Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಮಾಜಿ ಪ್ರಧಾನಿ ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರ ನಿಧನಕ್ಕೆ ಪ್ರಧಾನಮಂತ್ರಿ ಸಂತಾಪ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಜಿ ಪ್ರಧಾನಮಂತ್ರಿ ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. 
 
“मैं नि:शब्द हूं, शून्य में हूं, लेकिन भावनाओं का ज्वार उमड़ रहा है। हम सभी के श्रद्धेय अटल जी हमारे बीच नहीं रहे। अपने जीवन का प्रत्येक पल उन्होंने राष्ट्र को समर्पित कर दिया था। उनका जाना, एक युग का अंत है।
 
लेकिन वो हमें कहकर गए हैं- “मौत की उमर क्या है? दो पल भी नहीं, ज़िन्दगी सिलसिला, आज कल की नहीं मैं जी भर जिया, मैं मन से मरूं, लौटकर आऊँगा, कूच से क्यों डरूं?”
 
अटल जी आज हमारे बीच में नहीं रहे, लेकिन उनकी प्रेरणा, उनका मार्गदर्शन, हर भारतीय को, हर भाजपा कार्यकर्ता को हमेशा मिलता रहेगा। ईश्वर उनकी आत्मा को शांति प्रदान करे और उनके हर स्नेही को ये दुःख सहन करने की शक्ति दे। ओम शांति !
 
ಭಾರತ ನಮ್ಮ ಪ್ರೀತಿಪಾತ್ರರಾದ ಅಟಲ್ ಜೀ ಅವರ ಅಗಲಿಕೆಯಿಂದ ದುಃಖಿತವಾಗಿದೆ. ಅವರ ನಿಧನದಿಂದ ಒಂದು ಯುಗಾಂತ್ಯವಾಗಿದೆ. ಅವರು ದೇಶಕ್ಕಾಗಿ ಬದುಕಿದ್ದರು ಮತ್ತು ಅದಮ್ಯವಾಗಿ ದಶಕಗಳ ಕಾಲ ದೇಶ ಸೇವೆ ಮಾಡಿದ್ದರು. ಈ ದುಃಖದ ಸಂದರ್ಭದಲ್ಲಿ ಅವರ ಕುಟುಂಬ, ಬಿಜಿಪಿ ಕಾರ್ಯಕರ್ತರು ಮತ್ತು ಲಕ್ಷಾಂತರ ಅಭಿಮಾನಿಗಳೊಂದಿಗೆ ನನ್ನ ಸಂವೇದನೆ ಇದೆ. ಓಂ ಶಾಂತಿ.
 
ಅಟಲ್ ಜಿ ಅವರ ಅಸಾಧಾರಣ ನಾಯಕತ್ವ ಬಲಿಷ್ಠ, ಪ್ರಗತಿದಾಯಕ ಮತ್ತು 21ನೇ ಶತಮಾನದ ಸಮಗ್ರ ಭಾರತಕ್ಕೆ ಬುನಾದಿ ಹಾಕಿತ್ತು. ವಿವಿಧ ಕ್ಷೇತ್ರಗಳಲ್ಲಿನ ಅವರ ದೂರದರ್ಶಿತ್ವದ ನೀತಿಗಳು ಭಾರತದ ಪ್ರತಿಯೊಬ್ಬ ಪ್ರಜೆಯ ಬದುಕನ್ನೂ ಮುಟ್ಟಿತ್ತು.
 
ಅಟಲ್ ಜಿ ಅವರ ಅಗಲಿಕೆ, ನನಗೆ ವೈಯಕ್ತಿಕವಾಗಿ ತುಂಬಲಾರದ ನಷ್ಟವಾಗಿದೆ. ನನಗೆ ಅವರೊಂದಿಗೆ ಅಸಂಖ್ಯಾತ ನೆನಪುಗಳಿವೆ. ಅವರು ನನ್ನಂಥ ಕಾರ್ಯಕರ್ತರಿಗೆ ಸ್ಫೂರ್ತಿಯಾಗಿದ್ದರು. ನಾನು ಅವರ ತೀಕ್ಷ್ಣ ಮೇದಾವಿ ಮತ್ತು ಅಸಾಧಾರಣ ಬುದ್ಧಿಮತ್ತೆಯನ್ನು ಸ್ಮರಿಸುತ್ತೇನೆ. 
 
ಅಟಲ್ ಜಿ ಅವರ ಪರಿಶ್ರಮ ಮತ್ತು ಹೋರಾಟದ ಫಲವಾಗಿ ಬಿಜೆಪಿ ಒಂದೊಂದೆ ಇಟ್ಟಿಗೆಯನ್ನು ಹಂತಹಂತವಾಗಿ ಕಟ್ಟಿತು. ಅವರು ಭಾರತದ ಉದ್ದಗಲ ಸಂಚರಿಸಿ, ಬಿಜೆಪಿಯ ಸಂದೇಶ ಸಾರಿದರು. ಅದು ಬಿಜೆಪಿ ರಾಷ್ಟ್ರದಲ್ಲಿ ಮತ್ತು ಹಲವು ರಾಜ್ಯಗಳಲ್ಲಿ  ಬಲವಾದ ರಾಷ್ಟ್ರೀಯ ಪಕ್ಷವಾಗುವಂತೆ ಮಾಡಿತು. ಎಂದು ಪ್ರಧಾನಿ ತಮ್ಮ ಸರಣಿ ಟ್ವೀಟ್ ನಲ್ಲಿ ತಿಳಿಸಿದ್ದಾರೆ.
 
ಇದಕ್ಕೂ ಮುನ್ನ ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಮಾಧ್ಯಮ ಪ್ರಕಟಣೆ ಹೊರಡಿಸಿ, ಮಾಜಿ ಪ್ರಧಾನಿ ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರು ಇಂದು ಸಂಜೆ 5.05ಕ್ಕೆ ನಿಧನ ಹೊಂದಿದರು ಎಂದು ತಿಳಿಸಿತ್ತು.
****