Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಮಾರಿಷಸ್ ಪ್ರಧಾನಿಯೊಂದಿಗೆ ಪ್ರಧಾನಿ ಮೋದಿ ದೂರವಾಣಿ ಮಾತುಕತೆ


ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಇಂದು ಮಾರಿಷಸ್‌ನ ಪ್ರಧಾನಿ ಪ್ರವೀಂದ್ ಜಗ್ನೌಥ್ ಅವರೊಂದಿಗೆ ದೂರವಾಣಿ ಮಾತುಕತೆ ನಡೆಸಿದರು.

ಅಂಫಾನ್ ಚಂಡಮಾರುತದಿಂದ ಭಾರತದಲ್ಲಿ ಆಗಿರುವ ಹಾನಿಗೆ ಪ್ರಧಾನಿ ಜಗ್ನೌಥ್ ಸಂತಾಪ ಸೂಚಿಸಿದರು. ‘ಆಪರೇಷನ್ ಸಾಗರ್’ ನ ಭಾಗವಾಗಿ ಭಾರತೀಯ ನೌಕಾ ಹಡಗು ‘ಕೇಸರಿ’ ಯನ್ನು ಕೋವಿಡ್-19 ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಮಾರಿಷಸ್ ಆರೋಗ್ಯ ಅಧಿಕಾರಿಗಳಿಗೆ ಸಹಾಯ ಮಾಡಲು ಔಷಧಿಗಳ ರವಾನೆ ಮತ್ತು 14 ಸದಸ್ಯರ ವೈದ್ಯಕೀಯ ತಂಡದೊಂದಿಗೆ ಮಾರಿಷಸ್‌ಗೆ ಕಳುಹಿಸಿದ್ದಕ್ಕಾಗಿ ಅವರು ಪ್ರಧಾನ ಮಂತ್ರಿಯವರಿಗೆ ಧನ್ಯವಾದ ತಿಳಿಸಿದರು,

ಭಾರತ ಮತ್ತು ಮಾರಿಷಸ್ ಮಧ್ಯೆ ವಿಶೇಷವಾದ ಜನರು-ಜನರ ನಡುವಿನ ಸಂಬಂಧಗಳನ್ನು ಸ್ಮರಿಸಿದ ಪ್ರಧಾನಿ, ಬಿಕ್ಕಟ್ಟಿನ ಈ ಸಮಯದಲ್ಲಿ ತನ್ನ ಸ್ನೇಹಿತರನ್ನು ಬೆಂಬಲಿಸುವುದು ಭಾರತದ ಕರ್ತವ್ಯ ಎಂದು ಹೇಳಿದರು.

ಪ್ರಧಾನಿ ಜುಗ್ನಾಥ್ ಅವರ ನೇತೃತ್ವದಲ್ಲಿ ಮಾರಿಷಸ್ ಅಳವಡಿಸಿಕೊಂಡಿರುವ ಪರಿಣಾಮಕಾರಿ ಕೋವಿಡ್-19 ನಿಗ್ರಹ ಕ್ರಮಗಳ ಪರಿಣಾಮವಾಗಿ ಹಲವಾರು ವಾರಗಳವರೆಗೆ ಯಾವುದೇ ಹೊಸ ಪ್ರಕರಣಗಳು ವರದಿಯಾಗಿಲ್ಲದಿರುವ ಬಗ್ಗೆ ಪ್ರಧಾನಿ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು, ಮಾರಿಷಸ್ ತನ್ನ ಉತ್ತಮ ಅಭ್ಯಾಸಗಳನ್ನು ದಾಖಲಿಸಬಹುದು, ಇದು ಇತರ ದೇಶಗಳಿಗೆ, ವಿಶೇಷವಾಗಿ ದ್ವೀಪ ರಾಷ್ಟ್ರಗಳಿಗೆ ಇದೇ ರೀತಿಯ ಆರೋಗ್ಯ ಬಿಕ್ಕಟ್ಟುಗಳನ್ನು ಎದುರಿಸಲು ಸಹಾಯ ಮಾಡುತ್ತದೆ ಎಂದು ಅವರು ಸಲಹೆ ನೀಡಿದರು,

ಮಾರಿಷಸ್‌ನ ಆರ್ಥಿಕ ವಲಯವನ್ನು ಬೆಂಬಲಿಸುವುದು ಮತ್ತು ಮಾರಿಷಸ್ ಯುವಕರಿಗೆ ಆಯುರ್ವೇದ ಔಷಧವ ಪದ್ಧತಿಯನ್ನು ಅಧ್ಯಯನ ಮಾಡಲು ಅನುವು ಮಾಡಿಕೊಡುವುದು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಹಕಾರವನ್ನು ಹೆಚ್ಚಿಸುವ ಕುರಿತು ಉಭಯ ನಾಯಕರು ಚರ್ಚಿಸಿದರು.

ಮಾರಿಷಸ್ ಜನರ ಆರೋಗ್ಯ ಮತ್ತು ಯೋಗಕ್ಷೇಮಕ್ಕಾಗಿ ಮತ್ತು ಉಭಯ ದೇಶಗಳ ನಡುವಿನ ವಿಶಿಷ್ಟವಾದ ಸೌಹಾರ್ದ ಸಂಬಂಧಗಳನ್ನು ನಿರ್ವಹಿಸುತ್ತಿರುವುದಕ್ಕಾಗಿ ಪ್ರಧಾನಿಯವರು ತಮ್ಮ ಶುಭಾಶಯಗಳನ್ನು ತಿಳಿಸಿದರು.