ರಾಷ್ಟ್ರಪತಿಗಳಾದ ಶ್ರೀ ಅಬ್ದುಲ್ಲಾ ಯಾಮೀನ್‌ರವರೇ ಮತ್ತು ಮಾಧ್ಯಮದ ನನ್ನ ಗೆಳೆಯರೆ, ಇಂದು ಭಾರತ ಮತ್ತು ಮಾಲ್ಡೀವ್ಸ್‌ನ ಸಹಕಾರದ ಇತಿಹಾಸದಲ್ಲಿ ಒಂದು ಮಹತ್ವಪೂರ್ಣ ದಿನವಾಗಿದೆ.
ಇಂದಿನ ನಿಮ್ಮ ಭಾರತ ಭೇಟಿಯ ಸಂದರ್ಭದಲ್ಲಿ ನಾನು ನಿಮ್ಮನ್ನು ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇನೆ. ದೆಹಲಿ ಯಲ್ಲಿ ನಿಮ್ಮ ಉಪಸ್ಥಿತಿ ವೈಯಕ್ತಿಕವಾಗಿ ನನಗೆ ಬಹಳ ಸಂತೋಷದ ವಿಷಯವಾಗಿದೆ…. ನೀವು ಇಲ್ಲಿಗೆ ಬಂದಿರುವುದು ಒಬ್ಬ ಗೆಳೆಯನ ಆಗಮನದ ಸವಿ ಅನುಭವವನ್ನು ನೀಡುತ್ತಿದೆ.
ಮಾಲ್ಡೀವ್ಸ್ ಭಾರತದ ಪರಮಾಪ್ತ ಮಿತ್ರ ರಾಷ್ಟ್ರಗಳಲ್ಲೊಂದಾಗಿದೆ. ಸಂಸ್ಕೃತಿಯ ಪ್ರಾಚೀನ ಕೊಂಡಿಗಳು, ಎರಡೂ ದೇಶಗಳ ನಡುವಿನ ಹೊಂದಾಣಿಕೆ, ಮತ್ತು ಹಿಂದೂ ಮಹಾಸಾಗರದ ತೆರೆಗಳು ನಮ್ಮನ್ನು ಜೋಡಿಸುತ್ತಿವೆ.
ಘನತೆವೆತ್ತ ಯಾಮೀನ್‌ರವರೇ,
ಮಾಲ್ಡೀವ್ಸ್‌ನ ಪ್ರಗತಿ, ಸುರಕ್ಷತೆ ಮತ್ತು ಆರ್ಥಿಕ ಅಭಿವೃದ್ಧಿ-ವಿಕಾಸಗಳ ಬಗ್ಗೆ ನಿಮಗಿರುವಷ್ಟೇ ಗುರಿ ಭಾರತ ದೇಶಕ್ಕೂ ಇದೆ. ಮಾಲ್ಡೀವ್ಸ್‌ನ ಸ್ಥಿರತೆ ಮತ್ತು ಸುರಕ್ಷತೆಗಳು ಭಾರತದ ಆಯಕಟ್ಟಿನ ಹಿತಗಳೊಂದಿಗೆ ನೇರ ಸಂಬಂಧವನ್ನು ಹೊಂದಿವೆ. ಮಾಲ್ಡೀವ್ಸ್‌ನ ಸಮಸ್ಯೆಗಳು ನಮ್ಮ ಚಿಂತೆಗಳೂ ಆಗಿವೆ. ನಮ್ಮ ಅಕ್ಕಪಕ್ಕದ ದೇಶಗಳ ಪ್ರಗತಿಯಾಗದ ಹೊರತು ಭಾರತದ ಆರ್ಥಿಕ ಅಭಿವೃದ್ಧಿಯೂ ಸಹ ಅಪೂರ್ಣ ಎಂಬುದು ನನ್ನ ಅಭಿಪ್ರಾಯ. ‘ನೆರೆಹೊರೆ ಯವರು ಮೊದಲು ’, – ಇದು ನಮ್ಮ ನೀತಿಯಷ್ಟೇ ಅಲ್ಲ, ನಮ್ಮ ಸಿದ್ಧಾಂತಗಳ ಪ್ರಮುಖ ಭಾಗವೂ ಆಗಿದೆ.
ಗೆಳೆಯರೇ,
ರಾಷ್ಟ್ರಪತಿಗಳಾದ ಯಾಮೀನ್ ಅವರೊಂದಿಗೆ ಎರಡೂ ದೇಶಗಳ ನಡುವಿನ ಸಂಬಂಧಗಳ ಬಗೆಗಿನ ಎಲ್ಲ ವಿಚಾರಗಳನ್ನು ನಾನು ವಿಸ್ತಾರವಾಗಿ ಚರ್ಚಿಸಿದ್ದೇನೆ. ಭಾರತ ಮತ್ತು ಮಾಲ್ಡೀವ್ಸ್‌ಗಳ ಸಂಬಂಧಗಳ ವ್ಯಾಪ್ತಿ ನಮ್ಮೊಡನಿರುವ ಆಯಕಟ್ಟಿನ, ಸುರಕ್ಷತೆಯ, ಆರ್ಥಿಕ ಮತ್ತು ಅಭಿವೃದ್ಧಿಯ ಉದ್ದೇಶಗಳೊಂದಿಗೆ ಪರಿಭಾಷಿತವಾಗಿದೆ ಎಂಬುದು ಸ್ಪಷ್ಟವಾಗಿದೆ. ನಾವು ಮಾಲ್ಡೀವ್ಸ್‌ನ ಸುರಕ್ಷತಾ ಆವಶ್ಯಕತೆಗಳ ಬಗೆಗೂ ಎಚ್ಚರಿಕೆಯಿಂದ ಇದ್ದೇವೆ.
ಮಾಲ್ಡೀವ್ಸ್ ಭಾರತದ ಆಯಕಟ್ಟಿನ ಮತ್ತು ಸುರಕ್ಷತೆ-ಭದ್ರತೆಯ ಆಶಯಗಳೊಂದಿಗೆ ಸಂಪೂರ್ಣವಾಗಿ ಸಂವೇದನಶೀಲವಾಗಿರುವುದೆಂದು ರಾಷ್ಟ್ರಪತಿಗಳಾದ ಯಾಮೀನ್ ಕೂಡ ಸಹಮತ ವ್ಯಕ್ತಪಡಿಸಿದ್ದಾರೆ.
ಭಾರತ ಮತ್ತು ಮಾಲ್ಡೀವ್ಸ್ ದೇಶಗಳ ಕಡಲ ತೀರಗಳ ಸುರಕ್ಷತೆಯ ಒಳ್ಳೆಯ ಮತ್ತು ಏಕೈಕ ಯೋಜನೆ ಎಂದರೆ ನಮ್ಮ ಸದೃಢ ಗೆಳೆತನ ಎಂಬುದು ನಮ್ಮಿಬ್ಬರ ಅಭಿಪ್ರಾಯವಾಗಿದೆ. ಸಂಪೂರ್ಣ ಹಿಂದೂ ಮಹಾಸಾಗರದಲ್ಲಿ ಶಾಂತಿ, ಸಮೃದ್ಧಿ ಮತ್ತು ಸುರಕ್ಷತೆಗಳಿಗಾಗಿ ಇವುಗಳ ಅವಶ್ಯಕತೆ ಅನಿವಾರ್ಯವಾಗಿದೆ. ಹಿಂದೂ ಮಹಾಸಾಗರದಲ್ಲಿ ನೆಟ್ ಸುರಕ್ಷತಾ ಪೂರೈಕೆ ದಾರರ ರೂಪದಲ್ಲಿ ಭಾರತವು ತನ್ನ ಜವಾಬ್ದಾರಿಯನ್ನು ಚೆನ್ನಾಗಿ ಅರಿತುಕೊಂಡಿದೆ. ಪೃಥ್ವಿಯ ಈ ಭಾಗದಲ್ಲಿ ತನ್ನ ಆಯಕಟ್ಟಿನ ಹಿತಗಳ ರಕ್ಷಣೆಗಾಗಿ ಭಾರತವು ಸಂಪೂರ್ಣವಾಗಿ ಸನ್ನದ್ಧವಾಗಿದೆ. ನಮ್ಮ ಇಂದಿನ ಮಾತುಕತೆಯಲ್ಲಿ ಅನೇಕ ಮಹತ್ವಪೂರ್ಣ ವಿಷಯಗಳ ಕುರಿತು ಸಮ್ಮತಿ ಸೂಚಿಸಲಾಗಿದೆ. ರಕ್ಷಣೆಯ ಕ್ಷೇತ್ರದಲ್ಲಿ ಒಂದು ಸ್ಪಷ್ಟ ಕ್ರಿಯಾ ಯೋಜನೆಯನ್ನು ಅತಿ ಶೀಘ್ರ ಅನ್ವಯ ಮಾಡುವುದರಿಂದ ನಮ್ಮ ಭದ್ರತಾ ಸಹಭಾಗಿತ್ವವು ಇನ್ನೂ ಸದೃಢಗೊಳ್ಳಲಿದೆ. ಬಂದರುಗಳ ಅಭಿವೃದ್ಧಿ, ನಿರಂತರತರಭೇತಿಮತ್ತುಕಾರ್ಯಕ್ಷಮತೆಯಲ್ಲಿಸುಧಾರಣೆ, ಆವಶ್ಯಕ ಉಪಕರಣಗಳ ಪೂರೈಕೆ, ಹಾಗೆಯೇ ಸಮುದ್ರದ ಮೇಲ್ ನಿಗಾ ದಂತಹ ವಿಚಾರಗಳು ಇದರ ಮಹತ್ವಪೂರ್ಣ ಅಂಗಗಳಾಗಿವೆ.
ಭಾರತ ಮತ್ತು ಮಾಲ್ಡೀವ್ಸ್‌ಗಳೆರಡೂ ಸೇರಿ ಉಥುರು ಥಾಈಲಾ ಫಾಲು -( ಯು . ಟಿ .ಹೆಚ್) – ನಲ್ಲಿ ಬಂದರಿಗೆ
ಸಂಬಂಧಿಸಿದ ಸೌಲಭ್ಯಗಳ ಅಭಿವೃದ್ಧಿ ಮಾಡುತ್ತಿವೆ. ಐ – ಹೆವೆನ್ ನ ಅಭಿವೃದ್ಧಿಯು ಮಾಲ್ಡೀವ್ಸ್‌ನ ಪ್ರಾಥಮಿಕ ಆದ್ಯತೆಯಾಗಿದೆ.ಮಾಲ್ಡೀವ್ಸ್‌ನೊಂದಿಗೆ ಪಾಲುದಾರಿಕೆಯಲ್ಲಿ ಈ ಪ್ರಾಜೆಕ್ಟ್‌ನಲ್ಲಿ ಕೈಜೊಡಿಸಲು ಭಾರತವು ಸಿದ್ಧವಿದೆ.
ಮಾಲ್ಡೀವ್ಸ್‌ನಲ್ಲಿ ಪೋಲಿಸ್ ಅಕಾಡಮಿಯ ಸ್ಥಾಪನೆ, ರಕ್ಷಣಾ ಕಾರ್ಯಲಯದ ಕಟ್ಟಡದ ನಿರ್ಮಾಣ ಮತ್ತು ಭದ್ರತೆಗೆ ಸಂಬಂಧಿಸಿದ ಮೂಲ ಸೌಕರ್ಯ ಪರಿಯೋಜನೆಗಳಲ್ಲೂ ನಾವು ವೇಗವಾಗಿ ಕಾರ್ಯನಿರ್ವಹಿಸುವ ನಿರ್ಣಯವನ್ನು ಮಾಡಿದ್ದೇವೆ.
ದಕ್ಷಿಣ ಏಶಿಯಾದ ಗಡಿಯಾಚೆಗಿನ ಉಗ್ರವಾದ ಮತ್ತು ತೀವ್ರವಾದಿ ವಿಚಾರಧಾರೆಯಿಂದಾಗುತ್ತಿರುವ ಹಾನಿ ಮತ್ತು ಅಪಾಯಗಳ ಬಗ್ಗೆ ನಾನು ಮತ್ತು ರಾಷ್ಟ್ರಪತಿ ಯಾಮೀನ್‌ರವರು ಸಂಪೂರ್ಣ ಜಾಗೃತಿ….. ಎಚ್ಚರಿಕೆಯಿಂದಿದ್ದೇವೆ.
ಈ ಸವಾಲನ್ನು ಗಮನದಲ್ಲಿಟ್ಟುಕೊಂಡು ಎರಡೂ ದೇಶಗಳ ಎಜೆನ್ಸಿಗಳ ನಡುವೆ ಮಾಹಿತಿ ವಿನಿಮಯ ಮತ್ತು ಮಾಲ್ಡೀವ್ಸ್‌ನ ಪೋಲಿಸ್ ಮತ್ತು ರಕ್ಷಣಾ ಸೇನೆಯ ತರಬೇತಿ ಮತ್ತು ಅವುಗಳ ಕಾರ್ಯಕ್ಷಮತೆಯ ಅಭಿವೃದ್ಧಿಯು ನಮ್ಮ ಸುರಕ್ಷಾ ಸಹಭಾಗಿತ್ವದ ಮಹತ್ವಪೂರ್ಣ ಭಾಗವಾಗಿದೆ. ಪ್ರಾಕೃತಿಕ ವಿಕೋಪಗಳ ಸಂದರ್ಭಗಳಲ್ಲಿ ಪರಿಹಾರ ಮತ್ತು ರಕ್ಷಣಾ ಕಾರ್ಯಗಳಲ್ಲಿ ನಮ್ಮ ಗೆಳೆತನವನ್ನು…. ನಮ್ಮ ಪಾಲುದಾರಿಕೆ ಗಳನ್ನು ಇನ್ನೂ ಹೆಚ್ಚು ಬಲಪಡಿಸಲು ಎರಡೂ ದೇಶಗಳು ಸಹಮತ ವ್ಯಕ್ತಪಡಿಸಿವೆ.
ಗೆಳೆಯರೆ,
ನಾವಿಬ್ಬರೂ ವ್ಯಾಪಾರ, ಆರ್ಥಿಕ ಮತ್ತು ಹೂಡಿಕೆಗಳಲ್ಲಿ ಸಹಭಾಗಿತ್ವದ ವಿಕಾಸದ ಬಗೆಗೂ ವಿಸ್ತಾರವಾಗಿ ಮಾತುಕತೆ
ನಡೆಸಿದೆವು. ಭಾರತದಲ್ಲಿ ನಡೆಯುವ “ಮೂರನೇ ಮಾಲ್ಡೀವ್ಸ್ ಹೂಡಿಕೆ ವೇದಿಕೆಯ” ಕಾರ್ಯಕ್ರಮವನ್ನು ನಾವು ಸ್ವಾಗತಿಸುತ್ತೇವೆ. ಇದು ಎರಡೂ ದೇಶಗಳ ನಡುವಿನ ಬಂಡವಾಳ ಹೂಡಿಕೆ ಮತ್ತು ವ್ಯಾಪಾರ ವಹಿವಾಟಿನ ಸಂಬಂಧಗಳನ್ನು ಇನ್ನೂ ಬಲಪಡಿಸುತ್ತದೆ.
ಆರೋಗ್ಯ ಸೇವೆಗಳಲ್ಲಿ ನಮ್ಮ ಸಹಭಾಗಿತ್ವವು ಪ್ರಾಥಮಿಕ ಆದ್ಯತೆಯಾಗಿದೆ. 1995 ರಲ್ಲಿ ಮಾಲ್ಡೀವ್ಸ್‌ನಲ್ಲಿ ಭಾರತ ನಿರ್ಮಿತ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸುವುದು , ಡಾಕ್ಟರುಗಳ ತಂಡವನ್ನು ಇನ್ನೂ ಸಶಕ್ತಗೊಳಿಸುವುದು, ಆರೋಗ್ಯಕ್ಕೆ ಸಂಬಂಧಿಸಿದ ಸಂಸ್ಥೆಗಳ ನಿರ್ಮಾಣ, ಔಷಧಿಗಳನ್ನು ಒದಗಿಸುವುದು ಮತ್ತು ಆರೋಗ್ಯ ಸೇವೆಗಳಿಗೆ ಸಂಬಂಧಿಸಿದ ಆಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವುದು ಇದರ ಮುಖ್ಯ ಅಂಗಗಳಾಗಿವೆ.
ಪ್ರವಾಸೋದ್ಯಮ ಕ್ಷೇತ್ರದಲ್ಲಿ ಆದ ಇಂದಿನ ಒಪ್ಪಂದ ಎರಡೂ ದೇಶಗಳ ಆರ್ಥಿಕ ಮತ್ತು ಜನರಿಂದ ಜನರಿಗೆ ಸಂಬಂಧಗಳನ್ನು ಹೆಚ್ಚಿಸುವುದು.
ಇಂದಿನ ನಮ್ಮ ಸಹಭಾಗಿತ್ವದ ಯಾತ್ರೆ, ಜಲ ಮತ್ತು ನೆಲಗಳನ್ನು ದಾಟಿ ಅಂತರಿಕ್ಷವನ್ನೂ ತಲಪುತ್ತಿದೆ. ದಕ್ಷಿಣ ಏಷ್ಯಾ ಉಪಗ್ರಹ ಒಪ್ಪಂದದ ಅನುಸಾರ ಹಾಕಲಾದ ಹಸ್ತಾಕ್ಷರಗಳಿಂದಾಗಿ ಮಾಲ್ಡೀವ್ಸ್ ಮತ್ತು ಇತರೇ ದಕ್ಷಿಣ ಏಶಿಯಾ ದೇಶಗಳಿಗೆ, ಶಿಕ್ಷಣ, ಆರೋಗ್ಯ ಮತ್ತು ಪ್ರವಾಸೋಧ್ಯಮ ಕ್ಷೇತ್ರಗಳಿಗೆ ಅತಿ ಹೆಚ್ಚಿನ ಲಾಭವು ದೊರೆಯುವುದು.
ಮಾಲ್ಡೀವ್ಸ್ ಒಂದು ಶ್ರೀಮಂತ ಸಾಂಸ್ಕೃತಿಕ ಪರಂಪರೆಯಾಗಿದೆ. ಪ್ರಾಚೀನ ಮಸೀದಿಗಳು ಮತ್ತು ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆಗಾಗಿ ಮತ್ತು ಅವುಗಳ ದುರಸ್ತಿಗಾಗಿ ಇಂದು ಮಾಡಿಕೊಂಡ ಒಪ್ಪಂದವು ನಮ್ಮ ಸಾಂಸ್ಕೃತಿಕ ಸಂಬಂಧಗಳನ್ನು ಇನ್ನೂ ಹೆಚ್ಚು ಬಲಪಡಿಸುತ್ತದೆ.
ಗೆಳೆಯರೆ,
ರಾಷ್ಟ್ರಪತಿಗಳಾದ ಯಾಮೀನ್‌ರವರು ಮಾಲ್ಡೀವ್ಸ್‌ನಲ್ಲಿ ಆಗುತ್ತಿರುವ ರಾಜನೈತಿಕ ಹಾಗೂ ಸಾಂಸ್ಥಿಕ ಸುಧಾರಣೆಗಳ ಕುರಿತು ನನಗೆ ಸಂಪೂರ್ಣ ಮಾಹಿತಿಯನ್ನು ಒದಗಿಸಿದ್ದಾರೆ. ನಾಗರಿಕರ ಮತ್ತು ಅವರ ರಾಜಕೀಯ ಜೀವನವನ್ನು ಸಶಕ್ತಗೊಳಿಸುವ ಮಾಲ್ಡೀವ್ಸ್ ದೇಶದ ಯಾವುದೇ ಪ್ರಯತ್ನಗಳನ್ನು ಭಾರತ ದೇಶವು ಪ್ರಬಲವಾಗಿ ಸಮರ್ಥಿಸುತ್ತದೆ.
ಘನತೆವೆತ್ತ ಯಾಮೀನ್ ರವರೇ,
ಯಾವುದೇ ಸಂದರ್ಭದಲ್ಲಿ ಮಾಲ್ಡೀವ್ಸ್ ದೇಶದ ಯಶಸ್ಸಿನ ಯಾತ್ರೆಯಲ್ಲಿ ಭಾರತವು ನಿಮ್ಮೊಂದಿಗೆ ಜತೆಜತೆ ಯಾಗಿ ಸಾಗುತ್ತದೆ. ಭಾರತ ದೇಶವು ಸದಾ ಮಾಲ್ಡೀವ್ಸ್‌ನ ಜನತೆಯ ದೃಢ ಮಿತ್ರನಾಗಿ ಹಾಗೂ ವಿಶ್ವಾಸಿ ಪಾಲುದಾರನಾಗಿ ಇರುತ್ತದೆ.
ಈ ಮಾತುಗಳೊಂದಿಗೆ ನಾನು ಮತ್ತೊಮ್ಮೆ ನಿಮ್ಮನ್ನು ಭರತಭೂಮಿಯಲ್ಲಿಂದು ಸ್ವಾಗತಿಸುತ್ತಿದ್ದೇನೆ.
ಧನ್ಯವಾದಗಳು.
******
President Abdulla Yameen Abdul Gayoom of Maldives and PM @narendramodi meet in New Delhi, discuss bilateral ties. pic.twitter.com/xn3zMWuuQL
— PMO India (@PMOIndia) April 11, 2016
आज भारत और मालदीव्स की सहभागिता के इतिहास में एक अहम दिन है: PM begins his speech at the joint press meet https://t.co/djMB5JfeBf
— PMO India (@PMOIndia) April 11, 2016
आपकी इस भारत यात्रा पर आपका हार्दिक स्वागत है। दिल्ली में आपकी मौजूदगी मेरे लिए व्यक्तिगत रूप से बहुत खुशी की बात है: PM @narendramodi
— PMO India (@PMOIndia) April 11, 2016
मालदीव्स भारत के सबसे घनिष्ट सहयोगियों में से एक है: PM @narendramodi https://t.co/djMB5JfeBf
— PMO India (@PMOIndia) April 11, 2016
मालदीव्स की प्रगति, सुरक्षा और आर्थिक विकास जितना आपका मकसद है, उतना ही हमारा भी लक्ष्य है: PM @narendramodi https://t.co/djMB5JfeBf
— PMO India (@PMOIndia) April 11, 2016
भारत का आर्थिक विकास हमारे पड़ोसी देशों की तरक्की के बिना अधूरा है: PM @narendramodi https://t.co/djMB5JfeBf
— PMO India (@PMOIndia) April 11, 2016
मैंने राष्ट्रपति यामीन के साथ दोनों देशों के बीच संबंधों से जुड़े सभी विषयों पर विस्तार से बातचीत की है: PM @narendramodi
— PMO India (@PMOIndia) April 11, 2016
हम दोनों ने व्यापार, आर्थिक और निवेश में साझेदारी के विकास पर भी विस्तार से बात की: PM @narendramodi https://t.co/djMB5JfeBf
— PMO India (@PMOIndia) April 11, 2016
स्वास्थ्य सेवाओं में सहभागिता हमारी प्राथमिकता है: PM @narendramodi
— PMO India (@PMOIndia) April 11, 2016
भारत हमेशा मालदीव्स की जनता का सुदृढ़ मित्र और विश्वसनीय पार्टनर रहेगा: PM @narendramodi
— PMO India (@PMOIndia) April 11, 2016