Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಮಹಾನ್ ತಮಿಳು ಕವಿ ಮತ್ತು ಸ್ವಾತಂತ್ರ್ಯ ಹೋರಾಟಗಾರ ಸುಬ್ರಹ್ಮಣ್ಯ ಭಾರತಿ ಅವರ ಸಂಪೂರ್ಣ ಕೃತಿಗಳ ಸಂಕಲನ 2024ರ  ಡಿಸೆಂಬರ್ 11 ರಂದು ಪ್ರಧಾನಮಂತ್ರಿ ಅವರಿಂದ ಬಿಡುಗಡೆ


ಮಹಾನ್ ತಮಿಳು ಕವಿ ಮತ್ತು ಸ್ವಾತಂತ್ರ್ಯ ಹೋರಾಟಗಾರ ಸುಬ್ರಮಣ್ಯ ಭಾರತಿ ಅವರ ಸಂಪೂರ್ಣ ಕೃತಿಗಳ ಸಂಕಲನವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಬಿಡುಗಡೆ ಮಾಡಲಿದ್ದಾರೆ. ನವದೆಹಲಿಯ 7 ಲೋಕ್ ಕಲ್ಯಾಣ್ ಮಾರ್ಗ್ ನಲ್ಲಿ ಡಿಸೆಂಬರ್ 11 ರಂದು ಮಧ್ಯಾಹ್ನ 1 ಗಂಟೆಗೆ ಕಾರ್ಯಕ್ರಮ ಆಯೋಜನೆಯಾಗಿದೆ‌.

ಸುಬ್ರಮಣ್ಯ ಭಾರತಿಯವರ ಬರಹಗಳು ಜನರಲ್ಲಿ ದೇಶಪ್ರೇಮವನ್ನು ತುಂಬುವ ಜೊತೆಗೆ, ಜನಸಾಮಾನ್ಯರು ಅರ್ಥೈಸಿಕೊಳ್ಳಬಹುದಾದ ಸರಳ ಭಾಷೆಯಲ್ಲಿ ಭಾರತೀಯ ಸಂಸ್ಕೃತಿ ಮತ್ತು ದೇಶದ ಆಧ್ಯಾತ್ಮಿಕ ಪರಂಪರೆಯ ಸಾರವನ್ನು ಹೇಳಿವೆ. ಸೀನಿ ವಿಶ್ವನಾಥನ್ ಅವರು ಸಂಕಲನ ಮಾಡಿ ಸಂಪಾದಿಸಿರುವ ಸುಬ್ರಹ್ಮಣ್ಯ ಭಾರತಿ ಅವರ ಸಂಪೂರ್ಣ ಕೃತಿಗಳ  23 ಸಂಪುಟಗಳನ್ನು ಅಲಯನ್ಸ್ ಪ್ರಕಾಶನ ಪ್ರಕಟಿಸಿದೆ. ಇದು ಸುಬ್ರಮಣ್ಯ ಭಾರತಿಯವರ ಬರಹಗಳ ಆವೃತ್ತಿಗಳು, ವಿವರಣೆಗಳು, ದಾಖಲೆಗಳು, ಹಿನ್ನೆಲೆ ಮಾಹಿತಿ ಮತ್ತು ತಾತ್ವಿಕ ಪ್ರಸ್ತುತಿಗಳ ವಿವರಗಳನ್ನು ಒಳಗೊಂಡಿದೆ.

 

*****