Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಮಾರಿಷಸ್ ಪ್ರಧಾನಿಯವರ ಅಧಿಕೃತ ಭಾರತ ಭೇಟಿ ವೇಳೆ (ಮೇ 27, 2017) ಪ್ರಧಾನಮಂತ್ರಿಯರ ಮಾಧ್ಯಮ ಹೇಳಿಕೆ

ಮಾರಿಷಸ್ ಪ್ರಧಾನಿಯವರ ಅಧಿಕೃತ ಭಾರತ ಭೇಟಿ ವೇಳೆ (ಮೇ 27, 2017) ಪ್ರಧಾನಮಂತ್ರಿಯರ ಮಾಧ್ಯಮ ಹೇಳಿಕೆ


ಘನತೆವೆತ್ತ ಪ್ರಧಾನಿ ಪ್ರವೀಂದ್ ಜುಗ್ನೌತ್ ಅವರೇ,

ಮಾಧ್ಯಮದ ಗೆಳೆಯರೇ,

ಮಹಿಳೆಯರೇ ಮತ್ತು ಮಹನೀಯರೇ,

ಪ್ರಧಾನಿ ಪ್ರವೀಂದ್ ಜುಗ್ನೌತ್ ಮತ್ತು ಅವರ ನಿಯೋಗವನ್ನು ಭಾರತಕ್ಕೆ ಸ್ವಾಗತಿಸಲು ತುಂಬಾ ಸಂತೋಷವೆನಿಸುತ್ತದೆ. ಘನತೆವೆತ್ತರೇ, ಈ ವರ್ಷ ನೀವು ಮಾರಿಷಸ್ ನ ನೂತನ ಪ್ರಧಾನಮಂತ್ರಿಗಳಾಗಿ ಜವಾಬ್ದಾರಿ ವಹಿಸಿಕೊಂಡ ತರುವಾಯ ನಿಮ್ಮ ಮೊದಲ ಸಾಗರೋತ್ತರ ಭೇಟಿಗೆ ಭಾರತವನ್ನು ಆಯ್ಕೆ ಮಾಡಿಕೊಂಡಿರುವುದು ನಿಜಕ್ಕೂ ನಮಗೆ ಗೌರವದ ಸಂಗತಿ. ನಿಮ್ಮ ಈ ಭೇಟಿ ಎರಡು ಶತಮಾನಗಳಿಂದ ಅಸ್ತಿತ್ವದಲ್ಲಿರುವ ಮತ್ತು ವರ್ಧಿಸುತ್ತಿರುವ ನಮ್ಮ ಬಾಂಧವ್ಯದ ಆಳವನ್ನು ಬಿಂಬಿಸುತ್ತದೆ. ನಮ್ಮ ಸಮಾಜದಲ್ಲಿ ಮತ್ತು ನಮ್ಮ ಜನರ ನಡುವೆ ಇದು ಆಳವಾಗಿ ಬೇರೂರಿದೆ. ಕಾಲ ಮತ್ತು ದೂರದ ನಡುವೆಯೂ ನಮ್ಮ ಬಾಂಧವ್ಯ ಪ್ರವರ್ಧಮಾನಕ್ಕೆ ಬರುತ್ತಿದೆ. ಇಂದು,ಅವು ವೈವಿಧ್ಯಮಯ ಕ್ಷೇತ್ರಗಳಲ್ಲಿ ನಮ್ಮ ಶ್ರೀಮಂತ ಸ್ನೇಹದ ನಂಟು ಬೆಸೆಯುತ್ತಿವೆ.
ಸ್ನೇಹಿತರೇ,

ಪ್ರಧಾನಿ ಜುಗ್ನೌತ್ ಅವರೊಂದಿಗೆ ನನ್ನ ಮಾತುಕತೆ ಆತ್ಮೀಯ ಹಾಗೂ ಫಲಪ್ರದವಾಗಿತ್ತು. ನಮ್ಮ ಮಾತುಕತೆಯು ನಾನು 2015ರಲ್ಲಿ ಮಾರಿಷಸ್ ಗೆ ಭೇಟಿ ನೀಡಿದ್ದನ್ನು ಸ್ಮರಿಸುವಂತೆ ಮಾಡಿತು. ಹಿಂದೂ ಮಹಾಸಾಗರ ಪ್ರದೇಶದ ದೇಶಕ್ಕೆ ನನ್ನ ಮೊದಲ ಭೇಟಿ ಆಗಿತ್ತು, ಇದು ನಮ್ಮ ಸಹಕಾರಕ್ಕೆ ಚೈತನ್ಯ ನೀಡಿತು. ಅದು ನಮ್ಮ ಮೌಲ್ಯಗಳು, ಹಿತ ಮತ್ತು ಪ್ರಯತ್ನಗಳ ಸಮಾನತೆಯನ್ನು ಒತ್ತಿ ಹೇಳಿದ್ದವು.

ಸ್ನೇಹಿತರೆ,

ಇಂದು ನಾವು ನಮ್ಮ ದ್ವಿಪಕ್ಷೀಯ ಕಾರ್ಯಕ್ರಮದಲ್ಲಿ ಮತ್ತೂ ಒಂದು ಹೆಜ್ಜೆ ಇಟ್ಟಿದ್ದೇವೆ. ಹಿಂದೂ ಮಹಾಸಾಗರದ ಮುಂಚೂಣಿ ರಾಷ್ಟ್ರಗಳಾಗಿ, ಪ್ರಧಾನಮಂತ್ರಿ ಜುಗ್ನೌತ್ ಮತ್ತು ನಾನು ನಮ್ಮ ಇಇಜಡ್ ಗಳಲ್ಲಿ ಮತ್ತು ನಮ್ಮ ಕರಾವಳಿಯಲ್ಲಿ ಮತ್ತು ಸಾಗರ ಭದ್ರತೆಯ ಖಾತ್ರಿ ಪಡಿಸುವ ಹೊಣೆಗಾರಿಕೆಗೆ ಒಪ್ಪಿಗೆ ಸೂಚಿಸಿದ್ದೇವೆ. ನಮ್ಮ ಆರ್ಥಿಕ ಅವಕಾಶಗಳಿಗಾಗಿ ಹಿಂದೂ ಮಹಾ ಸಾಗರದಲ್ಲಿ ಸಾಂಪ್ರದಾಯಿಕ ಮತ್ತು ಅಸಾಂಪ್ರದಾಯಿಕ ಭೀತಿಗಳನ್ನು ಸಮರ್ತವಾಗಿ ನಿರ್ವಹಿಸಲು; ನಮ್ಮ ಸಮುದಾಯಗಳ ಜೀವನೋಪಾಯ ರಕ್ಷಿಸಲು ಮತ್ತು ನಮ್ಮ ಜನತೆಗೆ ಭದ್ರತೆ ಒದಗಿಸಲು ನಾವು ಒಪ್ಪಿದ್ದೇವೆ. ಇದಕ್ಕಾಗಿ ಭಾರತ- ಮಾರಿಷಸ್ ಸಹಕಾರ ಮಹತ್ವದ್ದಾಗಿದೆ.

· ನಾವು ನಮ್ಮ ನಿಗವನ್ನು ಇತ್ತ ಕೇಂದ್ರೀಕರಿಸಬೇಕಾಗಿದೆ: ವಾಣಿಜ್ಯ ಮತ್ತು ಪ್ರವಾಸೋದ್ಯಮದ ಮೇಲೆ ಪರಿಣಾಮ ಬೀರಿರುವಕಡಲಗಳ್ಳತನ;

· ಮಾನವ ಮತ್ತು ಮಾದಕದ್ರವ್ಯ ಕಳ್ಳಸಾಗಾಣಿಕೆ

· ಅಕ್ರಮ ಮೀನುಗಾರಿಕೆ ಮತ್ತು

· ಇತರ ಸಾಗರ ಸಂಪನ್ಮೂಲಗಳ ಅಕ್ರಮ ಶೋಧನೆ.

ಇಂದು ಆಖೈರು ಮಾಡಲಾದ ದ್ವಿಪಕ್ಷೀಯ ಸಾಗರ ಭದ್ರತೆ ಒಪ್ಪಂದ, ನಮ್ಮ ಪರಸ್ಪರ ಸಹಕಾರ ಮತ್ತು ಸಾಮರ್ಥ್ಯವನ್ನು ಹೆಚ್ಚಿಸಲಿದೆ. ನಾವು ನಮ್ಮ ವಿಸ್ತೃತ ಶ್ರೇಣಿಯ ಸಹಕಾರದಲ್ಲಿ ಶಾಂತಿಯುತ ಸಾಗರ ಸಂರಕ್ಷಣೆ ಖಾತ್ರಿಗಾಗಿ ಹೈಡ್ರೋಗ್ರಾಫಿಯನ್ನು ಮತ್ತಷ್ಟು ಬಲಪಡಿಸಲು ಒಪ್ಪಿದ್ದೇವೆ. ಮಾರಿಷಸ್ ರಾಷ್ಟ್ರೀಯ ಕರಾವಳಿ ಭದ್ರತೆಗೆ ಭಾರತ ಬೆಂಬಲ ನೀಡುತ್ತಿದ್ದು, ಮೂರು ಹಂತದ ಯೋಜನೆಯ ಮೂಲಕ ಅದರ ಸಾಮರ್ಥ್ಯವನ್ನು ಹೆಚ್ಚಸಲಾಗುತ್ತದೆ. ಕರಾವಳಿ ಭದ್ರತೆ ಹಡಗುಗಳ ಕಾವಲಿನವರ ಜೀವನಮಟ್ಟ ಸುಧಾರಣೆಗೂ ನಾವು ನಿರ್ಧರ ಮಾಡಿದ್ದೇವೆ, ನೆರವು ಮಂಜೂರು ಕಾರ್ಯಕ್ರಮದಡಿ ಮಾರಿಷಸ್ ಗೆ ಅದನ್ನು ಒದಗಿಸುತ್ತೇವೆ.

ಸ್ನೇಹಿತರೆ,

ಮಾರಿಷಸ್ ನೊಂದಿಗೆಬಲವಾದ ಅಭಿವೃದ್ಧಿ ಪಾಲುದಾರಿಕೆಯು ನಮ್ಮ ಕಾರ್ಯಕ್ರಮದ ಹೆಗ್ಗುರುತಾಗಿದೆ. ಮಾರಿಷಸ್ ನಲ್ಲಿ ನಡೆಯುತ್ತಿರುವ ಅಭಿವೃದ್ಧಿ ಚಟುವಟಿಕೆಗಳಲ್ಲಿ ಭಾರತವು ಹೆಮ್ಮೆಯಿಂದ ಭಾಗಿಯಾಗುತ್ತದೆ. ಮಾರಿಷಸ್ ನ ಅಭಿವೃದ್ಧಿಗೆ ನಮ್ಮ ನಿರಂತವಾದ ಬದ್ಥತೆಗೆ ಭಾರತದಿಂದ 500 ದಶಲಕ್ಷ ಅಮೆರಿಕನ್ ಡಾಲರ್ ಗಳ ಸಾಲ ನೀಡಿಕೆಯ ಒಪ್ಪಂದ ಇದಕ್ಕೆ ಉತ್ತಮ ಉದಾಹರಣೆಯಾಗಿದೆ. ಇದು ಆದ್ಯತೆಯ ಯೋಜನೆಗಳ ಅನುಷ್ಠಾನಕ್ಕೂ ನೆರವಾಗಲಿದೆ. ಪ್ರಧಾನಮಂತ್ರಿ ಜುಗ್ನೌತ್ ಮತ್ತು ನಾನು ಹಾಲಿ ನಡೆದಿರುವ ಯೋಜನೆಗಳ ಪ್ರಗತಿಯನ್ನು ಸ್ವಾಗತಿಸಿದ್ದೇವೆ. ನಮ್ಮ ದೇಶಗಳ ನಡುವೆ ಗುರುತಿಸಲಾದ ಯೋಜನೆಗಳ ಸಕಾಲಿಕ ಅನುಷ್ಠಾನಕ್ಕೆ ಸಂಪೂರ್ಣ ಬೆಂಬಲವನ್ನು ಭಾರತ ನೀಡಲಿದೆ. ಈ ಯೋಜನೆಗಳು ಮಾರಿಷಸ್ ನ ಆರ್ಥಿಕತೆಗೆ ಜೀವತುಂಬಿ ನಮ್ಮ ಬಾಂಧವ್ಯಕ್ಕೆ ಗುಣಾತ್ಮಕ ಪರಿವರ್ತನೆ ನೀಡುತ್ತವೆ. ನಮ್ಮ ಚರ್ಚೆಯ ವೇಳೆ ಮಾರಿಷಸ್ ನೊಂದಿಗೆ ಕೌಶಲ ಅಭಿವೃದ್ಧಿಯ ಹೆಚ್ಚಳದತ್ತ ಗಮನ ಹರಿಸಿದೆವು. ಇದು ಮಾರಿಷಸ್ ನೊಂದಿಗೆ ಭಾರತದ ಬಹುಹಂತದ ಸಾಮರ್ಥ್ಯ ವರ್ಧನೆ ಕಾರ್ಯಕ್ರಮದ ಸಕ್ರಿಯ ಭಾಗವಾಗಿದೆ. ನಾವು ಈ ರಂಗದಲ್ಲಿ ನಮ್ಮ ವಿನಿಮಯವನ್ನು ಮತ್ತಷ್ಟು ಆಳಗೊಳಿಸಿದ್ದಕ್ಕೆ ಸಂತಸಪಡುತ್ತೇವೆ.

ಸ್ನೇಹಿತರೆ,

ನವೀಕರಿಸಬಹುದಾದ ಇಂಧನಕ್ಕೆ ಮಹತ್ವ ನೀಡಿದ ಪ್ರಧಾನಿ ಜಗ್ನೌತ್ ಅವರ ನಾಯಕತ್ವಕ್ಕೆ ನಾವು ಮೆಚ್ಚುಗೆ ವ್ಯಕ್ತಪಡಿಸುತ್ತೇವೆ. ಅಂತಾರಾಷ್ಟ್ರೀಯ ಸೌರ ಸಹಯೋಗ ಚೌಕಟ್ಟಿಗೆ ಮಾರಿಷಸ್ ಅಂಕಿತ ಹಾಕಿ ಸ್ಥಿರೀಕರಿಸಿರುವುದು ಎರಡೂ ರಾಷ್ಟ್ರಗಳ ನಡುವೆ ಈ ರಂಗದಲ್ಲಿ ಹೊಸ ಪಾಲುದಾರಿಗೆಯ ಬಾಗಿಲು ತೆರೆದಿದೆ.

ಸ್ನೇಹಿತರೆ,

ಮಾರಿಷಸ್ ನ ರಾಷ್ಟ್ರೀಯ ಜೀವನಕ್ಕೆ ಭಾರತೀಯ ಮೂಲದ ಸಮುದಾಯದ ಕೊಡುಗೆಯನ್ನು ನಾವು ಹೆಮ್ಮೆಯಿಂದ ತೆಗೆದುಕೊಳ್ಳುತ್ತೇವೆ. ಮಾರಿಷಸ್ ನಲ್ಲಿರುವ ನಮ್ಮ ಸಮುದಾಯದೊಂದಿಗೆ ಸಂಪರ್ಕ ಉತ್ತೇಜಿಸಲು, ಭಾರತವು ಈ ವರ್ಷ ಜನವರಿಯಲ್ಲಿ ಮಾರಿಷಸ್ ಗೆ ಮಾತ್ರವೇ ಓಸಿಐ ಕಾರ್ಡ್ ನ ವಿಶೇಷ ಸೌಲಭ್ಯ ಘೋಷಿಸಿತು. ನಮ್ಮ ದೇಶದ ವಿಮಾನಯಾನ ಸಂಸ್ಥೆಗಳು ಹೊಸ ತಾಣಗಳಿಗೆ ಸಂಪರ್ಕಕ್ಕಾಗಿ ಕೋಡ್ ವಿನಿಮಯಕ್ಕೆ ಸಮ್ಮತಿಸಿವೆ. ಇದು ಕೂಡ ಜನರೊಂದಿಗೆ ಸಂಪರ್ಕ ಹಾಗೂ ನಮ್ಮ ದೇಶಗಳ ನಡುವಿನ ಪ್ರವಾಸೋದ್ಯಮಕ್ಕೆ ಹೆಚ್ಚಿನ ಒತ್ತು ನೀಡುತ್ತದೆ.

ಸ್ನೇಹಿತರೆ,

ದ್ವಿಪಕ್ಷೀಯ ವಿಷಯಗಳ ಜೊತೆಗೆ, ಪ್ರಧಾನಮಂತ್ರಿ ಜುಗ್ನೌತ್ ಮತ್ತು ನಾನು, ಜಾಗತಿಕ ಮತ್ತು ಪ್ರಾದೇಶಿಕ ಶ್ರೇಣಿಯ ವಿಷಯಗಳ ವಿನಿಮಯ ಮಾಡಿಕೊಂಡೆವು. ನಾವು ಬಹುಪಕ್ಷೀಯ ವೇದಿಕೆಗಳಲ್ಲಿ ಪರಸ್ಪರರಿಗೆ ಬೆಂಬಲ ನೀಡುವುದನ್ನು ಮುಂದುವರಿಸಲು ಮತ್ತು ನಮ್ಮ ಸಮಾನ ಸವಾಲುಗಳು ಮತ್ತು ಹಿತಕ್ಕೆ ಸಂಬಂಧಿಸಿದ ವಿಚಾರಗಳಲ್ಲಿ ಆಪ್ತವಾಗಿ ಸಹಕರಿಸಲು ಒಪ್ಪಿದೆವು. ಪ್ರಧಾನಿ ಜುಗ್ನೌತ್ ಅವರ ಭೇಟಿ, ನಮ್ಮ ಬಾಂಧವ್ಯವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು ಕೊಡುಗೆ ನೀಡುತ್ತದೆ. ನಮ್ಮ ಬಾಂಧವ್ಯಕ್ಕೆ ಬೆಂಬಲ ನೀಡುವ ಪ್ರಧಾನಿ ಜುಗ್ನೌತ್ ಅವರ ದೃಷ್ಟಿಕೋನಕ್ಕೆ ನಾನು ಧನ್ಯವಾದ ಅರ್ಪಿಸುತ್ತೇನೆ. ಇಂದು ಕೈಗೊಂಡಿರುವ ನಿರ್ಧಾರಗಳ ವಿಚಾರದಲ್ಲಿ ಮುಂಬರುವ ತಿಂಗಳುಗಳಲ್ಲಿ ಅವರೊಂದಿಗೆ ಆಪ್ತವಾಗಿ ಕೆಲಸ ಮಾಡುವುದನ್ನು ಎದಿರು ನೋಡುತ್ತೇನೆ. ಮತ್ತೊಮ್ಮೆ ನಾನು ಪ್ರಧಾನಿ ಜುಗ್ನೌತ್ ಅವರಿಗೆ ಭಾರತದಲ್ಲಿ ಫಲಪ್ರದ ವಾಸ್ತವ್ಯವನ್ನು ಬಯಸುತ್ತೇನೆ.

ಧನ್ಯವಾದಗಳು, ತುಂಬಾ ತುಂಬಾ ಧನ್ಯವಾದಗಳು.

*****

AKT/SH