ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಮುಂಬೈಯ ಗುಂಡವಲಿ ಮೆಟ್ರೋ ನಿಲ್ದಾಣದಿಂದ ಮೊಗ್ರಾವರೆಗೆ ಮೆಟ್ರೋ ರೈಲಿನಲ್ಲಿ ಪ್ರಯಾಣಿಸಿದರು. ನಂತರ ಅವರು ಮುಂಬೈ 1 ಮೊಬೈಲ್ ಅಪ್ಲಿಕೇಶನ್ ಮತ್ತು ರಾಷ್ಟ್ರೀಯ ಸಾಮಾನ್ಯ ಮೊಬಿಲಿಟಿ ಕಾರ್ಡ್(National Common Mobility Card)ನ್ನು ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ ಮೆಟ್ರೋ ಫೋಟೋ ಪ್ರದರ್ಶನ ಮತ್ತು 3D ಮಾದರಿಯ ಪ್ರದರ್ಶನವನ್ನು ಪ್ರಧಾನಿ ವೀಕ್ಷಿಸಿದರು. ಮೆಟ್ರೋ ಪ್ರಯಾಣ ವೇಳೆ ವಿದ್ಯಾರ್ಥಿಗಳು, ದೈನಂದಿನ ಪ್ರಯಾಣಿಕರು ಮತ್ತು ಮೆಟ್ರೋ ನಿರ್ಮಾಣದಲ್ಲಿ ತೊಡಗಿರುವ ಕಾರ್ಮಿಕರೊಂದಿಗೆ ಸಂವಾದ ನಡೆಸಿದರು.
ಈ ಸಂದರ್ಭದಲ್ಲಿ ಪ್ರಧಾನಮಂತ್ರಿಯವರೊಂದಿಗೆ ಮಹಾರಾಷ್ಟ್ರದ ರಾಜ್ಯಪಾಲ ಶ್ರೀ ಭಗತ್ ಸಿಂಗ್ ಕೊಶ್ಯಾರಿ, ಮಹಾರಾಷ್ಟ್ರದ ಮುಖ್ಯಮಂತ್ರಿ ಶ್ರೀ ಏಕನಾಥ್ ಶಿಂಧೆ ಮತ್ತು ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಶ್ರೀ ದೇವೇಂದ್ರ ಫಡ್ನವಿಸ್ ಉಪಸ್ಥಿತರಿದ್ದರು.
ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನ ಮಂತ್ರಿ ಕಚೇರಿ: ಮುಂಬೈ ಮೆಟ್ರೊದಲ್ಲಿ ಪ್ರಯಾಣಿಸಿದ ಪ್ರಧಾನಿ ನರೇಂದ್ರ ಮೋದಿ ಎಂದು ಬರೆದು ಫೋಟೋಗಳನ್ನು ಹಂಚಿಕೊಂಡಿದೆ.
ಇದಕ್ಕೂ ಮುನ್ನ, ಮುಂಬೈ ಮೆಟ್ರೋ ರೈಲಿನ 2ಎ ಮತ್ತು 7 ಮಾರ್ಗವನ್ನು ದೇಶಕ್ಕೆ ಸಮರ್ಪಿಸಿದ ಪ್ರಧಾನಿ, ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಲ್ ಮತ್ತು ಏಳು ಒಳಚರಂಡಿ ಸಂಸ್ಕರಣಾ ಘಟಕಗಳ ಪುನರಾಭಿವೃದ್ಧಿಗೆ ಅಡಿಪಾಯ ಹಾಕಿದರು, 20 ಹಿಂದೂ ಹೃದಯಸಾಮ್ರಾಟ್ ಬಾಳಾಸಾಹೇಬ್ ಠಾಕ್ರೆ ಆಪ್ಲಾ ದವಾಖಾನಾವನ್ನು ಉದ್ಘಾಟಿಸಿದರು. ಮುಂಬೈನಲ್ಲಿ ಸುಮಾರು 400 ಕಿಲೋಮೀಟರ್ ಗಳ ರಸ್ತೆ ಕಾಂಕ್ರೀಟೀಕರಣ ಯೋಜನೆಗೆ ಚಾಲನೆ ನೀಡಿದರು.
ಹಿನ್ನೆಲೆ
ಪ್ರಧಾನಮಂತ್ರಿಯವರು ಮುಂಬೈ 1 ಮೊಬೈಲ್ ಅಪ್ಲಿಕೇಶನ್ ಮತ್ತು ರಾಷ್ಟ್ರೀಯ ಸಾಮಾನ್ಯ ಮೊಬಿಲಿಟಿ ಕಾರ್ಡ್ (NCMC) (ಮುಂಬೈ 1)ನ್ನು ಬಿಡುಗಡೆ ಮಾಡಿದರು. ಈ ಅಪ್ಲಿಕೇಶನ್ ಜನರ ಮೆಟ್ರೊ ಪ್ರಯಾಣವನ್ನು ಸುಲಭಗೊಳಿಸುತ್ತದೆ, ಮೆಟ್ರೋ ನಿಲ್ದಾಣಗಳ ಪ್ರವೇಶ ಗೇಟ್‌ಗಳಲ್ಲಿ ಕಾರ್ಡು ತೋರಿಸಬೇಕು. UPI ಮೂಲಕ ಟಿಕೆಟ್‌ಗಳನ್ನು ಖರೀದಿಸಲು ಡಿಜಿಟಲ್ ಪಾವತಿ ಮಾಡಬೇಕು. ರಾಷ್ಟ್ರೀಯ ಸಾಮಾನ್ಯ ಮೊಬಿಲಿಟಿ ಕಾರ್ಡ್ (ಮುಂಬೈ 1)ನ್ನು ಆರಂಭದಲ್ಲಿ ಮೆಟ್ರೋ ಕಾರಿಡಾರ್‌ಗಳಲ್ಲಿ ಬಳಸಲಾಗುವುದು. ಸ್ಥಳೀಯ ರೈಲುಗಳು ಮತ್ತು ಬಸ್‌ಗಳು ಸೇರಿದಂತೆ ಸಾಮೂಹಿಕ ಸಾರ್ವಜನಿಕ ಸಾರಿಗೆಯ ಇತರ ವಿಧಾನಗಳಿಗೆ ಮುಂದಿನ ದಿನಗಳಲ್ಲಿ ವಿಸ್ತರಿಸಬಹುದು. ಪ್ರಯಾಣಿಕರು ಬಹು ಕಾರ್ಡ್‌ಗಳು ಅಥವಾ ಹಣವನ್ನು ಒಯ್ಯುವ ಅಗತ್ಯವಿಲ್ಲ, ಮೆಟ್ರೊ ಪ್ರಯಾಣವನ್ನು ಸರಳಗೊಳಿಸುತ್ತದೆ. ಈ ಕಾರ್ಡ್ ತ್ವರಿತ, ಸಂಪರ್ಕರಹಿತ, ಡಿಜಿಟಲ್ ವಹಿವಾಟುಗಳನ್ನು ಸಕ್ರಿಯಗೊಳಿಸುತ್ತದೆ, ಇದರಿಂದಾಗಿ ತಡೆರಹಿತ ಅನುಭವದೊಂದಿಗೆ ಟಿಕೆಟ್ ಖರೀದಿಸುವ ಪ್ರಕ್ರಿಯೆಯನ್ನು ಸುಲಭಗೊಳಿಸುತ್ತದೆ.
*****
PM @narendramodi on board the Metro in Mumbai. pic.twitter.com/nE03O7nDmW
— PMO India (@PMOIndia) January 19, 2023
On board the Metro, which will boost ‘Ease of Living’ for the people of Mumbai. pic.twitter.com/JG4tHwAAXA
— Narendra Modi (@narendramodi) January 19, 2023