Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಮಿಜೋರಾಂ ರಾಜ್ಯೋತ್ಸವ ದಿನದ ಅಂಗವಾಗಿ ಜನತೆಗೆ ಪ್ರಧಾನಮಂತ್ರಿ ಶುಭಾಶಯ


ಮಿಜೋರಾಂ ಜನತೆಗೆ ರಾಜ್ಯೋತ್ಸವ ದಿನದ ಅಂಗವಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಶುಭಾಶಯಗಳನ್ನು ಕೋರಿದ್ದಾರೆ. ಮಿಜೋರಾಂ ಸಂಸ್ಕೃತಿಯು ಪರಂಪರೆ ಮತ್ತು ಸಾಮರಸ್ಯದ ಸುಂದರವಾದ ಮಿಳಿತವನ್ನು ಬಿಂಬಿಸುತ್ತದೆ. ಮಿಜೋರಾಂ ಇನ್ನಷ್ಟು ಅಭಿವೃದ್ಧಿ ಹೊಂದಲಿ ಮತ್ತು ಮುಂಬರುವ ವರ್ಷಗಳಲ್ಲಿ ಶಾಂತಿ, ಅಭಿವೃದ್ಧಿ ಮತ್ತು ಪ್ರಗತಿಯತ್ತ ರಾಜ್ಯದ ಪಯಣವು ಇನ್ನೂ ಹೆಚ್ಚು ಎತ್ತರಕ್ಕೆ ತಲುಪಲಿ ಎಂದು ಅವರು ಹಾರೈಸಿದ್ದಾರೆ.

ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಪ್ರಧಾನಮಂತ್ರಿಗಳು;

“ರಾಜ್ಯೋತ್ಸವ ದಿನದಂದು ಮಿಜೋರಾಂ ಜನತೆಗೆ ಆತ್ಮೀಯ ಶುಭಾಶಯಗಳು! ಈ ವೈವಿಧ್ಯಮಯ ರಾಜ್ಯವು ತನ್ನ ಅದ್ಭುತ ಭೂದೃಶ್ಯಗಳು, ಆಳವಾಗಿ ಬೇರೂರಿರುವ ಸಂಪ್ರದಾಯಗಳು ಮತ್ತು ಜನರು ತೋರಿಸುವ ಪ್ರೀತಿಗೆ ಹೆಸರುವಾಸಿಯಾಗಿದೆ. ಮಿಜೋರಾಂ ಸಂಸ್ಕೃತಿಯು ಪರಂಪರೆ ಮತ್ತು ಸಾಮರಸ್ಯದ ಸುಂದರವಾದ ಸಮ್ಮಿಶ್ರಣವನ್ನು ಬಿಂಬಿಸುತ್ತದೆ. ಮಿಜೋರಾಂ ಹೀಗೆಯೇ ಅಭಿವೃದ್ಧಿ ಹೊಂದಿ ಮುಂಬರುವ ವರ್ಷಗಳಲ್ಲಿ ಅದರ ಶಾಂತಿ, ಅಭಿವೃದ್ಧಿ ಮತ್ತು ಪ್ರಗತಿಯ ಪಯಣವು ಇನ್ನಷ್ಟು ಎತ್ತರಕ್ಕೆ ತಲುಪಲಿ.” ಎಂದು ಆಶಯ ವ್ಯಕ್ತಪಡಿಸಿದ್ದಾರೆ.

 

 

*****