Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಮಾರಿಷಸ್  ಪ್ರಧಾನಮಂತ್ರಿ ಅವರನ್ನು ಭೇಟಿಯಾದ ಪ್ರಧಾನಮಂತ್ರಿ

ಮಾರಿಷಸ್  ಪ್ರಧಾನಮಂತ್ರಿ ಅವರನ್ನು ಭೇಟಿಯಾದ ಪ್ರಧಾನಮಂತ್ರಿ


ಮಾರಿಷಸ್ ಪ್ರಧಾನಮಂತ್ರಿ ಘನತೆವೆತ್ತ ಶ್ರೀ ಪ್ರವಿಂದ್ ಕುಮಾರ್ ಜುಗ್ನಾಥ್ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಭೇಟಿ ಮಾಡಿದರು.  ಜಿ20 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಶ್ರೀ ಜುಗ್ನಾಥ್  ಅವರು ಭಾರತಕ್ಕೆ ಬಂದಿದ್ದಾರೆ.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಈ ರೀತಿ ಸಂದೇಶ ತಿಳಿಸಿದ್ದಾರೆ;

“ಪ್ರಧಾನಮಂತ್ರಿ @KumarJugnauth  ಮತ್ತು ನಾನು ಬಹಳ ಒಳ್ಳೆಯ ಸಭೆ ನಡೆಸಿದ್ದೇವೆ. ನಮ್ಮ ರಾಷ್ಟ್ರಗಳ ನಡುವಿನ 75 ವರ್ಷಗಳ ರಾಜತಾಂತ್ರಿಕ ಬಾಂಧವ್ಯವನ್ನು ನಾವು ಆಚರಿಸುತ್ತಿರುವ ಕಾರಣ ಭಾರತ-ಮಾರಿಷಸ್ ಸಂಬಂಧಗಳಿಗೆ ಇದು ವಿಶೇಷ ವರ್ಷ ಕೂಡಾ ಆಗಿದೆ. ನಾವು ಮೂಲಸೌಕರ್ಯ, ಹಣಕಾಸು ತಂತ್ರಜ್ಞಾನ( ಫಿನ್ಟೆಕ್), ಸಂಸ್ಕೃತಿ ಮತ್ತು ಇನ್ನೂ ಹೆಚ್ಚಿನ ಇತರ ಕ್ಷೇತ್ರಗಳಲ್ಲಿ ಸಹಕಾರವನ್ನು ಚರ್ಚಿಸಿದ್ದೇವೆ. ಹಾಗೆಯೇ, ಜಾಗತಿಕ ದಕ್ಷಿಣದ ಧ್ವನಿಯನ್ನು ಹೆಚ್ಚಿಸಲು ಭಾರತದ ಬದ್ಧತೆಯನ್ನು ಪುನರುಚ್ಚರಿಸಿದ್ದೇವೆ.”

ಪ್ರಧಾನಮಂತ್ರಿ ಕಾರ್ಯಾಲಯವು ಕೂಡ ಎಕ್ಸ್ ಖಾತೆಯಲ್ಲಿ ಈ ರೀತಿ ಸಂದೇಶ ಪ್ರಕಟಿಸಿದೆ;

” ಪ್ರಧಾನಮಂತ್ರಿ @narendramodi ಅವರು, ಭಾರತದ  ಸಾಗರ ಯೋಜನೆಯ ಪ್ರಮುಖ ಪಾಲುದಾರ ದೇಶವಾದ ಮಾರಿಷಸ್ ನ ಪ್ರಧಾನಮಂತ್ರಿ @KumarJugnauth ಅವರನ್ನು ಭೇಟಿಯಾದರು. ಉಭಯ ನಾಯಕರು ಭಾರತ-ಮಾರಿಷಸ್ ದೇಶದ ದ್ವಿಪಕ್ಷೀಯ ಸಂಬಂಧಗಳ ಗಮನಾರ್ಹ ವರ್ಧನೆಯನ್ನು ಸಂತೋಷಪೂರ್ವಕವಾಗಿ ಸಮ್ಮತಿಸಿಕೊಂಡರು. ಈ ಸಂದರ್ಭದಲ್ಲಿ, ಉಭಯ ದೇಶಗಳ ಗಮನಾರ್ಹ ಸಂಬಂಧಗಳ 75ನೇ ವಾರ್ಷಿಕೋತ್ಸವವನ್ನು ಈ ವರ್ಷ ಆಚರಿಸುತ್ತಿರುವುದನ್ನು ಇಬ್ಬರೂ ನಾಯಕರು ಸ್ಮರಿಸಿಕೊಂಡಿದ್ದಾರೆ.

 

******