Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಮಾರಿಷಸ್ ಪ್ರಧಾನಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಶ್ರೀ. ಪ್ರವಿಂದ್ ಕುಮಾರ್ ಜುಗ್ನೌತ್ ಗೆ ಪ್ರಧಾನಮಂತ್ರಿ ಅಭಿನಂದನೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಮಾರಿಷಸ್ ಪ್ರಧಾನಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಶ್ರೀ. ಪ್ರವಿಂದ್ ಕುಮಾರ್ ಜುಗ್ನೌತ್ ಅವರಿಗೆ ಸ್ವಲ್ಪ ಹೊತ್ತಿನ ಮೊದಲು ದೂರವಾಣಿ ಮೂಲಕ ಮಾತನಾಡಿ, ಅವರಿಗೆ ಅಭಿನಂದನೆ ಸಲ್ಲಿಸಿದರು.

ಜುಗ್ನೌತ್ ಅವರು ಕರೆ ಮಾಡಿದ್ದಕ್ಕಾಗಿ ಪ್ರಧಾನಮಂತ್ರಿಯವರಿಗೆ ಧನ್ಯವಾದ ಅರ್ಪಿಸಿದರು.

ಪ್ರಧಾನಮಂತ್ರಿಯವರು ಹಾಗೂ ಪ್ರಧಾನಮಂತ್ರಿ ಜುಗ್ನೌತ್ ಅವರು ಭಾರತ ಮತ್ತು ಮಾರಿಷಸ್ ನಡುವೆ ಸಮಯ ಪರೀಕ್ಷಿತ ಮತ್ತು ವಿಶಿಷ್ಠ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸುವ ಹಂಚಿಕೆಯ ಬದ್ಧತೆಯನ್ನು ಪುನರುಚ್ಚರಿಸಿದರು.

ಭಾರತ ಮತ್ತು ಮಾರಿಷಸ್ ನಡುವೆ ಸ್ನೇಹ ಸಂಬಂಧದ ಭದ್ರ ಬಾಂಧವ್ಯ ಬೆಸೆಯಲು ನಿರ್ಗಮಿಸುತ್ತಿರುವ ಪ್ರಧಾನಮಂತ್ರಿ ಶ್ರೀ. ಅನೆರೋದ್ ಜುಗ್ನೌತ್ ಅವರು ನೀಡಿದ ನಾಯಕತ್ವ ಹಾಗೂ ಕೊಡುಗೆಯನ್ನು ಪ್ರಧಾನಮಂತ್ರಿಯವರು ಪ್ರಶಂಸಿಸಿದರು.

***

AKT/AK