Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರನ್ನು ಸ್ಮರಿಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ


ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಜನ್ಮ ದಿನದ ಅಂಗವಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅವರನ್ನು ಸ್ಮರಿಸಿದ್ದಾರೆ.

ಅವರನ್ನು ಒಬ್ಬ ರಾಜನೀತಿಜ್ಞ ಎಂದು ಕರೆದಿರುವ ಶ್ರೀ ನರೇಂದ್ರ ಮೋದಿ, ಮುಖರ್ಜಿ ಅವರನ್ನು ಆಡಳಿತಗಾರ ಎಂದು ಬಣ್ಣಿಸಿದ್ದಾರೆ ಮತ್ತು ದೇಶದ ಅಭಿವೃದ್ಧಿಗೆ ಅವರು ನೀಡಿದ ಕೊಡುಗೆಗಳನ್ನು ಶ್ಲಾಘಿಸಿದ್ದಾರೆ.

ಪ್ರಧಾನಮಂತ್ರಿ ಅವರು ಸಾಮಾಜಿಕ ಜಾಲತಾಣ X ನಲ್ಲಿ ಹೀಗೆ ಬರೆದಿದ್ದಾರೆ.

“ಪ್ರಣಬ್‌ ಮುಖರ್ಜಿ ಅವರ ಜನ್ಮ ವಾರ್ಷಿಕೋತ್ಸವದ ಅಂಗವಾಗಿ ಅವರನ್ನು ಸ್ಮರಿಸುತ್ತೇನೆ. ಪ್ರಣಬ್ ಬಾಬು ಅವರು ಶ್ರೇಷ್ಠ ದಿಗ್ಗಜ, ಅದ್ಭುತ ಆಡಳಿತಗಾರ ಮತ್ತು ಬುದ್ಧಿವಂತಿಕೆಯ ಭಂಡಾರದ ಒಂದು ರೀತಿಯ ಸಾರ್ವಜನಿಕ ವ್ಯಕ್ತಿಯಾಗಿದ್ದರು.  ಭಾರತದ ಅಭಿವೃದ್ಧಿಗೆ ಅವರ ಕೊಡುಗೆ ಗಮನಾರ್ಹವಾಗಿದೆ. ಅವರು ಎಲ್ಲಾ ವಲಯಗಳಲ್ಲಿ ಒಮ್ಮತವನ್ನು ಮೂಡಿಸುವ ವಿಶಿಷ್ಟ ಸಾಮರ್ಥ್ಯ ಹೊಂದಿದ್ದರು ಮತ್ತು ಅದಕ್ಕೆ ಅವರಿಗೆ ಆಡಳಿತದಲ್ಲಿದ್ದ ಅಪಾರ ಅನುಭವ ಮತ್ತು ಭಾರತದ ಸಂಸ್ಕೃತಿ ಮತ್ತು ನೀತಿಯ ಬಗ್ಗೆ ಅವರ ಆಳವಾದ ತಿಳುವಳಿಕೆ ಕಾರಣವಾಗಿದೆ. ನಮ್ಮ ರಾಷ್ಟ್ರಕ್ಕಾಗಿ ಅವರ ದೂರದೃಷ್ಟಿಯನ್ನು ಸಾಕಾರಗೊಳಿಸಲು ನಾವು ಸದಾ ಕೆಲಸ ಮಾಡುತ್ತಲೇ ಇರುತ್ತೇವೆ’’

 

 

*****