ಮಾದಕದ್ರವ್ಯ ಮುಕ್ತ ಭಾರತ ಅಭಿಯಾನವನ್ನುದ್ದೇಶಿಸಿ ಪ್ರಧಾನಮಂತ್ರಿ ವೀಡಿಯೋ ಕಾನ್ಫರೆನ್ಸ್ ಮೂಲಕ ಭಾಷಣ
19 Feb, 2019
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಆರ್ಟ್ ಆಫ್ ಲಿವಿಂಗ್ ಫೌಂಡೇಷನ್ ಆಯೋಜಿಸಿದ್ದ ‘ಮಾದಕದ್ರವ್ಯ ಮುಕ್ತ ಭಾರತ’ ಅಭಿಯಾನವನ್ನು ಉದ್ದೇಶಿಸಿ ವೀಡಿಯೋ ಸಂದೇಶದ ಮೂಲಕ ಮಾತನಾಡಿದರು. ಅವರ ಸಂದೇಶವನ್ನು ಹಿಸಾರ್ ನಲ್ಲಿಂದು ಗುರು ಜಂಬೇಶ್ವರ ವಿಶ್ವವಿದ್ಯಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಸಾರ ಮಾಡಲಾಯಿತು. ಪ್ರಧಾನಮಂತ್ರಿ ಅವರು ತಮ್ಮ ಭಾಷಣದಲ್ಲಿ ಆರ್ಟ್ ಆಫ್ ಲಿವಿಂಗ್ ಸಂಸ್ಥೆ ಮತ್ತು ಶ್ರೀ ರವಿಶಂಕರ್ ಗುರೂಜಿ ಅವರು ದೇಶದಲ್ಲಿ ಮಾದಕದ್ರವ್ಯ ತಡೆ ನಿಯಂತ್ರಣಕ್ಕೆ ನೀಡಿರುವ ಕೊಡುಗೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಮಾದಕದ್ರವ್ಯ ಸಮಾಜದ ಅತಿದೊಡ್ಡ ಪಿಡುಗು ಎಂದು ಬಣ್ಣಿಸಿದ ಪ್ರಧಾನಮಂತ್ರಿ ಅವರು, ಡಬ್ಲ್ಯೂ ಹೆಚ್ ಒ ಅಂದಾಜಿನ ಪ್ರಕಾರ ಜಗತ್ತಿನಾದ್ಯಂತ ಸುಮಾರು ನೂರು ಕೋಟಿ ಜನರು ಮಾದಕದ್ರವ್ಯ ಸೇವನೆ ಚಟಕ್ಕೆ ದಾಸರಾಗಿದ್ದಾರೆ.
ಪ್ರಧಾನಮಂತ್ರಿ ಅವರು ಈ ಮಾದಕದ್ರವ್ಯಗಳಿಗೆ ಹೆಚ್ಚಾಗಿ ಯುವಕರೇ ಮಾರುಹೋಗುತ್ತಿರುವುದು ಗಂಭೀರ ಸಂಗತಿ ಎಂದು ಹೇಳಿದರು. “ಮಾದಕದ್ರವ್ಯ ಒಳ್ಳೆಯದಲ್ಲ, ಅವು ಜೀವನಶೈಲಿಯನ್ನು ಬಿಂಬಿಸುತ್ತವೆ ಎಂಬುದು ದೊಡ್ಡ ಮಿಥ್ಯೆ” ಎಂಬುದನ್ನು ಪ್ರಧಾನಮಂತ್ರಿ ಹೇಳಿದರು.
ಮಾದಕದ್ರವ್ಯ ಸೇವನೆಯಿಂದ ಆರೋಗ್ಯ ಸಂಬಂಧಿ ತೊಂದರೆಗಳು ಎದುರಾಗುವುದಲ್ಲದೆ, ಅದರಿಂದಾಗಿ ಕುಟುಂಬಗಳು ನಾಶವಾಗುತ್ತಿವೆ, ಮತ್ತೇರಿಸುವ ಮಾದಕದ್ರವ್ಯಗಳು ದೇಶದ ಭದ್ರತೆ ಮತ್ತು ಸುರಕ್ಷತೆಗೆ ಅತಿದೊಡ್ಡ ಅಪಾಯಗಳಾಗಿವೆ ಎಂದು ಅವರು ಹೇಳಿದರು. ನಾರ್ಕೊಟಿಕ್ಸ್-ಉದ್ದೀಪನ ದ್ರವ್ಯಗಳ ವ್ಯಾಪಾರ, ಭಯೋತ್ಪಾದಕರು ಮತ್ತು ಸಮಾಜಘಾತುಕ ಶಕ್ತಿಗಳಿಗೆ ಅತಿದೊಡ್ಡ ಆದಾಯದ ಮೂಲವಾಗಿದೆ ಎಂದ ಅವರು, ಇಂತಹ ಶಕ್ತಿಗಳು ಡ್ರಗ್ಸ್ ವ್ಯಾಪಾರವನ್ನು ಹಣದ ಮೂಲವನ್ನಾಗಿ ಮಾಡಿಕೊಂಡು ದೇಶವನ್ನು ಅಸ್ಥಿರಗೊಳಿಸಲು ಪ್ರಯತ್ನಿಸುತ್ತವೆ ಎಂದರು.
ಯುವಜನತೆ ಉತ್ತಮ ಆರೋಗ್ಯ ಮತ್ತು ಕೌಟುಂಬಿಕ ಸಂತೋಷದ ದೃಷ್ಟಿಯಿಂದ ‘ಮಾದಕದ್ರವ್ಯಗಳನ್ನು ಸೇವಿಸುವುದಿಲ್ಲ ಎಂದು ಹೇಳಬೇಕು, ಇದರಿಂದ ಅವರ ಭವಿಷ್ಯ ಉತ್ತಮವಾಗುವುದಲ್ಲದೆ, ದೇಶದ ಭದ್ರತೆ ಮತ್ತು ಸುರಕ್ಷತೆಗೂ ಸಹಕಾರಿಯಾಗಲಿದೆ. ಯಾರಿಗೆ ಹೆಚ್ಚಿನ ಆತ್ಮವಿಶ್ವಾಸ ಮತ್ತು ಸ್ವಯಂ ನಂಬಿಕೆ ಇರುತ್ತದೆಯೋ ಅಂತಹವರು ಮಾದಕದ್ರವ್ಯಗಳ ಬಳಕೆಗೆ ಸುಲಭವಾಗಿ ಒಳಗಾಗುವುದಿಲ್ಲ ಎಂದರು. ಮಾದಕದ್ರವ್ಯ ಸೇವನೆ ಚಟಕ್ಕೆ ಒಳಗಾಗಿರುವವರನ್ನು ಅದರಿಂದ ಹೊರತರಲು ಯುವಜನತೆ ಬೆಂಬಲ ನೀಡಬೇಕು ಎಂದು ಅವರು ಹೇಳಿದರು.
ನಿರಂತರ ಸಮಾಲೋಚನೆ, ಮಾರ್ಗದರ್ಶನ ಮತ್ತು ನಿರಂತರ ಪ್ರೀತಿ ಹಾಗೂ ಬೆಂಬಲದಿಂದ ಮಾದಕದ್ರವ್ಯ ಸೇವನೆ ಚಟಕ್ಕೆ ಒಳಗಾಗಿರುವವರನ್ನು ನಾವು ಪುನರ್ ವಸತಿ ಮಾರ್ಗಕ್ಕೆ ತರಬಹುದಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಮಾದಕದ್ರವ್ಯಗಳ ಚಟಕ್ಕೆ ದಾಸರಾಗುವುದನ್ನು ತಡೆಯಲು ನಮ್ಮ ಸರ್ಕಾರ ಕೈಗೊಂಡಿರುವ ಹಲವು ಕ್ರಮಗಳನ್ನು ಪ್ರಧಾನಮಂತ್ರಿ ಉಲ್ಲೇಖಿಸಿದರು. ಈ ನಿಟ್ಟಿನಲ್ಲಿ ಅವರು, ಡ್ರಗ್ಸ್ ಬೇಡಿಕೆ ತಗ್ಗಿಸಲು ರಾಷ್ಟ್ರೀಯ ಕ್ರಿಯಾ ಯೋಜನೆ ರೂಪಿಸಿದ್ದನ್ನು ಮೆಲುಕು ಹಾಕಿದರು. ಇದರಿಂದಾಗಿ ಜನರಿಗೆ ಅರಿವು ಮೂಡುವುದಲ್ಲದೆ, ಸಾಮರ್ಥ್ಯವೃದ್ಧಿಯಾಗಲಿದೆ. ಕೆಲವೊಂದು ಸೂಕ್ಷ್ಮ ಪ್ರದೇಶಗಳಲ್ಲಿ ನಿಗದಿತ ಹಸ್ತಕ್ಷೇಪದಿಂದಾಗಿ ಡ್ರಗ್ಸ್ ಬೇಡಿಕೆ 2023ರ ವೇಳೆಗೆ ಇಳಿಕೆಯಾಗುವ ಸಾಧ್ಯತೆ ಇದೆ.
ದೇಶಾದ್ಯಂತ ಎಲ್ಲಾ ಕಾಲೇಜುಗಳ ವಿದ್ಯಾರ್ಥಿಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಧಾನಮಂತ್ರಿಗಳ ಭಾಷಣವನ್ನು ಆಲಿಸಿದರು.