ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2025ರ ಮಾರ್ಚ್ 30 ರಂದು ಪ್ರಸಾರವಾಗಲಿರುವ ಮನ್ ಕಿ ಬಾತ್ ಕಾರ್ಯಕ್ರಮಕ್ಕೆ ನಾಗರಿಕರಿಂದ ಸಲಹೆ ಮತ್ತು ಮಾಹಿತಿಯನ್ನು ಆಹ್ವಾನಿಸಿದ್ದಾರೆ.
ಈ ತಿಂಗಳ ಮನದ ಮಾತು ಸಂಚಿಕೆಗಾಗಿ ವ್ಯಾಪಕ ಶ್ರೇಣಿಯ ಮಾಹಿತಿಗಳು ಹರಿದುಬರುತ್ತಿದೆ ಎಂದು ಶ್ರೀ ಮೋದಿ ಅವರು ಸಂತಸ ವ್ಯಕ್ತಪಡಿಸಿದ್ದಾರೆ.
ಪ್ರಧಾನಮಂತ್ರಿಗಳು ಎಕ್ಸ್ ಪೋಸ್ಟ್ ನಲ್ಲಿ ಹೀಗೆ ಹೇಳಿದ್ದಾರೆ:
“ಈ ತಿಂಗಳ 30 ರಂದು ಪ್ರಸಾರವಾಗಲಿರುವ #MannKiBaat ಕಾರ್ಯಕ್ರಮಕ್ಕಾಗಿ ಅನೇಕ ಮಾಹಿತಿ ಸ್ವೀಕರಿಸಿ ಸಂತೋಷವಾಗಿದೆ. ಈ ಸಲಹೆ/ಮಾಹಿತಿಗಳು ಸಾಮಾಜಿಕ ಒಳಿತಿಗಾಗಿ ಸಂಘಟಿತ ಪ್ರಯತ್ನದ ಶಕ್ತಿಯ ಸಂಕೇತವಾಗಿವೆ. ಈ ಸಂಚಿಕೆಗಾಗಿ ಜನರು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ತಮ್ಮ ಆಲೋಚನೆಗಳನ್ನು ಹಂಚಿಕೊಳ್ಳುವಂತೆ ನಾನು ಆಹ್ವಾನಿಸುತ್ತೇನೆ.
*****
Happy to be getting a wide range of inputs for this month's #MannKiBaat, which will take place on the 30th. These inputs highlight the power of collective efforts for social good. I invite more people to share their ideas for the episode. https://t.co/anPo1hmZ5k
— Narendra Modi (@narendramodi) March 24, 2025