ್ಲಿ ಮತ್ತಷ್ಟು ಉತ್ಸಾಹ ಹೆಚ್ಚಾಗುತ್ತಿದೆ ಎಂದು ಶ್ಲಾಘಿಸಿದ್ದಾರೆ.

ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವ ಶ್ರೀ ಭೂಪೇಂದ್ರ ಯಾದವ್ ಅವರ ಟ್ವೀಟ್ ಅನ್ನು ಹಂಚಿಕೊಂಡ ಪ್ರಧಾನಮಂತ್ರಿ ಅವರು ಈ ಟ್ವೀಟ್ ಮಾಡಿದ್ದಾರೆ;

“ಇದು ಶ್ರೇಷ್ಠವಾದುದಾಗಿದೆ.! ಈ ಸಾಧನೆಗಾಗಿ ವಿಶೇಷವಾಗಿ ಲಕ್ಷದ್ವೀಪದ ಜನರಿಗೆ ಅಭಿನಂದನೆಗಳು. ಭಾರತದ ಕರಾವಳಿಯು ಗಮನಾರ್ಹವಾದುದು ಮತ್ತು ನಮ್ಮ ಜನರಲ್ಲಿ ಕರಾವಳಿಯ ಸ್ವಚ್ಛತೆಯನ್ನು ಮತ್ತಷ್ಟು ಹೆಚ್ಚಿಸುವ ಉತ್ಸಾಹವೂ ಕಂಡುಬರುತ್ತಿದೆ”.

*****