Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಮಲೇಷಿಯಾದ ಉಪ ಪ್ರಧಾನಮಂತ್ರಿ ಮತ್ತು ಗೃಹ ಸಚಿವ ಡೆಟೋ ಸೆರಿ ಡಾ. ಅಹ್ಮದ್ ಜಾಹಿದ್ ಹಮಿದಿ ಅವರಿಂದ ಪ್ರಧಾನಿ ಭೇಟಿ

ಮಲೇಷಿಯಾದ ಉಪ ಪ್ರಧಾನಮಂತ್ರಿ ಮತ್ತು ಗೃಹ ಸಚಿವ ಡೆಟೋ ಸೆರಿ ಡಾ. ಅಹ್ಮದ್ ಜಾಹಿದ್ ಹಮಿದಿ ಅವರಿಂದ ಪ್ರಧಾನಿ ಭೇಟಿ


ಮಲೇಷಿಯಾದ ಉಪ ಪ್ರಧಾನಮಂತ್ರಿ ಮತ್ತು ಗೃಹ ಸಚಿವ ಡೆಟೋ ಸೆರಿ ಡಾ. ಅಹ್ಮದ್ ಜಾಹಿದ್ ಹಮಿದಿ ಅವರಿಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು.
ಈ ಸಂದರ್ಭದಲ್ಲಿ ಪ್ರಧಾನಮಂತ್ರಿಯವರು, ಆಸಿಯಾನ ಮತ್ತು ಸಂಬಂಧಿತ ಶೃಂಗ ಸಭೆ ಹಾಗೂ ದ್ವಿಪಕ್ಷೀಯ ಮಾತುಕತೆಗಾಗಿ ಕಳೆದ ವರ್ಷ ತಾವು ಕೈಗೊಂಡಿದ್ದ ಯಶಸ್ವೀ ಮಲೇಷಿಯಾ ಭೇಟಿಯನ್ನು ಸ್ಮರಿಸಿದರು.

ಡಾ. ಅಹ್ಮದ್ ಜಾಹಿದ್ ಹಮಿದಿ ಅವರು ಪ್ರಧಾನಮಂತ್ರಿಯವರಿಗೆ ಭಯೋತ್ಪಾದನೆ ತಡೆ, ಸೈಬರ್ ಭದ್ರತೆ ಮತ್ತು ಬಹುರಾಷ್ಟ್ರೀಯ ಅಪರಾಧ ತಡೆ ಕ್ಷೇತ್ರಗಳಲ್ಲಿನ ದ್ವಿಪಕ್ಷೀಯ ಸಹಕಾರ ಕುರಿತಂತೆ ವಿವರಿಸಿದರು.

ಹತ್ತಿರದ ಭವಿಷ್ಯದಲ್ಲಿ ಭಾರತಕ್ಕೆ ಭೇಟಿ ನೀಡುವಂತೆ ಮಲೇಷಿಯಾದ ಪ್ರಧಾನಮಂತ್ರಿಯವರಿಗೆ ತಾವು ನೀಡಿರುವ ಆಹ್ವಾನದ ಬಗ್ಗೆ ಪ್ರಧಾನಮಂತ್ರಿ ಪುನರ್ ಪ್ರಸ್ತಾಪಿಸಿದರು.