Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

​​​​​​​ಮಿಜೋರಾಂ ಜನತೆಗೆ ರಾಜ್ಯೋತ್ಸವ ದಿನದ ಶುಭ ಕೋರಿದ ಪ್ರಧಾನ ಮಂತ್ರಿ  ಮೋದಿ


ಮಿಜೋರಾಂ ರಾಜ್ಯೋತ್ಸವದ ಅಂಗವಾಗಿ ಅಲ್ಲಿನ ಜನತೆಗೆ ಶುಭ ಕೋರಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು, ರಾಜ್ಯದ ನಿರಂತರ ಪ್ರಗತಿ, ಶಾಂತಿ ಮತ್ತು ಸಮೃದ್ಧಿಗಾಗಿ ಪ್ರಾರ್ಥಿಸಿದ್ದಾರೆ. 

ಈ ಕುರಿತು ಟ್ವಿಟ್ಟರ್ ನಲ್ಲಿ ಬರೆದುಕೊಂಡಿರುವ ಪ್ರಧಾನ ಮಂತ್ರಿಗಳು,

“ಮಿಜೋರಾಂ ಜನತೆಗೆ ರಾಜ್ಯೋತ್ಸವ ದಿನದ ಶುಭಾಶಯಗಳು. ಮಿಜೋರಾಂನ ವಿಶಿಷ್ಟ ಸಾಂಸ್ಕೃತಿಕ ಉಡುಪು, ಅಲ್ಲಿನ ಶ್ರೀಮಂತ ಸೌಂದರ್ಯ ಮತ್ತು ಅಲ್ಲಿನ ಜನರ ಆತ್ಮೀಯ ಮನೋಭಾವದ ಬಗ್ಗೆ ಭಾರತ ದೇಶ ತುಂಬಾ ಹೆಮ್ಮೆಪಡುತ್ತದೆ. ಮಿಜೋರಾಂ ಸಂಸ್ಕೃತಿಯು ತುಂಬಾ ಸ್ಪೂರ್ತಿದಾಯಕವಾಗಿದೆ, ಸಂಪ್ರದಾಯ ಮತ್ತು ಸಾಮರಸ್ಯದ ಮಿಶ್ರಣವನ್ನು ಸಾಕಾರಗೊಳಿಸುತ್ತದೆ. ಮಿಜೋರಾಂನ ನಿರಂತರ ಪ್ರಗತಿ, ಶಾಂತಿ ಮತ್ತು ಸಮೃದ್ಧಿಗಾಗಿ ನಾನು ಪ್ರಾರ್ಥಿಸುತ್ತಿದ್ದೇನೆ.” ಎಂದು ಬರೆದುಕೊಂಡಿದ್ದಾರೆ.

***