Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

​​​​​​​”ಮಹಿಳೆಯರ ಸುರಕ್ಷತೆ” ಕುರಿತು ಅಂಬ್ರೆಲಾ ಯೋಜನೆ ಅನುಷ್ಠಾನದ ಪ್ರಸ್ತಾವನೆಗೆ ಸಂಪುಟ ಅನುಮೋದನೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟವು 2021-22 ರಿಂದ 2025 ರ ಅವಧಿಯಲ್ಲಿ ಒಟ್ಟು 1179.72 ಕೋಟಿ ರೂ. ವೆಚ್ಚದಲ್ಲಿ ‘ಮಹಿಳೆಯರ ಸುರಕ್ಷತೆ’ ಕುರಿತ ಅಂಬ್ರೆಲಾ ಯೋಜನೆಯ ಅನುಷ್ಠಾನದ ಮುಂದುವರಿಕೆಯ ಗೃಹ ವ್ಯವಹಾರಗಳ ಸಚಿವಾಲಯದ ಪ್ರಸ್ತಾವನೆಗೆ ಅನುಮೋದನೆ ನೀಡಿದೆ.

1179.72 ಕೋಟಿ ರೂ.ಗಳ ಒಟ್ಟು ಯೋಜನೆಯ ವೆಚ್ಚದಲ್ಲಿ, ರೂ.885.49 ಕೋಟಿಗಳನ್ನು ಗೃಹ ಸಚವಾಲಯ ಒದಗಿಸುತ್ತದೆ ಮತ್ತು ರೂ.294.23 ಕೋಟಿಯನ್ನು ನಿರ್ಭಯಾ ನಿಧಿಯಿಂದ ನೀಡಲಾಗುವುದು.

ಒಂದು ದೇಶದಲ್ಲಿ ಮಹಿಳೆಯರ ಸುರಕ್ಷತೆಯು ಕಟ್ಟುನಿಟ್ಟಾದ ಕಾನೂನುಗಳ ಮೂಲಕ ತಡೆಗಟ್ಟುವಿಕೆ, ನ್ಯಾಯದ ಪರಿಣಾಮಕಾರಿ ವಿತರಣೆ, ದೂರುಗಳನ್ನು ಸಮಯೋಚಿತವಾಗಿ ಪರಿಹರಿಸುವುದು ಮತ್ತು ಸಂತ್ರಸ್ತರಿಗೆ ಸುಲಭವಾಗಿ ನೀಡಬಹುದಾದ ಸಾಂಸ್ಥಿಕ ಬೆಂಬಲ ರಚನೆಗಳಂತಹ ಹಲವಾರು ಅಂಶಗಳನ್ನು ಒಳಗೊಳ್ಳಲಿದೆ. ಭಾರತೀಯ ದಂಡ ಸಂಹಿತೆ, ಕ್ರಿಮಿನಲ್ ಪ್ರಕ್ರಿಯಾ ಸಂಹಿತೆ ಮತ್ತು ಭಾರತೀಯ ಸಾಕ್ಷ್ಯ ಕಾಯಿದೆಯಲ್ಲಿನ ತಿದ್ದುಪಡಿಗಳ ಮೂಲಕ ಮಹಿಳೆಯರ ವಿರುದ್ಧದ ಅಪರಾಧಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ಕಟ್ಟುನಿಟ್ಟಾದ ಕ್ರಮವನ್ನು ತೆಗೆದುಕೊಳ್ಳಲಾಗುತ್ತದೆ. 

ಮಹಿಳಾ ಸುರಕ್ಷತೆಯ ಕಡೆಗೆ ತನ್ನ ಪ್ರಯತ್ನಗಳಲ್ಲಿ, ಕೇಂದ್ರ ಸರ್ಕಾರವು, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸಹಯೋಗದೊಂದಿಗೆ ಹಲವಾರು ಯೋಜನೆಗಳನ್ನು ಪ್ರಾರಂಭಿಸಿದೆ. ಈ ಯೋಜನೆಗಳ ಉದ್ದೇಶಗಳು ಮಹಿಳೆಯರ ವಿರುದ್ಧದ ಅಪರಾಧದ ಸಂದರ್ಭದಲ್ಲಿ ಸಮಯೋಚಿತ ಮಧ್ಯಸ್ಥಿಕೆ ಮತ್ತು ತನಿಖೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಅಂತಹ ವಿಷಯಗಳಲ್ಲಿ ತನಿಖೆ ಮತ್ತು ಅಪರಾಧ ತಡೆಗಟ್ಟುವಲ್ಲಿ ಹೆಚ್ಚಿನ ದಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಕಾರ್ಯವಿಧಾನಗಳನ್ನು ಬಲಪಡಿಸುವುದು ಸೇರಿವೆ.

ಕೇಂದ್ರ ಸರ್ಕಾರವು “ಮಹಿಳೆಯರ ಸುರಕ್ಷತೆಗಾಗಿ” ಅಂಬ್ರೆಲಾ ಯೋಜನೆಯಡಿ ಕೆಳಗಿನ ಯೋಜನೆಗಳನ್ನು ಮುಂದುವರಿಸಲು ಪ್ರಸ್ತಾಪಿಸಿದೆ:

i. 112 ತುರ್ತು ಪ್ರತಿಕ್ರಿಯೆ ಬೆಂಬಲ ವ್ಯವಸ್ಥೆ (ERSS) 2.0;

ii. ರಾಷ್ಟ್ರೀಯ ವಿಧಿವಿಜ್ಞಾನ ದತ್ತಾಂಶ ಕೇಂದ್ರದ ಸ್ಥಾಪನೆ ಸೇರಿದಂತೆ ಕೇಂದ್ರೀಯ ವಿಧಿ ವಿಜ್ಞಾನ ಪ್ರಯೋಗಾಲಯಗಳ ಉನ್ನತೀಕರಣ

iii. ಡಿಎನ್‌ಎ ವಿಶ್ಲೇಷಣೆಯನ್ನು ಬಲಪಡಿಸುವುದು, ರಾಜ್ಯ ವಿಧಿ ವಿಜ್ಞಾನ ಪ್ರಯೋಗಾಲಯಗಳಲ್ಲಿ (ಎಫ್‌ಎಸ್‌ಎಲ್) ಸೈಬರ್ ಫೋರೆನ್ಸಿಕ್ ಸಾಮರ್ಥ್ಯ ಹೆಚ್ಚಿಸುವುದು

iv. ಮಹಿಳೆಯರು ಮತ್ತು ಮಕ್ಕಳ ವಿರುದ್ಧ ಸೈಬರ್ ಅಪರಾಧ ತಡೆಗಟ್ಟುವಿಕೆ

v. ಮಹಿಳೆಯರು ಮತ್ತು ಮಕ್ಕಳ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಗಳನ್ನು 
ನಿರ್ವಹಿಸುವಲ್ಲಿ ತನಿಖಾಧಿಕಾರಿಗಳು ಮತ್ತು ಪ್ರಾಸಿಕ್ಯೂಟರ್‌ಗಳ ಹೆಚ್ಚಳ ಮತ್ತು ತರಬೇತಿ 

vi. ಮಹಿಳಾ ಸಹಾಯವಾಣಿ ಮತ್ತು ಮಾನವ ಕಳ್ಳಸಾಗಣೆ ವಿರೋಧಿ ಘಟಕಗಳ ಸ್ಥಾಪನೆ

****