Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಮಹಿಳೆಯರು ತಮ್ಮ ಸ್ಪೂರ್ತಿದಾಯಕ ಜೀವನ ಪಯಣಗಳನ್ನು ಹಂಚಿಕೊಳ್ಳಲು ಪ್ರಧಾನಮಂತ್ರಿ ಪ್ರೋತ್ಸಾಹಿಸಿದರು


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು, ನಮೋ ಆಪ್ ನ ಮುಕ್ತ ವೇದಿಕೆಯಲ್ಲಿ ಹಲವಾರು ಪ್ರೋತ್ಸಾಹದಾಯಕ ಜೀವನ ಪ್ರಯಾಣಗಳನ್ನು ನೋಡುವುದು ಸ್ಪೂರ್ತಿದಾಯಕವಾಗಿದೆ ಎಂದು ಹೇಳಿದ್ದಾರೆ. ಮಾರ್ಚ್ 8ರಂದು ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ, ಆಯ್ದ ಕೆಲವು ಮಹಿಳೆಯರಿಗೆ ತಮ್ಮ ಡಿಜಿಟಲ್ ಸಾಮಾಜಿಕ ಮಾಧ್ಯಮ ಖಾತೆಯ ಜವಾಬ್ದಾರಿಯನ್ನು ವಹಿಸಿಕೊಡುವುದಾಗಿ ಪ್ರಧಾನಿಯವರು ಘೋಷಿಸಿದ್ದಾರೆ. ಇಂತಹ ಇನ್ನಷ್ಟು ಸ್ಪೂರ್ತಿದಾಯಕ ಜೀವನ ಪ್ರಯಾಣಗಳನ್ನು ಹಂಚಿಕೊಳ್ಳುವಂತೆ ಮಹಿಳೆಯರನ್ನು ಅವರು ಆಮಂತ್ರಿಸಿದ್ದಾರೆ.

ಶ್ರೀ ಮೋದಿಯವರು Xನ ಪೋಸ್ಟ್ ನಲ್ಲಿ:

“ನಮೋ ಆಪ್ ನ ಓಪನ್ ಫೋರಂನಲ್ಲಿ ಬಹಳ ಸ್ಪೂರ್ತಿದಾಯಕ ಜೀವನ ಪ್ರಯಾಣಗಳನ್ನು ಹಂಚಿಕೊಳ್ಳುವುದನ್ನು ನಾನು ನೋಡುತ್ತಿದ್ದೇನೆ. ಮಹಿಳಾ ದಿನವಾದ ಮಾರ್ಚ್ 8 ರಂದು ನನ್ನ ಡಿಜಿಟಲ್ ಸಾಮಾಜಿಕ ಮಾಧ್ಯಮ ಖಾತೆಯನ್ನು ಸಾಮಾಜಿಕ ಮಾಧ್ಯಮದಲ್ಲಿ ಉಪಯೋಗಿಸಿಕೊಳ್ಳಲು ಕೆಲವು ಮಹಿಳೆಯರನ್ನು ಆಯ್ಕೆ ಮಾಡಲಾಗುತ್ತದೆ. ಇಂತಹ ಇನ್ನೂ ಹಲವಾರು ಜೀವನದ  ಸ್ಪೂರ್ತಿದಾಯಕ ಪ್ರಯಾಣಗಳನ್ನು ಹಂಚಿಕೊಳ್ಳಬೇಕೆಂದು ನಾನು ಆಗ್ರಹಿಸುತ್ತೇನೆ” ಎಂದು ಹೇಳಿದ್ದಾರೆ.

 

 

*****