Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಪ್ರಸ್ತಾಪಿಸಬಹುದಾದ ವಿಷಯಾಂಶಗಳನ್ನು  ಹಂಚಿಕೊಳ್ಳುವಂತೆ ಜನರನ್ನು ಆಹ್ವಾನಿಸಿದ ಪ್ರಧಾನ ಮಂತ್ರಿಗಳು


ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರು ಡಿ. 25ರಂದು  ಬೆಳಗ್ಗೆ 11ಕ್ಕೆ ನಡೆಸಿಕೊಡಲಿರುವ ಮನ್ ಕಿ ಬಾತ್ ಕಾರ್ಯಕ್ರಮ ಅವತರಿಣಿಕೆಗೆ ಜನರು ವಿಷಯಾಂಶಗಳನ್ನು ಹಂಚಿಕೊಳ್ಳುವಂತೆ‌ ಆಹ್ವಾನಿಸಿದ್ದಾರೆ. ಪ್ರಧಾನ ಮಂತ್ರಿ ಶ್ರೀ ಮೋದಿಯವರು ನಮೋ ಆ್ಯಪ್ , ಮೈಗೌನಲ್ಲಿ(MyGov) ಅಭಿಪ್ರಾಯ ಹಂಚಿಕೊಳ್ಳಲು ಅಥವಾ ಟೋಲ್ ಫ್ರೀ ಸಂಖ್ಯೆ 1800-11-7800 ಗೆ ಧ್ವನಿ ಸಂದೇಶ ರವಾನಿಸುವಂತೆ ಕೋರಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ಪ್ರಧಾನ ಮಂತ್ರಿಗಳು,

“2022ನೇ ವರ್ಷದ ಕೊನೆಯ ಮನ್ ಕಿ ಬಾತ್  ಕಾರ್ಯಕ್ರಮ ಡಿ.25 ರಂದು ನಡೆಯಲಿದೆ. ಈ ಕಾರ್ಯಕ್ರಮಕ್ಕೆ ನಿಮ್ಮಿಂದಲೇ ವಿಷಯಗಳನ್ನು ಪಡೆಯಲು ಕಾತುರದಿಂದಿದ್ದೇನೆ. ನಮೋ ಆ್ಯಪ್ , ಮೈಗೌನಲ್ಲಿ ಅಭಿಪ್ರಾಯ ಹಂಚಿಕೊಳ್ಳಲು ಅಥವಾ 1800-11-7800 ಟೋಲ್ ಫ್ರೀ ಸಂಖ್ಯೆಗೆ ಧ್ವನಿ ಸಂದೇಶ ಕಳುಹಿಸಿವಂತೆ ಕೋರುತ್ತೇನೆ” ಎಂದು ಮನವಿ ಮಾಡಿದ್ದಾರೆ.

***