Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಮಾರಿಷಸ್ ಗೆ ಪ್ರಧಾನಮಂತ್ರಿಯವರ ಭೇಟಿ: ಫಲಪ್ರದತೆಯ ವಿವರ


 

ಕ್ರ.ಸಂ

ಒಪ್ಪಂದ /ತಿಳುವಳಿಕಾ ಒಡಂಬಡಿಕೆ

1.

ಗಡಿಯಾಚೆಗಿನ ವಹಿವಾಟುಗಳಿಗೆ ಸ್ಥಳೀಯ ಕರೆನ್ಸಿಗಳ (ಭಾರತೀಯ ರೂಪಾಯಿ ಅಥವಾ ಮಾರಿಷಿಯನ್‌ ರೂಪಾಯಿ) ಬಳಕೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ನೀತಿ ಚೌಕಟ್ಟು ರೂಪಿಸಲು ʻಭಾರತೀಯ ರಿಸರ್ವ್ ಬ್ಯಾಂಕ್ʼ ಮತ್ತು ʻಬ್ಯಾಂಕ್ ಆಫ್ ಮಾರಿಷಸ್ʼ ನಡುವೆ ಒಪ್ಪಂದ.

2.

ಮಾರಿಷಸ್ ಗಣರಾಜ್ಯ ಸರ್ಕಾರ (ಸಾಲಗಾರನಾಗಿ) ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಸಾಲದಾತ ಬ್ಯಾಂಕ್ ಆಗಿ) ನಡುವೆ ಸಾಲ ಸೌಲಭ್ಯ ಒಪ್ಪಂದ

3.

ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಕ್ಷೇತ್ರದಲ್ಲಿನ ಸಹಕಾರಕ್ಕಾಗಿ ಮಾರಿಷಸ್ ಗಣರಾಜ್ಯದ ʻಕೈಗಾರಿಕೆ, ಎಸ್‌ಎಂಇ ಮತ್ತು ಸಹಕಾರ ಸಚಿವಾಲಯ (ಎಸ್‌ಎಂಇ ವಿಭಾಗ) ಹಾಗೂ ಭಾರತ ಗಣರಾಜ್ಯದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯದ ನಡುವೆ ಒಪ್ಪಂದ.

4.

ಭಾರತ ಗಣರಾಜ್ಯದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ʻಸುಷ್ಮಾ ಸ್ವರಾಜ್ ವಿದೇಶಾಂಗ ಸೇವಾ ಸಂಸ್ಥೆʼ ಮತ್ತು ಮಾರಿಷಸ್ ಗಣರಾಜ್ಯದ ವಿದೇಶಾಂಗ ವ್ಯವಹಾರಗಳು, ಪ್ರಾದೇಶಿಕ ಏಕೀಕರಣ ಮತ್ತು ಅಂತಾರಾಷ್ಟ್ರೀಯ ವ್ಯಾಪಾರ ಸಚಿವಾಲಯದ ನಡುವೆ ಒಪ್ಪಂದ.

5.

ಮಾರಿಷಸ್ ಸರ್ಕಾರದ ಸಾರ್ವಜನಿಕ ಸೇವೆ ಮತ್ತು ಆಡಳಿತ ಸುಧಾರಣಾ ಸಚಿವಾಲಯ (ಎಂಪಿಎಸ್ಎಆರ್) ಹಾಗೂ ಭಾರತ ಸರ್ಕಾರದ ಆಡಳಿತ ಸುಧಾರಣೆ ಮತ್ತು ಸಾರ್ವಜನಿಕ ಕುಂದುಕೊರತೆಗಳ ಇಲಾಖೆ ಅಡಿಯಲ್ಲಿನ ʻಉತ್ತಮ ಆಡಳಿತಕ್ಕಾಗಿ ರಾಷ್ಟ್ರೀಯ ಕೇಂದ್ರʼದ (ಎನ್‌ಸಿಜಿಜಿ) ನಡುವೆ ತಿಳಿವಳಿಕಾ ಒಡಂಬಡಿಕೆ.

6

ವಾಣಿಜ್ಯ ಹಡಗುಗಳ ಸಂಚಾರದ ಪೂರ್ವ ಮಾಹಿತಿ  ವಿನಿಮಯ (ವೈಟ್‌ ಶಿಪ್ಪಿಂಗ್‌) ಕುರಿತು ಭಾರತೀಯ ನೌಕಾಪಡೆ ಮತ್ತು ಮಾರಿಷಸ್ ಸರ್ಕಾರದ ನಡುವೆ ತಾಂತ್ರಿಕ ಒಪ್ಪಂದ.

7.

ಭಾರತ ಸರ್ಕಾರದ ಭೂ ವಿಜ್ಞಾನ ಸಚಿವಾಲಯದ ʻಸಾಗರ ಮಾಹಿತಿ ಸೇವೆಗಳ ಭಾರತೀಯ ರಾಷ್ಟ್ರೀಯ ಕೇಂದ್ರʼ (ಐಎನ್‌ಸಿಒಐಎಸ್) ಮತ್ತು ಮಾರಿಷಸ್‌ ಸರ್ಕಾರದ ಪ್ರಧಾನ ಮಂತ್ರಿ ಕಚೇರಿ(ಪಿಎಂಒ), ಕಾಂಟಿನೆಂಟಲ್ ಶೆಲ್ಫ್, ಕಡಲ ವಲಯಗಳ ಆಡಳಿತ ಮತ್ತು ಅನ್ವೇಷಣೆ (ಸಿಎಸ್‌ಎಂಜೆಡ್‌ಎಇ) ಇಲಾಖೆಯ ನಡುವೆ ತಿಳಿವಳಿಕೆ ಒಪ್ಪಂದ.

8.

ಜಾರಿ ನಿರ್ದೇಶನಾಲಯ (ಇಡಿ) ಮತ್ತು ಮಾರಿಷಸ್ ಗಣರಾಜ್ಯದ ಹಣಕಾಸು ಅಪರಾಧಗಳ ಆಯೋಗ (ಎಫ್‌ಸಿಸಿ) ನಡುವೆ ಒಪ್ಪಂದ.

 

ಕ್ರ.ಸಂ.

ಯೋಜನೆಗಳು

1.

ಕ್ಯಾಪ್ ಮಾಲ್ಹೌರೆಕ್ಸ್‌ನಲ್ಲಿ ʻಅಟಲ್ ಬಿಹಾರಿ ವಾಜಪೇಯಿ ಸಾರ್ವಜನಿಕ ಸೇವೆ ಮತ್ತು ನಾವಿನ್ಯತಾ ಸಂಸ್ಥೆ, ʻಮಾರಿಷಸ್ ಪ್ರದೇಶ ಆರೋಗ್ಯ ಕೇಂದ್ರʼ ಹಾಗೂ 20 ʻಎಚ್ಐಸಿಡಿಪಿʼ ಯೋಜನೆಗಳ ಉದ್ಘಾಟನೆ (ಹೆಸರನ್ನು ನವೀಕರಿಸಲಾಗುವುದು).

ಹಸ್ತಾಂತರ:
1. ಭಾರತೀಯ ನೌಕೆಯ ಮೂಲಕ ಜಲವಿಜ್ಞಾನ ಸಮೀಕ್ಷೆ ಕೈಗೊಂಡ ಬಳಿಕ ಸಿದ್ಧಪಡಿಸಲಾದ ʻಸೇಂಟ್ ಬ್ರಾಂಡನ್ ದ್ವೀಪʼದಲ್ಲಿ ನೌಕಾಪಥನಿರ್ದೇಶನ ಕುರಿತಾದ ಚಾರ್ಟ್‌ನ ಹಸ್ತಾಂತರ.

ಘೋಷಣೆಗಳು:

ಮಾರಿಷಸ್‌ನಲ್ಲಿ ಹೊಸ ಸಂಸತ್ ಭವನ ಸ್ಥಾಪನೆ ಮತ್ತು ಅಭಿವೃದ್ಧಿಯಲ್ಲಿ ಭಾರತದ ಪಾಲುದಾರಿಕೆಯನ್ನು ಮತ್ತಷ್ಟು ಹೆಚ್ಚಿಸುವುದಾಗಿ ಹಾಗೂ ಪರಿಣಾಮಕಾರಿ ಸಮುದಾಯ ಅಭಿವೃದ್ಧಿ ಯೋಜನೆಗಳ ಎರಡನೇ ಹಂತಕ್ಕೆ ಭಾರತದ ಬೆಂಬಲ ವಿಸ್ತರಿಸುವುದಾಗಿ ಪ್ರಧಾನಿ ಮೋದಿ ಅವರು ಬಾರಿಯ ಭೇಟಿಯ ಸಮಯದಲ್ಲಿ ಘೋಷಿಸಿದರು.

 

*****