Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಮನ್ ಕಿ ಬಾತ್ ಗೆ ಮಾಹಿತಿ ಮತ್ತು ಚಿಂತನೆಗಳನ್ನು ಆಹ್ವಾನಿಸಿದ ಪ್ರಧಾನಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮುಂಬರುವ 2022ರ ಸೆಪ್ಟಂಬರ್ 25ರಂದು ಬೆಳಿಗ್ಗೆ 11 ಗಂಟೆಗೆ ನಿಗದಿಯಾಗಿರುವ ‘ಮನ್ ಕಿ ಬಾತ್’  ಸಂಚಿಕೆಗಾಗಿ ಜನರಿಂದ ಚಿಂತನೆ ಹಾಗೂ ಅಭಿಪ್ರಾಯಗಳನ್ನು ಕೋರಿದ್ದಾರೆ. ಚಿಂತನೆಗಳನ್ನು ಮೈಗೌ MyGov, ನಮೋ ಆಪ್ Namo App, ಅಥವಾ ದೂರವಾಣಿ ಸಂಖ್ಯೆ 1800-11-7800 ಗೆ ಕರೆ ಮಾಡಿ ಸಂದೇಶವನ್ನು ದಾಖಲಿಸಬಹುದು. ಯಾರು ಬೇಕಾದರೂ 1922 ಗೆ ಮಿಸ್ಡ್ ಕಾಲ್ ನೀಡಬಹುದು ಮತ್ತು ಪ್ರಧಾನ ಮಂತ್ರಿಗೆ ನೇರವಾಗಿ ಸಲಹೆಗಳನ್ನು ನೀಡಲು ಎಸ್ ಎಂಎಸ್ ನಲ್ಲಿ ಸ್ವೀಕರಿಸಿದ ಲಿಂಕ್ ಬಳಸಿ ನೀಡಬಹುದು.

ಮೈ ಗೌ ನಲ್ಲಿ ಕರೆಯನ್ನು ನೀಡಿರುವ ಪ್ರಧಾನಮಂತ್ರಿ ಟ್ವೀಟ್ ನಲ್ಲಿ ಹೀಗೆ ಹೇಳಿದ್ದಾರೆ.
 

“ಭಾರತದಾದ್ಯಂತ ವೈವಿಧ್ಯಮಯ ಮಾಹಿತಿ ಮತ್ತು ಸ್ಫೂರ್ತಿದಾಯಕ ಸಾಮೂಹಿಕ ಪ್ರಯತ್ನಗಳಿಂದ ಸಮೃದ್ಧವಾಗಿರುವ ಮನ್ ಕಿ ಬಾತ್ ನಮ್ಮ ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ತಂದಿದೆ.
ಎಂದಿನಂತೆ ಇದೇ 25 ರಂದು
ನಡೆಯಲಿರುವ ತಿಂಗಳ ಸಂಚಿಕೆಗಾಗಿ ನಿಮ್ಮಿಂದ ಮಾಹಿತಿಯನ್ನು ಸ್ವೀಕರಿಸಲು ನಾನು ಎದುರು ನೋಡುತ್ತಿದ್ದೇನೆ’’

https://www.mygov.in/group-issue/inviting-ideas-mann-ki-baat-prime-minister-narendra-modi-25th-september-2022/?target=inapp&type=group_issue&nid=334031

 

*****