ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆ 2021ರಲ್ಲಿ ಮಾಲ್ಡವೀಸ್ ನ ಅಡ್ಡು ನಗರದಲ್ಲಿ ಭಾರತದ ಹೊಸ ಕಾನ್ಸುಲೇಟ್ ಜನರಲ್ ಕಚೇರಿಯನ್ನು ಆರಂಭಿಸಲು ಅನುಮೋದನೆ ನೀಡಿತು.
ಭಾರತ ಮತ್ತು ಮಾಲ್ಡವೀಸ್ ಪ್ರಾಚೀನ ಕಾಲದಿಂದಲೂ ಜನಾಂಗೀಯ, ಭಾಷಾ, ಸಾಂಸ್ಕೃತಿಕ, ಧಾರ್ಮಿಕ ಮತ್ತು ವಾಣಿಜ್ಯ ಸಂಬಂಧಗಳನ್ನು ಹೊಂದಿದೆ. ಭಾರತ ಸರ್ಕಾರದ ಸಾಗರ್ (ಪ್ರದೇಶದ ಎಲ್ಲ ರಾಷ್ಟ್ರಗಳ ಪ್ರಗತಿ ಮತ್ತು ಭದ್ರತೆ) ಮುನ್ನೋಟ ಮತ್ತು ‘ನೆರೆ ಹೊರೆ ಮೊದಲು ನೀತಿ’ಯಲ್ಲಿ ಮಾಲ್ಡವೀಸ್ ಪ್ರಮುಖ ಸ್ಥಾನವನ್ನು ಹೊಂದಿದೆ.
ಅಡ್ಡುವಿನಲ್ಲಿ ಕಾನ್ಸುಲೇಟ್ ಕಚೇರಿ (ರಾಯಭಾರ ಕಚೇರಿ) ಆರಂಭಿಸುವುದರಿಂದ ಮಾಲ್ಡವೀಸ್ ನಲ್ಲಿ ಭಾರತ ರಾಜತಾಂತ್ರಿಕ ಉಪಸ್ಥಿತಿಯನ್ನು ಹೆಚ್ಚಿಸಲು ಸಹಾಯಕವಾಗುತ್ತದೆಯಲ್ಲದೆ, ಇದು ಹಾಲಿ ಅಸ್ಥಿತ್ವದಲ್ಲಿರುವ ಮತ್ತು ನಿರೀಕ್ಷಿತ ಮಟ್ಟದ ಪಾಲುದಾರಿಕೆಯನ್ನು ಹೊಂದಲು ನೆರವಾಗುತ್ತದೆ.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಮಾಲ್ಡವೀಸ್ ಅಧ್ಯಕ್ಷ ಸೋಲಿಹ್ ಅವರ ನಾಯಕತ್ವದಲ್ಲಿ ದ್ವಿಪಕ್ಷೀಯ ಸಂಬಂಧ ನಿರೀಕ್ಷೆಗೂ ಮೀರಿದ ಮಟ್ಟದಲ್ಲಿ ವೇಗ ಮತ್ತು ಶಕ್ತಿಯನ್ನು ಪಡೆದುಕೊಂಡಿದೆ.
ನಮ್ಮ ರಾಷ್ಟ್ರೀಯ ಪ್ರಗತಿ ಮತ್ತು ಅಭಿವೃದ್ಧಿಯ ಆದ್ಯತೆ ಅಥವಾ ‘ಸಬ್ ಕಾ ಸಾಥ್ , ಸಬ್ ಕಾ ವಿಕಾಸ್’ ಪಾಲನೆಯಲ್ಲಿ ಇದು ಮುಂದೆ ಹೆಜ್ಜೆ ಇಡುವ ಪ್ರಮುಖ ಕ್ರಮವಾಗಿದೆ. ಭಾರತದ ರಾಜತಾಂತ್ರಿಕ ಉಪಸ್ಥಿತಿಯ ಬಲವರ್ಧನೆಯು ಭಾರತೀಯ ಕಂಪನಿಗಳಿಗೆ ಮಾರಕಟ್ಟೆಯನ್ನು ಒದಗಿಸಲಿದೆ ಮತ್ತು ಭಾರತದ ಸರಕು ಮತ್ತು ಸೇವೆಗಳ ರಫ್ತು ವೃದ್ಧಿಸುತ್ತದೆ. ಇದು ನಮ್ಮ ಸ್ವಾವಲಂಬಿ ಭಾರತ ಅಥವಾ ‘ಆತ್ಮ ನಿರ್ಭರ್ ಭಾರತ’ ಗುರಿಯೊಂದಿಗೆ ದೇಶೀಯ ಉತ್ಪಾದನೆ ಮತ್ತು ಉದ್ಯೋಗಾವಕಾಶಗಳನ್ನು ಹೆಚ್ಚಳದಲ್ಲಿ ನೇರ ಪರಿಣಾಮ ಬೀರುತ್ತದೆ.
***