Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಮಾದಕ ದ್ರವ್ಯ ಮತ್ತು ಮನಸ್ಸಿನ ಮೇಲೆ ಪರಿಣಾಮ ಬೀರುವ ಪದಾರ್ಥಗಳ ನಿಯಂತ್ರಣ ಸಹಕಾರಕ್ಕಾಗಿ ಭಾರತ ಮತ್ತು ಥಾಯ್ ಲ್ಯಾಂಡ್ ನಡುವೆ ತಿಳಿವಳಿಕೆ ಒಪ್ಪಂದಕ್ಕೆ ಸಂಪುಟದ ಅನುಮೋದನೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಮಾದಕ ದ್ರವ್ಯಗಳ ಮತ್ತು ಮನಸ್ಸಿನ ಮೇಲೆ ಪರಿಣಾಮ ಬೀರುವ ಪದಾರ್ಥಗಳ ಮತ್ತು, ಅವುಗಳ ರಾಸಾಯನಿಕ ಮತ್ತು ಮಾದಕ ವಸ್ತು ದುರ್ಬಳಕೆ ನಿಯಂತ್ರಣಕ್ಕೆ ಭಾರತ ಮತ್ತು ಥಾಯ್ ಲ್ಯಾಂಡ್ ನಡುವೆ ತಿಳಿವಳಿಕೆ ಒಪ್ಪಂದಕ್ಕೆ ತನ್ನ ಅನುಮೋದನೆ ನೀಡಿದೆ.

ಈ ಮೇಲಿನ ಕ್ಷೇತ್ರದಲ್ಲಿ ಸಹಕಾರ ಮತ್ತು ಪರಸ್ಪರ ಅಗತ್ಯವಾದ ನೆರವು ಒದಗಿಸಲು ಈ ತಿಳಿವಳಿಕೆ ಒಪ್ಪಂದವು ಸಮರ್ಥವಾದ ಕಾರ್ಯಚೌಕಟ್ಟು ಒದಗಿಸುತ್ತದೆ. ಇದು ಭಾರತ ಮತ್ತು ಥಾಯ್ ಲ್ಯಾಂಡ್ ನಡುವೆ ಸಮರ್ಥವಾದ ಸಾಂಸ್ಥಿಕ ಮಾತುಕತೆಗೂ ಅವಕಾಶ ಕಲ್ಪಿಸುತ್ತದೆ. ಒಮ್ಮೆ ಈ ತಿಳಿವಳಿಕೆ ಒಪ್ಪಂದ ಜಾರಿಗೆ ಬಂದ ಬಳಿಕ, ಬಹುರಾಷ್ಟ್ರೀಯ ಮಾದಕ ದ್ರವ್ಯಗಳ ಕಳ್ಳಸಾಗಣೆಯನ್ನು ತಡೆಗಟ್ಟಲು ನೆರವಾಗುತ್ತದೆ.

***

akt/vba/sh