Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಮಲೇಷ್ಯಾದ ಸಂಸತ್ ಸದಸ್ಯ ಡಾತಕ್ ಸೆರಿ ಅನ್ವರ್ ಇಬ್ರಾಹಿಂ ಅವರು ಪ್ರಧಾನಮಂತ್ರಿ ಅವರನ್ನು ಭೇಟಿಯಾದರು.

ಮಲೇಷ್ಯಾದ ಸಂಸತ್ ಸದಸ್ಯ ಡಾತಕ್ ಸೆರಿ ಅನ್ವರ್ ಇಬ್ರಾಹಿಂ ಅವರು ಪ್ರಧಾನಮಂತ್ರಿ ಅವರನ್ನು ಭೇಟಿಯಾದರು.

ಮಲೇಷ್ಯಾದ ಸಂಸತ್ ಸದಸ್ಯ ಡಾತಕ್ ಸೆರಿ ಅನ್ವರ್ ಇಬ್ರಾಹಿಂ ಅವರು ಪ್ರಧಾನಮಂತ್ರಿ ಅವರನ್ನು ಭೇಟಿಯಾದರು.

ಮಲೇಷ್ಯಾದ ಸಂಸತ್ ಸದಸ್ಯ ಮತ್ತು ಮಲೇಷ್ಯಾದ ಪಾರ್ಟಿ ಕೀಡಿಲಾನ್ ರಕ್ಯಾತ್ ನ ನಾಯಕ ಶ್ರೀ ಡಾತಕ್ ಸೆರಿ ಅನ್ವರ್ ಇಬ್ರಾಹಿಂ ಅವರು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿಯಾದರು.

 PM India

ಮಲೇಷ್ಯನ್ ಸಂಸತ್ತಿನ ಇಬ್ಬರು ಸದಸ್ಯರಾದ ಗೌ. ಶ್ರೀ ಕೆಸವನ್ ಸುಬ್ರಮನಿಯನ್ ಮತ್ತು ಗೌ. ಶ್ರೀ ಸಂತಾರ ಕುಮಾರ್ ರಾಮನಾಯ್ಡು ಅವರೂ ಶ‍್ರೀ ಇಬ್ರಾಹಿಮ್ ಅವರ ಜತೆಗಿದ್ದರು.

ಇತ್ತೀಚೆಗೆ ಪಿ.ಕೆ.ಆರ್ ಪಕ್ಷದ ಅಧ್ಯಕ್ಷರಾಗಿ ಚುನಾಯಿತರಾದ ಶ್ರೀ.ಇಬ್ರಾಹಿಂ ಅವರನ್ನು ಪ್ರಧಾನಮಂತ್ರಿ ಅವರು ಅಭಿನಂದಿಸಿದರು. ಮಲೇಷ್ಯಾದಲ್ಲಿ ಮೇ, 2018ರಲ್ಲಿ ಅವರನ್ನು ಕೊನೆಯ ಬಾರಿಗೆ ಭೇಟಿ ಮಾಡಿದ್ದನ್ನು ಪ್ರಧಾನಮಂತ್ರಿ ಅವರು ಈ ಸಂದರ್ಭದಲ್ಲಿ ಸ್ಮರಿಸಿಕೊಂಡರು. ಮಲೇಷ್ಯಾದ ಪ್ರಧಾನಮಂತ್ರಿ ಘನತೆವೆತ್ತ ತುನ್ ಡಾ. ಮಹಾತಿರ್ ಮೊಹಮದ್ ಅವರಿಗೆ ತಮ್ಮ ಹೃದಯಪೂರ್ವಕ ಅಭಿನಂದನೆಗಳನ್ನು ತಿಳಿಸಲು ಹೇಳಿದರು.

ಪರಸ್ಪರ ಆಸಕ್ತಿಯ ದ್ವಿಪಕ್ಷೀಯ, ಪ್ರಾಂತೀಯ ಮತ್ತು ಜಾಗತಿಕ ವಿಷಯಗಳ ಕುರಿತು ಇಬ್ಬರೂ ನಾಯಕರು ಚರ್ಚೆ ನಡೆಸಿದರು.