Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಮಾರ್ಚ್ 9ರಂದು ಶ್ರೀಮದ್ ಭಗವದ್ಗೀತೆಯ ಶ್ಲೋಕಗಳ ಕುರಿತು 21 ವಿದ್ವಾಂಸರ ವ್ಯಾಖ್ಯಾನಗಳಿರುವ ಹಸ್ತಪ್ರತಿ ಬಿಡುಗಡೆ ಮಾಡಲಿರುವ ಪ್ರಧಾನಮಂತ್ರಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2021 ಮಾರ್ಚ್ 9ರಂದು ಸಂಜೆ 5 ಗಂಟೆಗೆ ನವದೆಹಲಿಯ ಲೋಕ ಕಲ್ಯಾಣ ಮಾರ್ಗ ದಲ್ಲಿ  ಶ್ರೀಮದ್ ಭಗವದ್ಗೀತೆಯ ಶ್ಲೋಕಗಳ ಕುರಿತು 21 ವಿದ್ವಾಂಸರ ವ್ಯಾಖ್ಯಾನಗಳಿರುವ 11 ಹಸ್ತಪ್ರತಿಗಳ ಸಂಪುಟಗಳನ್ನು ಬಿಡುಗಡೆ ಮಾಡಲಿದ್ದಾರೆಜಮ್ಮು ಮತ್ತು ಕಾಶ್ಮೀರದ ರಾಜ್ಯಪಾಲರಾದ ಶ್ರೀ ಮನೋಜ್ ಸಿನ್ಹಾ ಮತ್ತು ಕರಣ್ ಸಿಂಗ್ ಸಂದರ್ಭದಲ್ಲಿ ಉಪಸ್ಥಿತರಿರಲಿದ್ದಾರೆ.

ಶ್ರೀಮದ್ ಭಗವದ್ಗೀತ: ಮೂಲ ಸುಂದರ ಬರವಣಿಗೆ (ಕ್ಯಾಲಿಗ್ರಫಿ) ಯಲ್ಲಿರುವ ಸಂಸ್ಕೃತದ ಅಪರೂಪದ ಅನೇಕ ವ್ಯಾಖ್ಯಾನಗಳು

ಶ್ರೀಮದ್ ಭಗವದ್ದೀತೆಯ ಪಠ್ಯವನ್ನು ಒಂದೇ ವ್ಯಾಖ್ಯಾನದೊಂದಿಗೆ ಪ್ರಸ್ತುತಪಡಿಸುವುದು ಸಾಮಾನ್ಯವಾಗಿ ನಡೆದುಕೊಂಡು ಬಂದಿರುವ ಪದ್ದತಿಆದರೆ ಇದೇ ಮೊದಲ ಬಾರಿಗೆ ಶ್ರೀಮದ್ ಭಗವದ್ದೀತೆಯ ಸಮಗ್ರ ಮತ್ತು ತುಲನಾತ್ಮಕ ರೀತಿಯಲ್ಲಿ ಮೆಚ್ಚುಗೆಯನ್ನು ಗಳಿಸುವಂತೆ ಸಾಧ್ಯವಾಗಲು ಭಾರತದ ಹಲವು ವಿದ್ವಾಂಸರು ತಮ್ಮ ಸುಂದರ ಬರವಣಿಗೆಯಲ್ಲಿ ಮಾಡಿರುವ ಪ್ರಮುಖ ವ್ಯಾಖ್ಯಾನಗಳನ್ನು ಒಗ್ಗೂಡಿಸಲಾಗಿದೆ. ಶಂಕರ ಭಾಷ್ಯದಿಂದ ಹಿಡಿದು ಭಾಷಾನುವಾದದವರೆಗೆ ಭಾರತೀಯ ಕ್ಯಾಲಿಗ್ರಫಿಯ ಅಸಾಧಾರಣ ವೈವಿಧ್ಯತೆ ಮತ್ತು ಸೂಕ್ಷ್ಮತೆಯನ್ನು ಒಳಗೊಂಡಿರುವ ಹಸ್ತಪತ್ರಿಗಳನ್ನು ಧರ್ಮಾರ್ಥ ಟ್ರಸ್ಟ್ ಪ್ರಕಟಿಸುತ್ತಿದೆಡಾ. ಕರಣ್ ಸಿಂಗ್  ಜಮ್ಮು ಮತ್ತು ಕಾಶ್ಮೀರದಲ್ಲಿರುವ ಧರ್ಮಾರ್ಥ ಟ್ರಸ್ಟ್ ಅಧ್ಯಕ್ಷರಾಗಿದ್ದಾರೆ

***