Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಮಹಾರಾಷ್ಟ್ರದ ಧುಲೆಗೆ ಪ್ರಧಾನಮಂತ್ರಿ ಭೇಟಿ; ಹಲವು ಅಭಿವೃದ್ಧಿ ಯೋಜನೆಗಳ ಉದ್ಘಾಟನೆ

ಮಹಾರಾಷ್ಟ್ರದ ಧುಲೆಗೆ ಪ್ರಧಾನಮಂತ್ರಿ ಭೇಟಿ; ಹಲವು ಅಭಿವೃದ್ಧಿ ಯೋಜನೆಗಳ  ಉದ್ಘಾಟನೆ

ಮಹಾರಾಷ್ಟ್ರದ ಧುಲೆಗೆ ಪ್ರಧಾನಮಂತ್ರಿ ಭೇಟಿ; ಹಲವು ಅಭಿವೃದ್ಧಿ ಯೋಜನೆಗಳ  ಉದ್ಘಾಟನೆ

ಮಹಾರಾಷ್ಟ್ರದ ಧುಲೆಗೆ ಪ್ರಧಾನಮಂತ್ರಿ ಭೇಟಿ; ಹಲವು ಅಭಿವೃದ್ಧಿ ಯೋಜನೆಗಳ  ಉದ್ಘಾಟನೆ


ಪಿಎಂಕೆಎಸ್ ವೈ ಅಡಿಯಲ್ಲಿ ಕೈಗೊಂಡ ತಗ್ಗು ಪ್ರದೇಶದ ಪಂಜಾರಾ ಮಧ್ಯಮ ಯೋಜನೆ ಉದ್ಘಾಟಿಸಿದ ಪ್ರಧಾನಮಂತ್ರಿ; ಸುಲ್ವಾಡೆ, ಜಂಪಾಲ್ ಕನೋಲಿ ಏತನೀರಾವರಿ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದ ಪ್ರಧಾನಮಂತ್ರಿ ; ಜಲಗಾಂವ್ – ಉಧಾನ್  ರೈಲ್ವೆ ಜೋಡಿಮಾರ್ಗ ಮತ್ತು ವಿದ್ಯುದೀಕರಣ ಯೋಜನೆಯನ್ನು ರಾಷ್ಟ್ರಕ್ಕೆ ಸಮರ್ಪಿಸಿದ ಪ್ರಧಾನಮಂತ್ರಿ; ಭುಸವಾಲ್ –ಬಾಂಧ್ರಾ-ಖಾಂದೇಶ್ ಎಕ್ಸ್ ಪ್ರೆಸ್ ರೈಲಿಗೆ ಹಸಿರು ನಿಶಾನೆ; ಪುಲ್ವಾಮಾ ಉಗ್ರರ ದಾಳಿ ನಂತರದ ಪ್ರತಿ ಹನಿ ಕಣ್ಣೀರಿಗೂ ಪ್ರತಿಕಾರ ತೀರಿಸಿಕೊಳ್ಳಲಾಗುವುದೆಂದು ಪ್ರಧಾನಿ ಹೇಳಿಕೆ
 
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಮಹಾರಾಷ್ಟ್ರದ ಧುಲೆಗೆ ಭೇಟಿ ನೀಡಿದ್ದರು, ಅವರು ರಾಜ್ಯದ ಹಲವು ಯೋಜನೆಗಳನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಹಾರಾಷ್ಟ್ರದ ರಾಜ್ಯಪಾಲರಾದ ಶ್ರೀ ಸಿ. ವಿದ್ಯಾಸಾಗರ್ ರಾವ್, ಕೇಂದ್ರ ಸಚಿವ ಶ್ರೀ ನಿತಿನ್ ಗಡ್ಕರಿ, ಕೇಂದ್ರ ರಕ್ಷಣಾ ಖಾತೆ ರಾಜ್ಯ ಸಚಿವ ಡಾ. ಸುಭಾಷ್ ಭಾಂಮ್ರೆ, ಮಹಾರಾಷ್ಟ್ರ ಮುಖ್ಯಮಂತ್ರಿ ಶ್ರೀ ದೇವೇಂದ್ರ ಫಡ್ನವೀಸ್ ಮತ್ತಿತರರು ಉಪಸ್ಥಿತರಿದ್ದರು.
 
ಪುಲ್ವಾಮಾದಲ್ಲಿ  ತಮ್ಮ ಜೀವಗಳನ್ನು ತ್ಯಾಗ ಮಾಡಿದ ಧೈರ್ಯಶಾಲಿ, ವಿಶಾಲ ಹೃದಯಿ ಯೋಧರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಪ್ರಧಾನಮಂತ್ರಿ, ಇಂತಹ ಶೋಕ ಮತ್ತು ದುಃಖದ ಅವಧಿಯಲ್ಲಿ ಇಡೀ ದೇಶ ಅವರ ಜೊತೆಗಿದೆ ಎಂದರು. ಉಗ್ರರ ದಾಳಿಯ ಸಂಚುಕೋರರಿಗೆ ಕಠಿಣ ಸಂದೇಶ ರವಾನಿಸಿದ ಅವರು, ಇತರೆಯವರ ವ್ಯವಹಾರದಲ್ಲಿ ಹಸ್ತಕ್ಷೇಪ ಮಾಡದಿರುವುದು ಭಾರತದ ನೀತಿಯಾಗಿದೆ. ಆದರೆ ಬೇರೊಬ್ಬರು ಭಾರತದ ವ್ಯವಹಾರಗಳ ಮಧ್ಯೆ ತಲೆಹಾಕಿದರೆ ಅದನ್ನು ಶಿಕ್ಷಿಸದೇ ಬಿಡಲಾಗದು ಎಂದರು. “ನಾನು ಭಾರತದ ಶೌರ್ಯವಂತ ಮಕ್ಕಳಿಗಷ್ಟೇ ನಮಿಸುವುದಿಲ್ಲ, ಅವರಿಗೆ ಜನ್ಮನೀಡಿದ ತಾಯಂದಿರಿಗೂ ನಮಿಸುತ್ತೇನೆ. ಪುಲ್ವಾಮ ದಾಳಿಯ ಸಂಚುಕೋರರನ್ನು ನ್ಯಾಯಕ್ಕೊಳಪಡಿಸಲಾಗುವುದು ಈಗಿನ ಭಾರತ ಹೊಸ ದೃಷ್ಟಿಕೋನ ಹೊಂದಿರುವ ಹೊಸ ಭಾರತ, ಮತ್ತು ಪ್ರತಿ ಹನಿ ಕಣ್ಣೀರಿಗೂ ಮುಯ್ಯಿ ತೀರಿಸಿಕೊಳ್ಳಲಾಗುವುದು ಎಂದು ಇಡೀ ಜಗತ್ತಿಗೆ ಅರ್ಥೈಸುತ್ತೇವೆ” ಎಂದು ಹೇಳಿದರು.
 
        ಪಿಎಂಕೆಎಸ್ ವೈ ಅಡಿಯಲ್ಲಿ ಕೈಗೊಳ್ಳಲಾದ ತಗ್ಗು ಪ್ರದೇಶದ ಪಂಜಾರಾ ಮಧ್ಯಮ ಯೋಜನೆಯನ್ನು ಪ್ರಧಾನಮಂತ್ರಿ ಉದ್ಘಾಟಿಸಿದರು. ಇದರಿಂದ ಧುಲೆ ಮತ್ತು ಸುತ್ತಮುತ್ತಲ ಪ್ರದೇಶಗಳ 21 ಗ್ರಾಮಗಳ 7585 ಹೆಕ್ಟೇರ್ ಪ್ರದೇಶಕ್ಕೆ ದೊರಕುವುದಲ್ಲದೆ, ನೀರಿನ ಕೊರತೆ ಇರುವ ಪ್ರದೇಶಕ್ಕೆ ಜೀವನಾಡಿಯಾಗಲಿದೆ.
 
ಪ್ರಧಾನಮಂತ್ರಿ ನೀರಾವರಿ ಯೋಜನೆ ಮಹಾರಾಷ್ಟ್ರದ ಧುಲೆ ಮತ್ತು ದೇಶದ ಇತರ ಭಾಗಗಳ ನೀರಾವರಿ ಸ್ಥಿತಿಗತಿ ಸುಧಾರಿಸುವ ದೃಷ್ಟಿಯಿಂದ ಕೈಗೆತ್ತಿಕೊಳ್ಳಲಾಯಿತು ಎಂದು ಹೇಳಿದರು. “ಕಳೆದ 4 ವರ್ಷಗಳಲ್ಲಿ 99 ನೀರಾವರಿ ಯೋಜನೆಗಳನ್ನು ಚುರುಕುಗೊಳಿಸಿ ಮುಕ್ತಾಯ ಗೊಳಿಸಲಾಗಿದೆ. ಅಂತಹ ಯೋಜನೆಗಳಲ್ಲಿ 26 ಯೋಜನೆಗಳು ಮಹಾರಾಷ್ಟ್ರಕ್ಕೆ ಸೇರಿದವುಗಳಾಗಿದ್ದು, ಅದರಲ್ಲಿ ಪಂಜಾರಾ ಯೋಜನೆಯೂ ಕೂಡ ಒಂದಾಗಿದೆ. 25 ವರ್ಷಗಳ ಹಿಂದೆ ಯೋಜನೆ ಕೇವಲ 21 ಕೋಟಿ ರೂಪಾಯಿಗಳೊಂದಿಗೆ ಆರಂಭವಾಗಿತ್ತು, ಇದೀಗ ಒಟ್ಟಾರೆ 500 ಕೋಟಿ ರೂಪಾಯಿ ವೆಚ್ಚದೊಂದಿಗೆ ಅದು ಮುಕ್ತಾಯವಾಗಿದೆ. ಇದು ಮಹಾರಾಷ್ಟ್ರದ ನೀರಿನ ಕೊರತೆ ಇರುವ ಪ್ರದೇಶಗಳಿಗೆ ನೀರೊದಗಿಸುವ ನಮ್ಮ ಪ್ರಯತ್ನಗಳ ಫಲವಾಗಿದೆ” ಎಂದು ಪ್ರಧಾನಿ ಹೇಳಿದರು.
 
ಪ್ರಧಾನಮಂತ್ರಿ ಅವರು ಜಲಗಾಂವ್-ಉಧಾನ ರೈಲ್ವೆ ಜೋಡಿ ಮಾರ್ಗ ಮತ್ತು ವಿದ್ಯುದೀಕರಣ
ಯೋಜನೆಯನ್ನು ರಾಷ್ಟ್ರಕ್ಕೆ ಸಮರ್ಪಿಸಿದರು. 2400 ಕೋಟಿ ರೂಪಾಯಿ ಮೊತ್ತದ ಈ ಯೋಜನೆಗೆ
ಕಳೆದ ನಾಲ್ಕು ವರ್ಷಗಳಲ್ಲಿ ಚುರುಕುಗೊಳಿಸಿ, ಕಾಮಗಾರಿ ಪೂರ್ಣಗೊಳಿಸಿ ಜನರು ಮತ್ತು ಸರಕು ಸಾಗಾಣೆಗೆ ಅನುವು ಮಾಡಿಕೊಡಲಾಗಿದೆ. ಉತ್ತರ ಮತ್ತು ದಕ್ಷಿಣ ಭಾರತದ ನಡುವೆ ಸಂಪರ್ಕ ಕಲ್ಪಿಸುವ ಈ ರೈಲು ಮಾರ್ಗ ಅದರ ಸುತ್ತಮುತ್ತಲ ಪ್ರದೇಶಗಳ ಅಭಿವೃದ್ಧಿಗೆ ನೆರವಾಗಲಿದೆ.
 
ಭುಸಾವಾಲ್-ಬಾಂದ್ರಾ ಖಾಂದೇಶ್ ಎಕ್ಸ್ ಪ್ರೆಸ್ ರೈಲು ಸಂಚಾರಕ್ಕೂ ಪ್ರಧಾನಮಂತ್ರಿ ಅವರು ವಿಡಿಯೋ ಲಿಂಕ್ ಮೂಲಕ ಹಸಿರು ನಿಶಾನೆ ತೋರಿದರು. ಈ ರೈಲು ಮುಂಬೈ ಮತ್ತು ಭುಸಾವಾಲ್ ನಡುವೆ ನೇರ ಸಂಪರ್ಕ ಕಲ್ಪಿಸಲಿದೆ. ಇದಲ್ಲದೆ ಪ್ರಧಾನಿ ಅವರು ನಾಂದುರ್ ಬಾರ್-ಉಧಾನ ಮತ್ತು ಉಧಾನ-ಪಲಡಿ ನಡುವೆ ಮೆಮೊ ರೈಲು ಸಂಚಾರಕ್ಕೂ ಹಸಿರು ನಿಶಾನೆ ತೋರಿದರು.
 
        ಧುಲೆ-ನಾರ್ದಾನ ನಡುವೆ 51 ಕಿಲೋಮೀಟರ್  ಉದ್ದದ ರೈಲು ಮಾರ್ಗ ಮತ್ತು ಜಲಗಾಂವ್-ಮನ್ಮದ್ ನಡುವೆ 107 ಕಿಲೋಮೀಟರ್ ಉದ್ದದ 3ನೇ ರೈಲು ಮಾರ್ಗ ಯೋಜನೆಗೂ ಪ್ರಧಾನಮಂತ್ರಿ ಅವರು ಚಾಲನೆ ನೀಡಿದರು. ಈ ಯೋಜನೆಗಳಿಂದ ಸಮಯ ನಿರ್ವಹಣೆ ಮತ್ತು ರೈಲು ಸಂಚಾರ ನಿರ್ವಹಣೆಗೆ ಸಹಕಾರಿಯಾಗಲಿದೆ.
 
        ಈ ಯೋಜನೆಗಳಿಂದ ಈ ಪ್ರದೇಶದಲ್ಲಿ ಅಭಿವೃದ್ಧಿ ಮತ್ತು ಸಂಪರ್ಕ ಹೆಚ್ಚಾಗುವುದಲ್ಲದೆ, ಸದ್ಯದಲ್ಲೇ ಅಭಿವೃದ್ಧಿಯಲ್ಲಿ ಧುಲೆ, ಸೂರತ್ ಗೆ ಪೈಪೋಟಿ ಒಡ್ಡಲಿದೆ ಎಂದು ಪ್ರಧಾನಮಂತ್ರಿ ಹೇಳಿದರು.
 
        ಪ್ರಧಾನಮಂತ್ರಿ ಅವರು, ಸುಲ್ವಾಡೆ ಜಂಪಾಲ್ ಕನೋಲಿ  ಏತ ನೀರಾವರಿ ಯೋಜನೆಯನ್ನೂ ಸಹ ಉದ್ಘಾಟಿಸಿದರು. ಇದರಡಿ ತಪಿ ನದಿಯಿಂದ ನೀರು ತಂದು ಅದನ್ನು ಜಲಾಶಯ, ಕೆರೆಗಳು ಮತ್ತು ಕಾಲುವೆಗಳಿಗೆ ಹರಿಸಲಾಗುವುದು, ಇದರಿಂದ ನೂರು ಗ್ರಾಮಗಳ ಒಂದು ಲಕ್ಷ ರೈತರಿಗೆ ಪ್ರಯೋಜನವಾಗಲಿದೆ.
 
        ಪ್ರಧಾನಮಂತ್ರಿ ಅವರು, ಇದೇ ಸಂದರ್ಭದಲ್ಲಿ ಸುಮಾರು 500 ಕೋಟಿ ರೂಪಾಯಿ ವೆಚ್ಚದಲ್ಲಿ ಅಮೃತ್ ಯೋಜನೆಯಡಿ ಧುಲೆ ಪಟ್ಟಣಕ್ಕೆ ನೀರು ಪೂರೈಕೆ ಯೋಜನೆ ಮತ್ತು ಒಳಚರಂಡಿ ಯೋಜನೆಗೂ ಶಂಕುಸ್ಥಾಪನೆ ನೆರವೇರಿಸಿದರು. ನೀರಿನ ಕೊರತೆ ಎದುರಿಸುತ್ತಿರುವ ಧುಲೆ ಪ್ರಾಂತ್ಯದ ಸಮಸ್ಯೆ ನಿವಾರಣೆಗೆ ಆ ಭಾಗಕ್ಕೆ ಸುರಕ್ಷಿತ ಕುಡಿಯುವ ನೀರು ಒದಗಿಸುವುದು ಈ ಜಲ ಯೋಜನೆಯ ಉದ್ದೇಶವಾಗಿದೆ.
 
        ಭಾರತದ ಪ್ರತಿಯೊಬ್ಬ ಪ್ರಜೆಯ ಜೀವನ ಸುಲಭ ಮತ್ತು ಉತ್ತಮಗೊಳಿಸುವ ನಿಟ್ಟಿನಲ್ಲಿ ತಮ್ಮ ಸರ್ಕಾರ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಮಹಾರಾಷ್ಟ್ರದ 70 ಸಾವಿರ ರೋಗಿಗಳೂ ಮತ್ತು ಧುಲೆಯ 1800 ರೋಗಿಗಳು ಸೇರಿ ಅತ್ಯಲ್ಪ ಅವಧಿಯಲ್ಲಿಯೇ ಸುಮಾರು 12 ಲಕ್ಷ ರೋಗಿಗಳು ಆಯುಷ್ಮಾನ್ ಭಾರತ್ ಯೋಜನೆಯ ಲಾಭ ಪಡೆದಿದ್ದಾರೆ. ಬಡವರು ಹಾಗೂ ಮಧ್ಯಮ ವರ್ಗದ ಜನರಿಗೆ ಈ ಯೋಜನೆ ಆಶಾಕಿರಣವಾಗಿದೆ ಎಂದರು.
**************