ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಮಹಾವೀರ ಜಯಂತಿಯ ಸಂದರ್ಭದಲ್ಲಿ ಭಗವಾನ್ ಮಹಾವೀರರ ಎಲ್ಲಾ ಕಾಲಕ್ಕೂ ಒಪ್ಪಿತವಾಗಿರುವ ಬೋಧನೆಗಳನ್ನು ಸ್ಮರಿಸಿದರು, ಅವರ ಬೋಧನೆಗಳು ಸ್ವತಃ ತಮ್ಮ ಜೀವನದ ಮೇಲೆ ಬೀರಿದ ಆಳವಾದ ಪ್ರಭಾವವನ್ನು ಸ್ಮರಿಸಿದರು.
ಮೋದಿ ಆರ್ಕೈವ್ ಎಕ್ಸ್ ಖಾತೆಯ ಪೋಸ್ಟ್; ಭಗವಾನ್ ಮಹಾವೀರ್ ಅವರ ಬೋಧನೆಗಳು ಮತ್ತು ಜೈನ ಸಮುದಾಯದೊಂದಿಗೆ ಪ್ರಧಾನಿ ಅವರ ದೀರ್ಘಕಾಲದ ಆಧ್ಯಾತ್ಮಿಕ ಬಂಧವನ್ನು ಪ್ರತಿಬಿಂಬಿಸುತ್ತದೆ.
ಮೋದಿ ಆರ್ಕೈವ್ ಎಕ್ಸ್ ಪೋಸ್ಟ್ ಗೆ ಪ್ರತಿಕ್ರಿಯಿಸಿದ ಪ್ರಧಾನಮಂತ್ರಿ ಅವರು ಎಕ್ಸ್ ಖಾತೆಯ ಪೋಸ್ಟ್ ನಲ್ಲಿ ಹೀಗೆ ಹೇಳಿದ್ದಾರೆ;
“ಭಗವಾನ್ ಮಹಾವೀರರ ಆದರ್ಶಗಳು ನನ್ನನ್ನೂ ಸೇರಿದಂತೆ ಅಸಂಖ್ಯಾತ ಜನರಿಗೆ ಬಹಳ ಸ್ಫೂರ್ತಿ ನೀಡಿವೆ. ಅವರ ಆಲೋಚನೆಗಳು ಶಾಂತಿಯುತ ಮತ್ತು ಸಹಾನುಭೂತಿಯುಳ್ಳ ಗ್ರಹವನ್ನು ನಿರ್ಮಿಸುವ ಮಾರ್ಗವನ್ನು ತೋರಿಸುತ್ತವೆ.’’
*****
The ideals of Bhagwan Mahavir have greatly inspired countless people, including me. His thoughts show the way to build a peaceful and compassionate planet. https://t.co/1yDhKpoyol
— Narendra Modi (@narendramodi) April 10, 2025