Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಮಾರಿಷಸ್ ಭೇಟಿಗೆ ಮುನ್ನ ಪ್ರಧಾನಮಂತ್ರಿಯವರ ನಿರ್ಗಮನದ ಹೇಳಿಕೆ


ಮಾರಿಷಸ್‌ ಪ್ರಧಾನಿ, ನನ್ನ ಸ್ನೇಹಿತ ಡಾ. ನವೀನ್ ಚಂದ್ರ ರಾಮಗೂಲಂ ಅವರ ಆಹ್ವಾನದ ಮೇರೆಗೆ, ನಾನು ಮಾರಿಷಸ್‌ ನ 57ನೇ ರಾಷ್ಟ್ರೀಯ ದಿನಾಚರಣೆಯಲ್ಲಿ ಪಾಲ್ಗೊಳ್ಳಲು ಆ ರಾಷ್ಟ್ರಕ್ಕೆ ಎರಡು ದಿನಗಳ ಭೇಟಿ ಕೈಗೊಳ್ಳುತ್ತಿದ್ದೇನೆ.

ಮಾರಿಷಸ್ ನೆರೆಯ ಕಡಲ ರಾಷ್ಟ್ರ, ಹಿಂದೂ ಮಹಾಸಾಗರದಲ್ಲಿ ಪ್ರಮುಖ ಪಾಲುದಾರ ಮತ್ತು ಆಫ್ರಿಕಾ ಖಂಡದ ಹೆಬ್ಬಾಗಿಲಾಗಿದೆ. ನಾವು ಐತಿಹಾಸಿಕ, ಭೌಗೋಳಿಕ ಮತ್ತು ಸಾಂಸ್ಕೃತಿಕ ಸಂಪರ್ಕ ಹೊಂದಿದ್ದೇವೆ. ಪರಸ್ಪರ ಆಳವಾದ ನಂಬಿಕೆ, ಪ್ರಜಾಪ್ರಭುತ್ವದ ಮೌಲ್ಯಗಳಲ್ಲಿ ಹಂಚಿತ ವಿಶ್ವಾಸ ಮತ್ತು ನಮ್ಮ ವೈವಿಧ್ಯತೆಯ ಆಚರಣೆಯು ನಮ್ಮ ಶಕ್ತಿಯಾಗಿದೆ. ನಿಕಟ ಮತ್ತು ಜನರ ನಡುವಿನ ಐತಿಹಾಸಿಕ ಬಾಂಧವ್ಯವು ನಮ್ಮ ಹಂಚಿತ ಹೆಮ್ಮೆಯ ಮೂಲವಾಗಿದೆ. ಕಳೆದ ಹತ್ತು ವರ್ಷಗಳಲ್ಲಿ ನಾವು ಜನಕೇಂದ್ರಿತ ಉಪಕ್ರಮಗಳೊಂದಿಗೆ ಗಮನಾರ್ಹ ಪ್ರಗತಿಯನ್ನು ಸಾಧಿಸಿದ್ದೇವೆ.

ಮಾರಿಷಸ್ ನಾಯಕತ್ವದೊಂದಿಗೆ ನಮ್ಮ ಪಾಲುದಾರಿಕೆಯನ್ನು ಅದರ ಎಲ್ಲಾ ಅಂಶಗಳಲ್ಲಿ ಉನ್ನತೀಕರಿಸಲು ಹಾಗೂ ನಮ್ಮ ಜನರ ಪ್ರಗತಿ ಮತ್ತು ಸಮೃದ್ಧಿಗಾಗಿ ನಮ್ಮ ನಿರಂತರ ಸ್ನೇಹವನ್ನು ಸದೃಢಗೊಳಿಸಲು ನಾನು ಎದುರು ನೋಡುತ್ತಿದ್ದೇನೆ. ಜೊತೆಗೆ, ನಮ್ಮ ಸಾಗರ ಮುನ್ನೋಟ “ವಿಷನ್ ಸಾಗರ್“ ಭಾಗವಾಗಿ ಹಿಂದೂ ಮಹಾಸಾಗರ ಪ್ರದೇಶದ ಭದ್ರತೆ ಮತ್ತು ಅಭಿವೃದ್ಧಿಗಾಗಿ ಆ ರಾಷ್ಟ್ರದೊಂದಿಗೆ ತೊಡಗಿಸಿಕೊಳ್ಳುವ ಅವಕಾಶ ಎದುರು ನೋಡುತ್ತಿದ್ದೇನೆ.

ಈ ಭೇಟಿಯು ಗತಕಾಲದ ಅಡಿಪಾಯದ ಮೇಲೆ ನಿರ್ಮಾಣವಾಗಿ ಭಾರತ ಮತ್ತು ಮಾರಿಷಸ್ ಬಾಂಧವ್ಯದಲ್ಲಿ ಹೊಸ ಮತ್ತು ಉಜ್ವಲ ಅಧ್ಯಾಯವನ್ನು ತೆರೆಯಲಿದೆ ಎಂದು ನನಗೆ ವಿಶ್ವಾಸವಿದೆ.

 

*****