Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಮಾರಿಷಸ್‌ನ ಮೆಟ್ರೋ ಎಕ್ಸ್‌ಪ್ರೆಸ್ ಮತ್ತು ಇಎನ್‌ಟಿ ಆಸ್ಪತ್ರೆಯ ಜಂಟಿ ಉದ್ಘಾಟನೆ


ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಮಾರಿಷಸ್‌ನ ಪ್ರಧಾನ ಮಂತ್ರಿ ಶ್ರೀ ಪ್ರವೀಂದ್ ಜುಗ್ನಾಥ್ ಅವರು ಮಾರಿಷಸ್‌ನ ಮೆಟ್ರೋ ಎಕ್ಸ್‌ಪ್ರೆಸ್ ಮತ್ತು ಹೊಸ ಇಎನ್‌ಟಿ ಆಸ್ಪತ್ರೆಯನ್ನು ಇಂದು ವೀಡಿಯೊ ಲಿಂಕ್ ಮೂಲಕ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನ ಮಂತ್ರಿ ಮೋದಿಯವರು, ಮಾರಿಷಸ್‌ನ ಜನರ ಜೀವನದ ಗುಣಮಟ್ಟವನ್ನು ಮತ್ತಷ್ಟು ಸುಧಾರಿಸುವಲ್ಲಿ ಮೆಟ್ರೊ ಮತ್ತು ಆರೋಗ್ಯ ರಕ್ಷಣಾ ಯೋಜನೆಗಳ ಮಹತ್ವವನ್ನು ತಿಳಿಸಿದರು, ಜೊತೆಗೆ ಇವುಗಳು ಉಭಯ ದೇಶಗಳ ನಡುವಿನ ನಿಕಟ ಸಂಬಂಧವನ್ನು ಗಾಡವಾಗಿಸಿದೆ ಎಂದು ಹೇಳಿದರು. ಇಂದಿನ ಕಾರ್ಯಕ್ರಮವು ಹಿಂದೂ ಮಹಾಸಾಗರದಲ್ಲಿ ವೈಡ್ ಲಿಂಕ್ ಮೂಲಕ ಭಾರತದ ಮತ್ತು ಮಾರಿಷಸ್ ನಾಯಕರನ್ನು ಒಟ್ಟುಗೂಡಿಸಿದ ಮೊದಲ ಸಂದರ್ಭವಾಗಿದೆ ಎಂದು ಅವರು ತಿಳಿಸಿದರು.

ಬಹು ನಿರೀಕ್ಷಿತ ಮೆಟ್ರೋ ಎಕ್ಸ್‌ಪ್ರೆಸ್ (ಲೈಟ್ ರೈಲ್ ಟ್ರಾನ್ಸಿಟ್) ಯೋಜನೆಯು ಮಾರಿಷಸ್‌ನಲ್ಲಿನ ಸಾರಿಗೆ ವ್ಯವಸ್ಥೆಯನ್ನು ದಕ್ಷ, ವೇಗವಾದ ಮತ್ತು ಸ್ವಚ್ಛವಾದ ಸಾರ್ವಜನಿಕ ಸಾರಿಗೆಯನ್ನಾಗಿ ಪರಿವರ್ತಿಸುತ್ತದೆ ಎಂದು ಪ್ರಧಾನ ಮಂತ್ರಿ ಮೋದಿ ಹೇಳಿದರು. ಅತ್ಯಾಧುನಿಕ ತಂತ್ರಜ್ಞಾನದ ಇಎನ್‌ಟಿ ಆಸ್ಪತ್ರೆಯು ಮಾರಿಷಸ್‌ನ ಮೊದಲ ಕಾಗದರಹಿತ ಇ-ಆಸ್ಪತ್ರೆಯಾಗುವುದರ ಜೊತೆಗೆ ಗುಣಮಟ್ಟದ ಆರೋಗ್ಯವು ಸುಲಭವಾಗಿ ಎಟುಕುವಂತೆ ಗಮನಾರ್ಹವಾಗಿ ವಿಸ್ತರಿಸುತ್ತದೆ ಮತ್ತು ಜನರಿಗೆ ಪ್ರಯೋಜನವನ್ನು ನೀಡುತ್ತದೆ ಎಂದು ಹೇಳಿದರು.

ಮಾರಿಷಸ್‌ನಲ್ಲಿನ ಇತರ ಅಭಿವೃದ್ಧಿ ಸಹಕಾರ ಯೋಜನೆಗಳಿಗೆ ಭಾರತದ ಬೆಂಬಲಕ್ಕಾಗಿ ಪ್ರಧಾನ ಮಂತ್ರಿ ಜುಗ್ನಾಥ್ ರವರು ಅಪಾರವಾದ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಎರಡು ಜನೋಪಯೋಗಿ ಯೋಜನೆಗಳನ್ನು ಸಮಯಕ್ಕೆ ಸರಿಯಾಗಿ ಕಾರ್ಯಗತಗೊಳಿಸಿದ್ದಕ್ಕಾಗಿ ಅವರು ಸಂಬಂಧಪಟ್ಟ ಎಲ್ಲರಿಗೂ ತಮ್ಮ ಮೆಚ್ಚುಗೆಯನ್ನು ತಿಳಿಸಿದರು.

ಮೂತ್ರಪಿಂಡ ಘಟಕ, ಮೆಡಿ-ಕ್ಲಿನಿಕ್ ಗಳು ಮತ್ತು ಪ್ರಾದೇಶಿಕ ಆರೋಗ್ಯ ಕೇಂದ್ರಗಳ ನಿರ್ಮಾಣದಲ್ಲಿ ಮಾರಿಷಸ್‌ಗೆ ಅನುದಾನದ ನೆರವು ನೀಡುವ ಭಾರತ ಸರ್ಕಾರದ ನಿರ್ಧಾರವನ್ನು ಪ್ರಧಾನ ಮಂತ್ರಿ ಮೋದಿ ತಿಳಿಸಿದರು.

ಎರಡೂ ದೇಶಗಳ ಜನರ ಯೋಗಕ್ಷೇಮಕ್ಕಾಗಿ, ಹಿಂದೂ ಮಹಾಸಾಗರ ಪ್ರದೇಶದಲ್ಲಿ ಮತ್ತು ಪ್ರಪಂಚದಲ್ಲಿ ಶಾಂತಿ ಮತ್ತು ಸಮೃದ್ಧಿಗಾಗಿ ಭಾರತ ಮತ್ತು ಮಾರಿಷಸ್ ನ ಸಹಕಾರದ ಬೆಳವಣಿಗೆಯನ್ನು ಉಭಯ ನಾಯಕರು ಶ್ಲಾಘಿಸಿದರು.